VISHWA KANNADIGA NEWS - ವಿಶ್ವ ಕನ್ನಡಿಗ ನ್ಯೂಸ್

ವಿಶ್ವ ಕನ್ನಡಿಗ ನ್ಯೂಸ್ ಈಗ ಹೊಸ ತಾಣದಲ್ಲಿ

ಆತ್ಮೀಯ ಓದುಗರೇ ವಿಶ್ವ ಕನ್ನಡಿಗ ನ್ಯೂಸ್ ಓದಲು ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿರಿ...





http://www.vknewz.com

May 16, 2010

ಗ್ರಾ.ಪಂ. ಚುನಾವಣೆ: ಮತ ಎಣಿಕೆ ದಿನದಂದು ವಿಜಯೋತ್ಸವಕ್ಕೆ ನಿಷೇಧ

ಉಡುಪಿ, ಮೇ 15: ಜಿಲ್ಲೆಯ ಗ್ರಾ.ಪಂ. ಚುನಾವಣೆಗೆ ಸಂಬಂಧಿಸಿದಂತೆ ಮತ ಎಣಿಕೆ ಕಾರ್ಯ ಮೇ 17ರಂದು ಜಿಲ್ಲೆಯ 3 ತಾಲೂಕು ಕೇಂದ್ರಗಳಲ್ಲಿ ನಡೆಯಲಿದೆ.
ಮತ ಎಣಿಕೆ ಕಾರ್ಯ ಸುಸೂತ್ರವಾಗಿ ನಡೆಯಲು ಅನುಕೂಲವಾಗುವಂತೆ ಹಾಗೂ ಈ ಸಂದರ್ಭ ಶಾಂತಿ ಸುವ್ಯವಸ್ಥೆ ಕಾಪಾಡುವುದಕ್ಕಾಗಿ ಸಾರ್ವಜನಿಕ ಹಿತದಷ್ಟಿಯಿಂದ ಮೇ 17ರ ಬೆಳಗ್ಗೆ 6 ಗಂಟೆಯಿಂದ ಮೇ 18ರ ಮಧ್ಯರಾತ್ರಿ 12 ಗಂಟೆಯವರೆಗೆ ಉಡುಪಿ ಜಿಲ್ಲಾದ್ಯಂತ ಸೆಕ್ಷನ್ 144ರ ಅಡಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ಉಡುಪಿ ಜಿಲ್ಲಾ ಪ್ರಭಾರ ಜಿಲ್ಲಾಧಿಕಾರಿ ಟಿ.ಎಂ.ಪ್ರಭಾಕರ್ ಆದೇಶ ಹೊರಡಿಸಿದ್ದಾರೆ.


ಮತ ಎಣಿಕೆಗೆ ಬಂಟ್ವಾಳ ಸಿದ್ಧ
ಬಂಟ್ವಾಳ: ಭಾರಿ ಕುತೂಹಲ ಕೆರಳಿಸಿರುವ ಗ್ರಾ.ಪಂ. ಚುನಾವಣೆಯ ಮತ ಎಣಿಕೆ ಕಾರ್ಯ ಮೇ 17ರಂದು ನಡೆಯಲಿದ್ದು, ಬಂಟ್ವಾಳದಲ್ಲೂ ಪೂರ್ವ ಸಿದ್ಧತೆ ಭರದಿಂದ ನಡೆದಿದೆ. ಮೊಡಂಕಾಪುವಿನ ಇನ್ಫಂಟ್ ಜೇಸಸ್ ಪ್ರೌಢಶಾಲೆಯಲ್ಲಿ ಮೇ 17ರಂದು ಬೆಳಗ್ಗೆಯಿಂದಲೇ ಮತ ಎಣಿಕೆ ಕಾರ್ಯ ನಡೆಯಲಿದ್ದು, ಇದಕ್ಕಾಗಿ 23 ಕೊಠಡಿಗಳನ್ನು ಸಜ್ಜುಗೊಳಿಸಲಾಗಿದೆ.
2 ಹಂತಗಳಲ್ಲಿ ಎಣಿಕೆ ಕಾರ್ಯ ನಡೆಯಲಿದ್ದು, ಪ್ರತಿ ಕೊಠಡಿಯಲ್ಲಿ 2 ಪಂಚಾಯತ್‌ನ ಮತ ಎಣಿಕೆ ಕಾರ್ಯ ನಡೆಸುವ ರೀತಿಯಲ್ಲಿ ಸಿದ್ಧತೆಗಳು ನಡೆದಿದೆ.
ಒಟ್ಟು 150 ಮೇಜುಗಳಲ್ಲಿ ಎಣಿಕೆ ಕಾರ್ಯ ನಡೆಯಲಿದ್ದು, ಪ್ರತಿ ಮೇಜುಗೆ 3 ಮಂದಿ ಎಣಿಕೆ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ.

No comments: