ನಕ್ಸಲರ ಘೋರ ಕೃತ್ಯದ ಕರಿನೆರಳಿನ ನಡುವೆಯೂ ಕೋಲ್ಕತ್ತಾ ನಗರ ಪಾಲಿಕೆ ಸೇರಿದಂತೆ ಪಶ್ಚಿಮ ಬಂಗಾಳದ 81 ನಗರ ಸಭೆಗಳ ಚುನಾವಣೆ ಶಾಂತರೀತಿಯಿಂದ ನಡೆದರೂ, ಅಲ್ಲಲ್ಲಿ ಕೆಲ ಭಾರೀ ಗಲಭೆಯೂ ನಡೆದಿದೆ.
ಸಿಪಿಎಂ ಕಾರ್ಯಕರ್ತರು ಹಾಗೂ ತೃಣಮೂಲ ಕಾಂಗ್ರೆಸ್ ನಡುವೆ ನಡೆದ ಮಾರಾಮಾರಿಯಲ್ಲಿ ತೃಣಮೂಲ ಕಾಂಗ್ರೆಸ್‌ನ ಅಭ್ಯರ್ಥಿಯೂ ಸೇರಿದಂತೆ ಕೆಲವರಿಗೆ ಗಾಯಗಳಾಗಿವೆ.
ಬುರ್ಡ್ವಾನ್ ಪ್ರದೇಶದಲ್ಲಿ ನಡೆದ ಸಿಪಿಎಂ ಹಾಗೂ ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರ ನಡುವೆ ನಡೆದ ಗಲಭೆಯಲ್ಲಿ ಇಬ್ಬರು ಪೊಲೀಸರು ಸೇರಿದಂತೆ ಒಂಬತ್ತು ಮಂದಿ ತೃಣಮೂಲ ಕಾಂಗ್ರೆಸ್ ಕಾರ್.ಕರ್ತರು ಗಾಯಗೊಂಡಿದ್ದಾರೆ.
ಸಿರ್ಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲೂ ಗಲಭೆ ನಡೆದಿದ್ದು, ವ್ಯಾಪಕ ಕಲ್ಲುತೂರಾಟ ನಡೆದಿದೆ. ಈ ವೇಳೆ ಸಿರ್ಪುರ ಠಾಣಾ ಮುಖ್ಯ ಪೊಲೀಸ್ ಅಧಿಕಾರಿ ಹಾಗೂ ಮತ್ತೊಬ್ಬ ಪೊಲೀಸ್ ಗಾಯಗೊಂಡಿದ್ದಾರೆ. ಹಲವಾರು ಜೀಪುಗಳು ಹಾನಿಗೊಳಗಾಗಿದ್ದು, ಈ ವೇಳೆ ಬಾಂಬುಗಳನ್ನೂ ಸ್ಫೋಟಿಸಿ ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು.
ಪೊಲೀಸರು ಪರಿಸ್ಥಿತಿಯನ್ನು ವಿಕೋಪಕ್ಕೆ ಹೋಗದಂತೆ ತಡೆಯಲು ಅಲ್ಲಲ್ಲಿ ಲಾಠಿ ಚಾರ್ಜ್ ನಡೆಸಿದ ಘಟನೆಯೂ ನಡೆದಿದೆ. ಇದೀಗ ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದು, ಸದ್ಯ ಪರಿಸ್ಥಿತಿ ಶಾಂತವಾಗಿದೆ.
Subscribe to:
Post Comments (Atom)
No comments:
Post a Comment