ಶುಕ್ರವಾರದಂದು ನಡೆಯುವ ಸೂರ್ಯಗ್ರಹಣವು ಸುಮಾರು 11.8 ನಿಮಿಗಳಷ್ಟು ದೀರ್ಘ ಕಾಲ ನಡೆಯುವುದರಿಂದ ಖಗೋಳ ವಿಜ್ಞಾನಿಗಳ ಅಧ್ಯಯನಕ್ಕೆ ಹೇರಳ ಅವಕಾಶಲಭಿಸಿದೆ.
ಚೆನ್ನೈ(ಐಎಎನ್‌ಎಸ್): ಶುಕ್ರವಾರ ನಡೆಯಲಿರುವ ಅಪೂರ್ವ ಹಾಗೂ ದೀರ್ಘ ಕಾಲಾವಧಿಯ ಸೂರ್ಯಗ್ರಹಣದ ಪರಿಣಾಮವನ್ನು ಅರಿಯಲು ಮತ್ತು ಹೆಚ್ಚಿನ ಅಧ್ಯಯನ ನಡೆಸಲು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ವಿಜ್ಞಾನಿಗಳು ’ಸಂಶೋಧಕ ರಾಕೆಟ್’ಗಳ ಸರಣಿಯನ್ನೇ ಆಗಸಕ್ಕೆ ಹಾರಿಬಿಡುತ್ತಿದ್ದಾರೆ.
ಸೂರ್ಯಗ್ರಹಣದ ಸಂದರ್ಭದಲ್ಲಿ ಮತ್ತು ಬಳಿಕ ಭೂಮಿಯ ವಾತಾವರಣದಲ್ಲಾಗುವ ಪ್ರಕ್ರಿಯೆಗಳನ್ನು ತಿಳಿಯಲು ಈ ಸಂಶೋಧಕ ರಾಕೆಟ್ (ಸೌಂಡಿಂಗ್ ರಾಕೆಟ್)ಗಳನ್ನು ಉಡ್ಡಯನ ಮಾಡಲಾಗುವುದು. ಇವುಗಳು ಕನಿಷ್ಠ 20 ನಿಮಿಷಗಳ ಕಾಲ, 800 ಮೈಲುಗಳಷ್ಟು ಬಾಹ್ಯಾಕಾಶದಲ್ಲಿ ಸಂಚರಿಸಿ ಮಾಹಿತಿ ರವಾನಿಸುತ್ತವೆ.
ಶುಕ್ರವಾರದಂದು ನಡೆಯುವ ಸೂರ್ಯಗ್ರಹಣವು ಸುಮಾರು 11.8 ನಿಮಿಗಳಷ್ಟು ದೀರ್ಘ ಕಾಲ ನಡೆಯುವುದರಿಂದ ಖಗೋಳ ವಿಜ್ಞಾನಿಗಳ ಅಧ್ಯಯನಕ್ಕೆ ಹೇರಳ ಅವಕಾಶಲಭಿಸಿದೆ.
ಈ ಉದ್ದೇಶದಿಂದ ಆಂಧ್ರದ ಶ್ರೀಹರಿಕೋಟ ಹಾಗೂ ಕೇರಳದ ತುಂಬೆ ರಾಕೆಟ್ ಉಡ್ಡಯನ ಕೇಂದ್ರಗಳಿಂದ ಅಧ್ಯನ ಉದ್ದೇಶದ ರಾಕೆಟ್‌ಗಳನ್ನು ಆಕಾಶಕ್ಕೆ ಹಾರಿಬಿಡಲಾಗುತ್ತದೆ. ‘15 ಮತ್ತು 18ರಂದು ರೋಹಿಣಿ-560 ರಾಕೆಟ್ ಗಗನಕ್ಕೇರಲಿದೆ. ಇದು ಭೂವಲಯದಿಂದ 500 ಕಿ.ಮೀ. ದೂರ ಸಂಚರಿಸಲಿದೆ. ಸೂರ್ಯಗ್ರಹಣಕ್ಕೆ ಸಂಬಂಧಿಸಿ ವಾತಾವರಣದ ವಿವಿಧ ಪದರುಗಳಲ್ಲಾಗುವ ವೈಪರೀತ್ಯವನ್ನು ಅದು ಅಳೆಯುವುದು’ ಎಂದು ಶ್ರೀಹರಿಕೋಟ ಬಾಹ್ಯಾಕಾಶ ಕೇಂದ್ರದ ಸಹಾಯಕ ನಿರ್ದೇಶಕ ಎಂ.ವೈ.ಎಸ್ ಪ್ರಸಾದ್ ತಿಳಿಸಿದರು.
ತುಂಬೆ ಬಾಹ್ಯಾಕಾಶದಿಂದ ಗುರುವಾರ 4 ಹಾಗೂ ಶುಕ್ರವಾರ 5 ಸಣ್ಣ ರಾಕೆಟ್‌ಗಳನ್ನು ಉಡ್ಡಯಿಸಲಾಗುತ್ತದೆ. ಇವುಗಳು 75ರಿಂದ 120 ಕಿ.ಮೀ. ದೂರ ಸಂಚರಿಸುವುವು ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.
Prajavani
Subscribe to:
Post Comments (Atom)
No comments:
Post a Comment