ಕನ್ನಡ ಚಿತ್ರರಂಗದ ಹಿರಿಯ ನಟ ಕೆ.ಎಸ್.ಅಶ್ವತ್ಥ್ (85) ಅವರ ಆರೋಗ್ಯ ತೀರ ಹದಗೆಟ್ಟಿದ್ದು, ನಗರದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಮೈಸೂರು: ಕನ್ನಡ ಚಿತ್ರರಂಗದ ಹಿರಿಯ ನಟ ಕೆ.ಎಸ್.ಅಶ್ವತ್ಥ್ (85) ಅವರ ಆರೋಗ್ಯ ತೀರ ಹದಗೆಟ್ಟಿದ್ದು, ನಗರದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಅವರನ್ನು ಜ.11 ರಂದು ಬಿ.ಎಂ. ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲು ಮಾಡಲಾಗಿದೆ. ಆದರೆ ಅಶ್ವತ್ಥ್ ಆರೋಗ್ಯದಲ್ಲಿ ಯಾವುದೇ ರೀತಿಯ ಸುಧಾರಣೆ ಕಂಡು ಬಂದಿಲ್ಲ. ‘ಮಿದುಳಿಗೆ ಸರಿಯಾಗಿ ರಕ್ತಚಲನೆ ಆಗುತ್ತಿಲ್ಲ. ಜೊತೆಗೆ ನರಗಳ ದೌರ್ಬಲ್ಯ ಹೆಚ್ಚಾಗಿದೆ. ಆಸ್ಪತ್ರೆಗೆ ಸೇರಿಸಿದ ಮೊದಲ ದಿನ ಅಲ್ಪಸ್ವಲ್ಪ ಮಾತನಾಡುತ್ತಿದ್ದರು. ಈಗ ಅದೂ ನಿಂತು ಹೋಗಿದೆ. ದಿನೇ ದಿನೇ ಆರೋಗ್ಯ ಸ್ಥಿತಿ ಕ್ಷೀಣಿಸು ತ್ತಿದೆ ಎಂದು ಅವರ ಪುತ್ರ ಶಂಕರ್ ಅಶ್ವತ್ಥ್ ಹೇಳಿದರು.
ಅಶ್ವತ್ಥ್ ಅವರು ಪುತ್ರ, ಸೊಸೆ, ಪುತ್ರಿ ಹಾಗೂ ಅಳಿಯನೊಂದಿಗೆ ಜ 6 ರಿಂದ 10 ವರೆಗೆ ಕಾಶಿ ಯಾತ್ರೆ ಮಾಡಿಬಂದಿದ್ದಾರೆ. ಆ ಸಂದರ್ಭದಲ್ಲಿ ಅವರನ್ನು ಬಹುತೇಕ ಎತ್ತಿಕೊಂಡೇ ಓಡಾಡಬೇಕಾಯಿತು ಎಂದು ಶಂಕರ್ ಅಶ್ವತ್ಥ್ ತಿಳಿಸಿದರು.
ಬೆಂಗಳೂರು ವರದಿ: ಅಶ್ವತ್ಥ್ ಅವರ ಚಿಕಿತ್ಸೆಗೆ ತಗಲುವ ಪೂರ್ಣ ವೆಚ್ಚವನ್ನು ಸರ್ಕಾರವೇ ಭರಿಸಲಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
Prajavani
Subscribe to:
Post Comments (Atom)
No comments:
Post a Comment