ಮಂಗಳೂರು: ಆತನನ್ನು ರಮ್ಯಾ ಶೆಟ್ಟಿಯ ತಾಯಿ, ಮನೆ ಮಗನಂತೆ ನೋಡಿಕೊಂಡಿದ್ದರೂ ಉಂಡ ಮನೆಗೇ ಕನ್ನ ಹಾಕಿದ್ದ ಮಹಮ್ಮದ್. ಮನೆಮಂದಿಯ ಎಲ್ಲರೊಂದಿಗೂ ಸಲುಗೆಯಿಂದಿದ್ದ ಮಹಮ್ಮದ್, ರಮ್ಯಾ ಶೆಟ್ಟಿಯೊಂದಿಗೆ ಅಂತಹ ಪ್ರೇಮ ಸಂಬಂಧವನ್ನು ಇಟ್ಟು ಕೊಂಡು ಆಕೆಯನ್ನು ಮಂಕುಬೂದಿ ಎರಚಿ ಅಪಹರಿಸುತ್ತಾನೆ ಎಂದು ಅವರು ಕನಸು ಮನಸಿನಲ್ಲೂ ಎನಿಸಿರಲಿಲ್ಲ. ಆಕೆ ನಾಪತ್ತೆ ಯಾಗಿದ್ದ ದಿನಂದಿಂದಲೂ ಸರಿಯಾಗಿ ಊಟ, ನಿದ್ದೆಯಲ್ಲದೆ ಮಗಳನ್ನು ಅಲ್ಲಿ ಇಲ್ಲಿ ಹುಡುಕಾಡಿ ಕಾಯುತ್ತಿದ್ದ ಪಾಲಕರಿಗೆ ಇದೀಗ ರಮ್ಯಾ ಶೆಟ್ಟಿಯ ಪತ್ತೆಯ ಸುದ್ದಿ ತಿಳಿದಂತೆಯೇ ಬಹಳಷ್ಟು ಸಂತಸಗೊಂಡಿ ದ್ದರು. ಆದರೆ ಹೆತ್ತಬ್ಬೆಯ ಕಣ್ಣೀರಿಗೂ ಕರಗದ ರಮ್ಯಾ ಶೆಟ್ಟಿ ನನಗೆ ಪಾಲಕರು ಬೇಡ, ಗಂಡ ಮಹಮ್ಮದನೇ ಬೇಕು ಎಂದು ಹೇಳಿ ಬಡ ತಂದೆ ತಾಯಿಯ ಮನಸ್ಸನ್ನು ಮತ್ತೊಮ್ಮೆ ಘಾಸಿಗೊಳಿಸಿದ್ದಾಳೆ.
ನರಿಂಗಾನದ ಪೊಟ್ಟೊಳಿಕೆಯ ಸದಾಶಿವ ಶೆಟ್ಟಿಯವರ ಇಬ್ಬರು ಮಕ್ಕಳಲ್ಲಿ ರಮ್ಯಾ ಶೆಟ್ಟಿ ದೊಡ್ಡವಳು. ಬಡತನದಿಂದಲೇ ಜೀವನ ಸಾಗಿಸುತ್ತಿದ್ದ ಇವರ ಕುಟುಂಬಕ್ಕೆ ಆಕೆಗೆ ಉತ್ತಮ ವಿದ್ಯಾಭ್ಯಾಸ ನೀಡಬೇಕೆಂಬ ಕನಸ್ಸನ್ನು ಇಟ್ಟುಕೊಂಡಿದ್ದರೂ ಅದು ಸಾಧ್ಯ ವಾಗದೇ ಆಕೆಯನ್ನು 7 ನೇ ತರಗತಿಯವರಗೆ ಕಲಿಸಲು ಶಕ್ತರಾದರು. ಮನೆಯಲ್ಲಿ ಬಡತನ ತಾಂಡವವಾಡುತ್ತಿದ್ದ ಸಂದರ್ಭದಲ್ಲಿ ರಮ್ಯಾ ಶೆಟ್ಟಿಯೂ ಮುಡಿಪುವಿನ ಸುಪಾರಿ ಅಂಗಡಿಯಲ್ಲಿ ಕೆಲಸಕ್ಕೆ ಸೇರಿ ಮನೆಯವರಿಗೆ ಸ್ವಲ್ಪ ಮಟ್ಟಿಗೆ ಸಹಾಯವಾಗಿದ್ದಳು.
ಕಳೆದ ಕೆಲವು ವರ್ಷಗಳ ಹಿಂದೆ ನರಿಂಗಾನ ಗ್ರಾಮದ ಪೊಟ್ಟೊಳಿಕೆಗೆ ಯಾವಾಗ ಕಾಲಿಟ್ಟನೋ ಅದೇ ಇವತ್ತು ರಮ್ಯಾ ಶೆಟ್ಟಿ ಮನೆಯವರನ್ನು ಇಂದು ಕಣ್ಣೀರ ಕಡಲಿನಲ್ಲಿ ತೇಲುವಂತೆ ಮಾಡಿದೆ. ಮೂಲತ: ಸಾಲೆತ್ತೂರಿನವನಾಗಿದ್ದ ಮಹಮ್ಮದ್ ಮದುವೆಯಾದ ನಂತರ ಪೊಟ್ಟೊಳಿಕೆಯಲ್ಲಿ ಮನೆಮಾಡಿಕೊಂಡಿದ್ದ. ಮೂರು ಮಕ್ಕಳನ್ನು ಹೊಂದಿದ್ದ ಈತ ಮೇಸ್ತ್ರಿ ಕೆಲಸವನ್ನು ಮಾಡುತ್ತಿದ್ದ ಕಾರಣ ರಮ್ಯಾ ತಂದೆ ತಮ್ಮ ಮನೆಯಲ್ಲಿ ಕೆಲಸಕ್ಕಾಗಿ ಬರಲು ಹೇಳಿದ್ದ. ಇದೇ ಅವರ ಪಾಲಿಗೆ ಮುಳುವಾಗಿ ಹೋಯಿತು. ಇದರ ನಂತರ ಮನೆಯವರ ಜೊತೆ ಸ್ನೇಹವನ್ನು ಸಂಪಾದಿಸಿಕೊಂಡ ಈತ ಅಲ್ಲಿಯೇ ಉಳಿದುಕೊಂಡು ಊಟ ಮಾಡುವವರೆಗೂ ಮುಟ್ಟಿತ್ತು. ಮನೆಯ ಖರ್ಚಿಗೆ ಹಣವನ್ನೂ ಕೂಡಾ ಆತ ಕೊಡುತ್ತಿದ್ದ. ಇದರ ನಡುವೆ ರಮ್ಯ ಶೆಟ್ಟಿ ಹಾಗೂ ಮಹಮ್ಮದ್ ನಡುವೆ ಪ್ರೇಮ ವ್ಯವಹಾರವೂ ಹುಟ್ಟಿಕೊಂಡಿತು. ಈ ನಡುವೆ ಸ್ಥಳೀಯ ಕೆಲವು ಸಂಘಟನೆಗಳು ಮನೆಯವರಿಗೆ ಎಚ್ಚರಿಕೆಯನ್ನು ನೀಡಲು ಬಂದಾಗಲೂ ರಮ್ಯಾ ಶೆಟ್ಟಿ ತಾಯಿ ಅವರನ್ನು ಬೈದು ಕಲಿಸಿದ್ದರು. ಆದರೆ ಒಂದು ದಿನ ಇವರಿಬ್ಬರೂ ಜೊತೆಯಾಗಿಯೇ ನಾಪತ್ತೆಯಾಗಿ ಸಮಾಜದಲ್ಲಿ ಅಶಾಂತಿಯ ವಾತಾವರಣ ಸೃಷ್ಟಿಯಾಗಿತ್ತು. ಅಲ್ಲದೆ ಕೊಣಾಜೆ ಠಾಣೆಯೆದುರು, ಮುಡಿಪು ಜಂಕ್ಷನ್‌ನಲ್ಲಿ ಹಿಂದೂ ಸಂಘಟನೆಗಳ ಪ್ರತಿಭಟನೆಯೂ ಕೂಡಾ ನಡೆದಿತ್ತು. ಕೊಣಾಜೆ ಪೊಲೀಸರಿಗೆ ತಕೆ ನೋವಾಗಿ ಕಾಡಿದ್ದ ಈ ಪ್ರಕರಣ ಇದೀಗ ಅಂತ್ಯಗೊಂಡಿದ್ದರೂ ರಮ್ಯಾ ಶೆಟ್ಟಿಯ ಮನೆಯಲ್ಲಿ ಇನ್ನೂ ಕೂಡಾ ಸ್ಮಶಾನ ಮೌನ.
ರಮ್ಯಾ ಸುಳ್ಯದಲ್ಲಿ ಪತ್ತೆಯಾದಳೆಂದು ಸುದ್ದಿಯಾಗುತ್ತಲೇ ಆಕೆಯ ತಾಯಿ ಸಂತಸಗೊಂಡಿದ್ದರು. ಆದರೆ ಆ ಸಂತಸ ಬಹಳ ಹೊತ್ತು ಇರಲಿಲ್ಲ. ಆಕೆ ಸೋಮವಾರದಂದು ಬಂಟ್ವಾಳ ನ್ಯಾಯಾಲಯದಿಂದ ಹೊರಗೆ ಬರುತ್ತಿದ್ದಂತೆಯೇ ನನಗೆ ತಂದೆ ತಾಯಿ ಬೇಡ, ನನಗೇ ನನ್ನ ಪತಿ ಮಹಮ್ಮದನೇ ಬೇಕು ಎಂದು ಅಳುತ್ತಾ ಹೇಳಿದ್ದಾಳೆ. ಇಷ್ಟು ಸಮಯದಿಂದ ಹೆತ್ತು ಹೊತ್ತು ಬೆಳೆಸಿದ ತಾಯಿಯ ಕಣ್ಣೀರಿಗೂ ಬೆಲೆ ಇಡದ ರಮ್ಯಾ ಶೆಟ್ಟಿ ಈಗ ಇತ್ತೀಚಿನ ಮೂರು ಮಕ್ಕಳ ತಂದೆ ಮಹಮ್ಮದನೇ ಸರ್ವಸ್ವವಾಗಿರುವುದು ವಿಪರ್ಯಾಸ.
ಮಹಮ್ಮದ್ ರಾಜೇಶನಾದರೆ, ಸಫಿಯಾಳ ಪಾಡೇನು?
ರಮ್ಯಾ ಶೆಟ್ಟಿ ಜೊತೆ ಪರಾರಿಯಾಗಿದ್ದ ಮೇಸ್ತ್ರಿ ಮಹಮ್ಮದ್ ಈಗ ರಾಜೇಶ್ ಶೆಟ್ಟಿಯಾಗಿ ಬದಲಾಗಿದ್ದನೆಂದು ಹೇಳಲಾಗುತ್ತಿದ್ದು, ಇದೇ ವೇಳೆ ಈ ಬೆಳವಣಿಗೆಯಿಂದ ನೊಂದಿರುವ ಸಫಿಯಾಳ ಪಾಡೇನು ಎಂಬ ಕನಿಕರದ ಮಾತುಗಳು ಸಾರ್ವ ಜನಿಕರಿಂದ ಕೇಳಿ ಬರುತ್ತಿದೆ.
ಕಳೆದ ತಿಂಗಳು ಮೇಸ್ತ್ರಿಯೊಂದಿಗೆ ಪರಾರಿಯಾಗಿದ್ದ ರಮ್ಯಾಳನ್ನು ಪೊಲೀಸರು ಮೊನ್ನೆ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಾಲಯದಲ್ಲಿ ತಾನು ಮಹಮ್ಮದ್‌ನ ಜೊತೆ ಸ್ವಇಚ್ಛೆಯಿಂದ ಹೋಗಿದ್ದು, ಈಗ ಮದುವೆಯೂ ಆಗಿದೆ. ಮುಂದೆ ಆತನ ಜೊತೆ ಜೀವಿಸುತ್ತೇನೆ ಎಂದು ರಮ್ಯಾ ತಿಳಿಸಿದ್ದಾಳೆ. ತಾನು ಮತಾಂತರಗೊಂಡಿದ್ದು ರಾಜೇಶ್ ಶೆಟ್ಟಿಯಾಗಿ ಬದಲಾಗಿದ್ದೇನೆ ಎನ್ನುತ್ತಾನೆ ಮಹಮ್ಮದ್. ಇತ್ತ ಹಿಂದೂಗಳು ಆತನ ಮತಾಂತರವನ್ನು ಒಪ್ಪಲು ಸಿದ್ಧರಿಲ್ಲ. ಯಾಕೆಂದರೆ ಮತಾಂತರವಾದ ಬಳಿಕ ಅದಕ್ಕೆ ಸರಿಯಾದ ಸಾಕ್ಷಿ ಇರಬೇಕು. ಅದು ಆತನ ಬಳಿ ಇಲ್ಲದ ಕಾರಣ ಇದೊಂದು ಕಪಟ ನಾಟಕವೆನ್ನುತ್ತಾರೆ. ಇಷ್ಟಕ್ಕೂ ಮಹಮ್ಮದ್ ಹುಡುಗಿಗಾಗಿ ಮತಾಂತರ ಗೊಂಡಿದ್ದೇನೆ ಎನ್ನುತ್ತಿರುವುದನ್ನು ನಂಬುವುದು ಕಷ್ಟವೇ ಸರಿ. ಎಂಟು ವರ್ಷಗಳ ಹಿಂದೆ ಮೂವತ್ತು ಪವನ್ ಬಂಗಾರ ಪಡೆದು ನಾಟೆಕಲ್ ಏರುಮನೆಯ ಸಫಿಯಾಳನ್ನು ಮದುವೆಯಾಗಿದ್ದ, ಆತನಿಗೆ ಈಗ ಮೂರು ಮಕ್ಕಳಿವೆ. ಇದನ್ನೇ ನಿಭಾಯಿಸಲಾಗದ ಆತ ಇನ್ನೊಂದು ಹೆಣ್ಣಿನೊಂದಿಗೆ ಶಾಶ್ವತವಾಗಿ ಜೀವನ ನಡೆಸಲು ಸಾಧ್ಯವೇ ಎಂಬ ಪ್ರಶ್ನೆಯೂ ಉದ್ಭವಿಸಿದೆ. ಇಷ್ಟಕ್ಕೂ ಹಿಂದೂ ಸಂಘಟನೆ ಹಾಗೂ ಪೊಲೀಸರ ಹೆದರಿಕೆಯಿಂದ ಆತ ಮತಾಂತರದ ನೆಪವೊಡ್ಡಿರಬಹುದೆನ್ನಲಾಗಿದೆ.
ನಿರಂತರವಾಗಿ ಕಿರುಕುಳ ನೀಡುತ್ತಿದ್ದ ಮಹಮ್ಮದ್‌ನ ಅಗತ್ಯವೂ ಸಫಿಯಾಳಿಗಂತೂ ಇರಲಿಲ್ಲ. ಆದರೆ ತನಗೂ ಗಂಡನಿದ್ದಾನೆಂದು ಧೈರ್ಯದಿಂದ ಹೇಳಿಕೊಳ್ಳಲು ಮಾತ್ರ ಆಕೆಯಿಂದ ಸಾಧ್ಯವಿತ್ತು. ಈಗ ಅದೂ ಇಲ್ಲದಂತಾಗಿದೆ. ರಮ್ಯಾಳೊಂದಿಗೆ ಪರಾರಿಯಾಗಿದನ್ನು ಕೇಳಿಯೇ ಸಫಿಯಾ ದಂಗಾಗಿದ್ದಳು. ಈಗ ಸಂಪೂರ್ಣವಾಗಿ ನೊಂದುಕೊಂಡಿದ್ದು ಮುಂದಿನ ಜೀವನದ ಬಗ್ಗೆ ದಿಕ್ಕು ಕಾಣದಂತಾಗಿದ್ದಾರೆ.
ಇತ್ತ ರಮ್ಯಾಳ ಕುಟುಂಬದಲ್ಲಿ ಕೊಂಚ ನೆಮ್ಮದಿ ಉಂಟಾಗಿದ್ದರೂ ಕುಟುಂಬಸ್ಥರ ಮತ್ತು ಸ್ಥಳೀಯರ ಚುಚ್ಚು ಮಾತುಗಳನ್ನು ತಾಳಿಕೊಳ್ಳುವುದು ಅಸಾಧ್ಯವಾಗಿದೆ. ಅದರ ಜೊತೆ ರಮ್ಯಾಳ ಮುಂದಿನ ಭವಿಷ್ಯನ ಬಗ್ಗೆಯೂ ಚಿಂತೆ ಇದೆ. ರಮ್ಯಾ-ಮಹಮ್ಮದ್ ಜೋಡಿ ಸಮಾಜದಲ್ಲಿ ಹೇಗೆ ಬಾಳ್ವೆ ನಡೆಸುತ್ತದೆ ಎನ್ನುವುದೇ ಯಕ್ಷ ಪ್ರಶ್ನೆ.
ಸೌರ್ಕೆ: jayakirana
Subscribe to:
Post Comments (Atom)
No comments:
Post a Comment