
ನವದೆಹಲಿ: ಕರ್ಕರೆಯನ್ನು ಕೊಂದವರು ಯಾರು ? ಎಂಬ ಪುಸ್ತಕದಿಂದ ಪ್ರೇರಿತರಾದ ಬಿಹಾರದ ಮಾದೇಪುರದ ಮಾಜಿ ಶಾಸಕ ಲೋಹಿಯಾವಾದಿ ರಾಧಾಕಾಂತ್ ಯಾದವ್ ಇವರ ಸಾವಿನ ಬಗ್ಗೆ ಹಾಲಿ ಅಥವಾ ಮಾಜಿ ಮುಖ್ಯ ನ್ಯಾಯಾಧೀಶರೋರ್ವರಿಂದ ತನಿಖೆ ನಡೆಸುವಂತೆ ಒತ್ತಾಯಿಸಿ ಸುಪ್ರೀಂ ಕೋರ್ಟಿನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿದ್ದಾರೆ. ಆದರೆ ಇವರ ಅರ್ಜಿಯನ್ನು ಪರಿಶೀಲಿಸಿದ ಸುಪ್ರೀಂ ಕೋರ್ಟ್ ಈ ಬಗ್ಗೆ ಹೈ ಕೋರ್ಟಿನಲ್ಲಿ ಅರ್ಜಿ ಸಲ್ಲಿಸುವಂತೆ ಸೂಚಿಸಿದೆ. ಮಹಾರಾಷ್ಟ್ರದ ನಿವೃತ್ತ ಪೋಲಿಸ್ ಮಹಾನಿರ್ದೇಶಕರಾದ ಎಸ್.ಎಂ. ಮುಶ್ರಿಫ್ ಬರೆದಿರುವ ಹೂ ಕಿಲ್ದ್ ಕರ್ಕರೆ ? ಪುಸ್ತಕವು ಕರ್ಕರೆಯ ಹತ್ಯೆಯ ಬಗ್ಗೆ ಸಂಶಯವನ್ನು ವ್ಯಕ್ತಪದಿಸುತಿದ್ದು ೨೬/೧೧ ರಂದು ೨ ರೀತಿಯ ಭಯೋತ್ಪಾದಕ ದಾಳಿ ನಡೆದ ಬಗ್ಗೆ ಸಂಶಯ ಮೂಡಿಸುತ್ತದೆ. ಆದ ಕಾರಣ ಈ ಬಗ್ಗೆ ತನಿಖೆ ಅಗತ್ಯವಿದೆ ಎಂದು ಅವರು ಹೇಳಿದ್ದಾರೆ.
ಅತ್ಯಂತ ದಕ್ಷ ಅಧಿಕಾರಿಯಾಗಿದ್ದ ಕರ್ಕರೆ ಎ.ಟಿ.ಎಸ್. ಮುಖ್ಯಸ್ಥರಾಗಿ ಹಲವಾರು ಭಯೋತ್ಪಾದಕರನ್ನು ಬಂಧಿಸುವ ಜೊತೆಗೆ ಮೊದಲ ಬಾರಿಗೆ ಭಾರತದಲ್ಲಿರುವ ಕೇಸರಿ ಭಯೋತ್ಪಾದನೆಯನ್ನು ಬಯಲಿಗೆಳೆಯುದರ ಮೂಲಕ ಹಲವು ಬಲಪಂಥೀಯ ಉಗ್ರ ಸಂಘಟನೆಗಳ ವಿರೋಧ ಕಟ್ಟಿಕೊಂಡಿದ್ದರು.
No comments:
Post a Comment