VISHWA KANNADIGA NEWS - ವಿಶ್ವ ಕನ್ನಡಿಗ ನ್ಯೂಸ್

ವಿಶ್ವ ಕನ್ನಡಿಗ ನ್ಯೂಸ್ ಈಗ ಹೊಸ ತಾಣದಲ್ಲಿ

ಆತ್ಮೀಯ ಓದುಗರೇ ವಿಶ್ವ ಕನ್ನಡಿಗ ನ್ಯೂಸ್ ಓದಲು ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿರಿ...





http://www.vknewz.com

Jan 13, 2010

ರಮ್ಯಾ ಪ್ರಕರಣ: ಎಂ.ಬಿ. ಸದಾಶಿವ ವಿರುದ್ದ ಪ್ರತಿಭಟನೆ .


ಸುಳ್ಯ: ಒಂದು ತಿಂಗಳ ಹಿಂದೆ ಕಾಣೆಯಾಗಿದ್ದ ರಮ್ಯಾ ಶೆಟ್ಟಿ ಹಾಗೂ ಪೊಟ್ಟೊಳಿಕೆ ಮೇಸ್ತ್ರಿ ಮಹಮ್ಮದ್‌ನನ್ನು ಅಡಗಿಸಿಟ್ಟಿದ್ದರೆನ್ನಲಾದ ಜೆಡಿಎಸ್‌ ಮುಂದಾಳು ಎಂ.ಬಿ ಸದಾಶಿವ ವಿರುದ್ದ ಹಿಂದು ಸಂಘಟನೆಗಳು ಪ್ರತಿಭಟನೆ ನಡೆಸಿದವು. ಪ್ರತಿಭಟನಾ ಮೆರವಣಿಗೆಯನ್ನುದ್ದೇಶಿಸಿ ಮಾತನಾಡಿದ ಹಿಂದೂ ಜಾಗರಣ ವೇದಿಕೆ ಅಧ್ಯಕ್ಷ ಕರುಣಾಕರ ಬರಮೇಲು, ಯಂ.ಬಿ.ಸದಾಶಿವ ರಮ್ಯಾಳನ್ನು 16 ದಿನಗಳಿಂದ ಅಡಗಿಸಿಟ್ಟು ಪೊಲೀಸರು ಹಾಗೂ ಜನರನ್ನು ವಂಚಿಸಿದ್ದಾರೆ. ಇಂಥವರ ವಿರುದ್ದ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಯಂ.ಬಿ ಸದಾಶಿವ ಹೇಳಿಕೆ
ಮಹಮ್ಮದ್‌, ರಾಜು ಅತ್ಯಳ್ಳಿ ಎಂದು ಹೇಳಿಕೊಂಡು ನನ್ನ ಮನೆಗೆ ಕೆಲಸ ಕೇಳಿಕೊಂಡು ಬಂದಿದ್ದ. ಜನವರಿ 11ರಂದು ಪತ್ರಿಕೆಯಲ್ಲಿ ಮಹಮ್ಮದ್‌ ಪೋಟೊ ನೋಡಿ ಸಂಶಯ ಬಂದು ಪೊಲೀಸರಿಗೆ ಫೋನ್‌ ಮಾಡಿ ತಿಳಿಸಿದ್ದೇನೆ. 19 ಯುವತಿಯರನ್ನು ಕೊಂದ ಮೋಹನ್‌ ಕುಮಾರ್‌ ವಿಚಾರದಲ್ಲಿ ಇಲ್ಲದ ಪ್ರತಿಭಟನೆ ಈಗ ನಡೆಯುತ್ತಿರುವುದು ಸರಿಯಲ್ಲ ಎಂದು ಸದಾಶಿವ ಜಯಕಿರಣಕ್ಕೆ ತಿಳಿಸಿದ್ದಾರೆ.
ಸೌರ್ಕೆ: jayakirana

No comments: