VISHWA KANNADIGA NEWS - ವಿಶ್ವ ಕನ್ನಡಿಗ ನ್ಯೂಸ್

ವಿಶ್ವ ಕನ್ನಡಿಗ ನ್ಯೂಸ್ ಈಗ ಹೊಸ ತಾಣದಲ್ಲಿ

ಆತ್ಮೀಯ ಓದುಗರೇ ವಿಶ್ವ ಕನ್ನಡಿಗ ನ್ಯೂಸ್ ಓದಲು ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿರಿ...





http://www.vknewz.com

Jan 13, 2010

ತ್ರಿಕೋನ ಸರಣಿ; ರೈನಾ ಶತಕ; 245ಕ್ಕೆ ಭಾರತ ಆಲೌಟ್

ಅಗ್ರ ಕ್ರಮಾಂಕ ಮತ್ತೊಮ್ಮೆ ತನ್ನ ವೈಫಲ್ಯತೆಯನ್ನು ಮೆರೆದಿರುವ ಹೊರತಾಗಿಯೂ ಸುರೇಶ್ ರೈನಾ ಅಮೋಘ ಶತಕದ ನೆರವಿನಿಂದ ತ್ರಿಕೋನ ಸರಣಿಯ ಫೈನಲ್‌ನಲ್ಲಿ ಶ್ರೀಲಂಕಾ ವಿರುದ್ಧ ಭಾರತ 245ರ ಸಾಧಾರಣ ಮೊತ್ತ ಪೇರಿಸಿದೆ.

ಸಂಕ್ಷಿಪ್ತ ಸ್ಕೋರ್:
ಭಾರತ 245 (48.2 ಓವರು)
ವೀರೇಂದ್ರ ಸೆಹ್ವಾಗ್ 42, ಗೌತಮ್ ಗಂಭೀರ್ 0, ವಿರಾಟ್ ಕೋಹ್ಲಿ 2, ಯುವರಾಜ್ ಸಿಂಗ್ 0, ಮಹೇಂದ್ರ ಸಿಂಗ್ ಧೋನಿ 14, ರವೀಂದ್ರ ಜಡೇಜಾ 38, ಹರಭಜನ್ ಸಿಂಗ್ 11, ಜಹೀರ್ ಖಾನ್ 16, ಸುರೇಶ್ ರೈನಾ 106, ಶ್ರೀಶಾಂತ್ 4, ಆಶಿಶ್ ನೆಹ್ರಾ 2*.

ಕೇವಲ 60 ರನ್ನುಗಳಿಗೆ ಐದು ಪ್ರಮುಖ ವಿಕೆಟುಗಳನ್ನು ಕಳೆದುಕೊಂಡಿದ್ದ ಭಾರತಕ್ಕೆ ರೈನಾ ಆಸರೆಯಾಗದೆ ಇದ್ದಿದ್ದರೆ ಪರಿಸ್ಥಿತಿ ಮತ್ತಷ್ಟು ಹೀನಾಯವಾಗಿರುತ್ತಿತ್ತು. ಅವರು ಅಂತಾರಾಷ್ಟ್ರೀಯ ಏಕದಿನದಲ್ಲಿ ತನ್ನ ಮೂರನೇ ಆಕರ್ಷಕ ಶತಕ (106) ದಾಖಲಿಸುವ ಮೂಲಕ ತಂಡವನ್ನು ಗೌರವಾರ್ಹ ಮಟ್ಟಕ್ಕೆ ತಲುಪಿಸುವಲ್ಲಿ ಯಶಸ್ವಿಯಾದರು.

ಇಲ್ಲಿನ ಶೇರ್ ಎ ಬಾಂಗ್ಲಾ ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ತ್ರಿಕೋನ ಸರಣಿಯ ಫೈನಲ್ ಪಂದ್ಯದಲ್ಲಿ ಬುಧವಾರ ಟಾಸ್ ಗೆದ್ದ ಶ್ರೀಲಂಕಾದಿಂದ ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಭಾರತವು 48.2 ಓವರುಗಳಲ್ಲಿ 245 ರನ್ನುಗಳಿಗೆ ಸರ್ವಪತನ ಕಂಡಿದೆ.

ಸೂಕ್ತ ಸಂದರ್ಭದಲ್ಲಿ ತಂಡಕ್ಕೆ ಆಸರೆಯಾಗಿ ನಿಂತು ತಾಳ್ಮೆಯ ಆಟವಾಡುತ್ತಾ ನಂತರ ಲಂಕಾ ಬೌಲರುಗಳ ಸತ್ವಪರೀಕ್ಷೆಗಿಳಿದ ರೈನಾ ಹೊರತುಪಡಿಸಿ ಸಾಧಾರಣ ಪ್ರದರ್ಶನ ನೀಡಿದ್ದು ವೀರೇಂದ್ರ ಸೆಹ್ವಾಗ್ (42) ಮತ್ತು ರವೀಂದ್ರ ಜಡೇಜಾ (38) ಮಾತ್ರ.

ಅಗ್ರ ಕ್ರಮಾಂಕದಲ್ಲಿ ಗೌತಮ್ ಗಂಭೀರ್ ಮತ್ತು ಯುವರಾಜ್ ಸಿಂಗ್ ಖಾತೆ ತೆರೆಯುವ ಮೊದಲೇ ಹೊರಟು ಹೋದರೆ, ಸರಣಿಯ ಹೀರೋ ವಿರಾಟ್ ಕೋಹ್ಲಿ ಕೇವಲ ಎರಡು ರನ್ನುಗಳಿಗೆ ಸೀಮಿತವಾಗಿದ್ದರು. ನಾಯಕ ಮಹೇಂದ್ರ ಸಿಂಗ್ ಧೋನಿಯವರ ಹೋರಾಟವೂ 14ಕ್ಕೆ ಮುಕ್ತಾಯ ಕಂಡಿತು.

ಹರಭಜನ್ ಸಿಂಗ್ (11) ಮತ್ತು ಜಹೀರ್ ಖಾನ್ (16) ಎರಡಂಕಿ ತಲುಪಿದರೆ, ಶ್ರೀಶಾಂತ್ 4ಕ್ಕೆ ವಿಕೆಟ್ ಒಪ್ಪಿಸಿದರು. 2 ರನ್ ಗಳಿಸಿದ ಆಶಿಶ್ ನೆಹ್ರಾ ಅಜೇಯರಾಗುಳಿದಿದ್ದಾರೆ.

ನುವಾನ್ ಕುಲಶೇಖರ ಮತ್ತು ಚಣಕಾ ವೆಲಗೇದರಾ ಅವರು ಭಾರತವನ್ನು ಅಟ್ಟಾಡಿಸಿದ್ದು, ಕ್ರಮವಾಗಿ ನಾಲ್ಕು ಮತ್ತು ಮೂರು ಪ್ರಮುಖ ವಿಕೆಟುಗಳನ್ನು ಕಬಳಿಸಿದರು. ಸೂರಜ್ ರಣದೀವ್, ತಿಸ್ಸಾರಾ ಪಿರೇರಾ ಮತ್ತು ತಿಲಕರತ್ನೆ ದಿಲ್‌ಶಾನ್ ತಲಾ ಒಂದೊಂದು ವಿಕೆಟ್ ಪಡೆದಿದ್ದಾರೆ.

webdunia

No comments: