
ಮಂಗಳೂರು: ವಿಮಾನ ಅಪಘಾತದಲ್ಲಿ ಮಡಿದ ಮೃತ ದೇಹಗಳನ್ನು ಹುಡುಕುತ್ತಾ ಅದನ್ನು ಸಂಬಂಧ ಪಟ್ಟವರಿಗೆ ವಿಲೇವಾರಿ ಮಾಡುವಲ್ಲಿ ಜಾತಿ ಮತ ಧರ್ಮದ ಎಲ್ಲೆಗಳನ್ನು ಮೀರಿ ಶ್ರಮಿಸಿದ ಮಂಜೇಶ್ವರದ ಸಮಾಜ ಸೇವಕ ಅಬ್ದುಲ್ ಹಮೀದ್ ಅಲಿ (೬೦) (ಅಮ್ಮಿಚ್ಚ) ಮಾನವ ಸಮಾಜಕ್ಕೆ ಒಬ್ಬ ಮಾದರಿ ಮನುಷ್ಯರಾಗಿದ್ದಾರೆ. ವಿಮಾನ ಅಪಘಾತದ ಸುದ್ಧಿ ತಿಳಿಯುತ್ತಿದ್ದಂತೆ ಮಂಜೇಶ್ವರದ ತನ್ನ ಮನೆಯಿಂದ ಮಂಗಳೂರು ತಲುಪಿದ ಅಮ್ಮಿಚ್ಚ ವೆನ್ಲಾಕ್ ಆಸ್ಪತ್ರೆಗೆ ಮೊದಲ ಶವ ಬಂದಾಗ ಅದನ್ನು ಇಳಿಸಿ ಶವಾಗಾರಕ್ಕೆ ಕೊಂಡೊಯ್ಯುದರಿಂದ ತಮ್ಮನ್ನು ಈ ದುರಂತ ಪೀಡಿತರ ಸೇವೆಯಲ್ಲಿ ತೊಡಗಿಸಿಕೊಂಡರು.
ಆನಂತರ ಅಂಬುಲೆನ್ಸ್ ನಲ್ಲಿ ಬರುತಿದ್ದ ಸುಟ್ಟು ಕರಕಲಾದ ಶವಗಳನ್ನು ಆಸ್ಪತ್ರೆಗೆ ಸಾಗಿಸುತ್ತಾ ಆನಂತರ ಆ ಶವಗಳನ್ನು ಹುಡುಕಲು ವಾರಿಸುದಾರರಿಗೆ ನೆರವಾಗುತ್ತಾ ಪತ್ತೆ ಹಚ್ಚಲ್ಪಟ್ಟ ಶವಗಳನ್ನು ಆನಂತರ ಮೃತ ಸಂಬಂಧಿಕರ ವಾಹನಗಳಿಗೆ ಸಾಗಿಸುತಿದ್ದ ಅಮ್ಮಿಚ್ಚ ದಣಿದ ಮೃತರ ಬಂಧುಗಳಿಗೆ ಕುಡಿಯಲು ನೀರು ಕೊಡುತ್ತಾ ಅವರನ್ನು ಸಂತೈಸುತಿದ್ದ ದೃಶ್ಯಗಳೂ ಕಾಣಸಿಕ್ಕವು
ವೃತ್ತಿಯಲ್ಲಿ ಒಂದು ಕೋಳಿ ಅಂಗಡಿ ಮಾಲಿಕರಾಗಿರುವ ಇವರು ತಮ್ಮ ತಾಯ್ನಾಡು ಮಂಜೇಶ್ವರ ಸುತ್ತ ಮುತ್ತ ನಡೆಯುವ ಎಲ್ಲಾ ರೀತಿಯ ಸಾಮಾಜಿಕ ಚಟುವಟಿಕೆಯಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಳ್ಳುತ್ತಾರೆ. ನನ್ನ ಮಕ್ಕಳು ಇದೀಗ ದೊಡ್ಡವರಾಗಿ ತಮ್ಮ ಕಾಲ ಮೇಲೆ ನಿಂತಿದ್ದು ನನಗೆ ದೇವರ ದಯೆಯಿಂದ ಯಾವುದೇ ಸಮಸ್ಯೆಯಿಲ್ಲ . ಜನರು ಸಂಕಷ್ಟದಲ್ಲಿರುವಾಗ ನಾನು ಹಾಯಾಗಿ ನನ್ನ ಮನೆ ಅಥವಾ ಅಂಗಡಿಯಲ್ಲಿ ಕುಳಿತು ಕೊಳ್ಳಲು ನನ್ನ ಮನಸ್ಸು ಒಪ್ಪುವುದಿಲ್ಲ. ಆದರಿಂದ ಈ ರೀತಿಯ ಕೆಲಸಲ್ಲಿ ತಮ್ಮನ್ನು ತೊಡಗಿಸಿ ಕೊಂಡಿರುವುದಾಗಿ ತಿಳಿಸಿದರು
No comments:
Post a Comment