ಅಮೆರಿಕದ ಹಲವಾರು ದತ್ತಿ ಸಂಸ್ಥೆಗಳು, ಕಂಪೆನಿಗಳು, ಸೆಲೆಬ್ರಿಟಿ ಗಳು, ವೈಯಕ್ತಿಕವಾಗಿ ನೆರವು ನೀಡು ತ್ತಿರುವವರು ಹಾಗೂ ರ್‍ಯಾಲಿಗಳ ಮುಖಾಂತರ ಸಂಗ್ರಹಿಸಿರುವ ಒಟ್ಟು ಮೊತ್ತ ಈಗಾಗಲೇ 210 ದಶಲಕ್ಷ ಡಾಲರ್ ಮೀರಿದೆ.
*ನೆರವಿನ ಮಹಾಪೂರ *4 ಸಾವಿರ ಕೈದಿಗಳು ಪರಾರಿ *ಪೋಲಿಸ್ ಕಾವಲು ಹೆಚ್ಚಿಸಲು ನಿರ್ಧಾರ
ಭೂಕಂಪ ಪೀಡಿತ ಹೈಟಿಯಲ್ಲಿ ಲೂಟಿಕೋರರ ಹಾವಳಿ ವಿಪರೀತವಾಗಿದ್ದು, ಪೋರ್ಟ್-ಅ -ಪ್ರಿನ್ಸ್‌ನ ನಾಶಗೊಂಡ ಮಳಿಗೆಯೊಂದರಿಂದ ಮಂಗಳವಾರ ಸಾಮಗ್ರಿಗಳನ್ನು ಅಪಹರಿಸುವ ಸಮಯದಲ್ಲಿ ನಡೆದ ಕಚ್ಚಾಟ.
ವಾಷಿಂಗ್ಟನ್ (ಪಿಟಿಐ): ಹೈಟಿ ಭೂ ಕಂಪದ ಸಂತ್ರಸ್ತರ ಸಹಾಯಕ್ಕೆ ಹರಿದು ಬರುತ್ತಿರುವ ನೆರವು ಈಗ ಎಲ್ಲೆ ಮೀರಿದೆ. ಏತನ್ಮಧ್ಯೆ ಸಂಕಷ್ಟಕ್ಕೆ ಸಿಲುಕಿ ರುವ ಜನರ ಆರ್ತತೆ ಕ್ಷಣಕ್ಷಣಕ್ಕೂ ಬಿಗಡಾಯಿಸತ್ತಲೇ ಸಾಗಿದೆ.
ಅಮೆರಿಕದ ಹಲವಾರು ದತ್ತಿ ಸಂಸ್ಥೆಗಳು, ಕಂಪೆನಿಗಳು, ಸೆಲೆಬ್ರಿಟಿ ಗಳು, ವೈಯಕ್ತಿಕವಾಗಿ ನೆರವು ನೀಡು ತ್ತಿರುವವರು ಹಾಗೂ ರ್‍ಯಾಲಿಗಳ ಮುಖಾಂತರ ಸಂಗ್ರಹಿಸಿರುವ ಒಟ್ಟು ಮೊತ್ತ ಈಗಾಗಲೇ 210 ದಶಲಕ್ಷ ಡಾಲರ್ ಮೀರಿದೆ. ಸುನಾಮಿ ದುರಂ ತದ ಸಂದರ್ಭದಲ್ಲಿ ಹರಿದುಬಂದ ನೆರವಿಗಿಂತಲೂ ಇದು ಹೆಚ್ಚಿನ ಪ್ರಮಾ ಣ ದಲ್ಲಿದೆ ಎಂದು ‘ದಿ ಕ್ರಾನಿಕಲ್’ ದಿನಪತ್ರಿಕೆ ವರದಿ ಮಾಡಿದೆ.
ಈ ದೇಣಿಗೆ ನೀಡಿರುವವರ ಪಟ್ಟಿ ಯಲ್ಲಿ ರೆಡ್‌ಕ್ರಾಸ್ ಸಂಸ್ಥೆ ಮೊದಲ ಸ್ಥಾನದಲ್ಲಿದೆ. ಯುನಿಸೆಫ್ 18.2 ದಶಲಕ್ಷ ಡಾಲರ್ ಸಂಗ್ರಹಿಸಿದೆ. ಕೇವಲ ಮೊಬೈಲ್‌ಗಳ ಸಂದೇಶದ ಮುಖಾಂತ ರವೇ 2ಲಕ್ಷ ಡಾಲರ್ ಮೊತ್ತ ಸಂಗ್ರಹವಾಗಿದೆ ಎಂದು ವರದಿ ತಿಳಿಸಿದೆ.
ಕೈದಿಗಳ ಪರಾರಿ: ಭೂಕಂಪ ಸಂಭವಿಸಿದ ವೇಳೆಯಲ್ಲಿ ಹೈಟಿಯಲ್ಲಿನ ಬಂದಿಖಾನೆಯಲ್ಲಿದ್ದ 4 ಸಾವಿರ ಕೈದಿಗಳು ಪರಾರಿಯಾಗಿದ್ದಾರೆ.
ಇವರ ಪತ್ತೆಗಾಗಿ ಈಗ ವಿಶ್ವಸಂಸ್ಥೆ ನೂರಾರು ಅಧಿಕಾರಿಗಳನ್ನು ನೇಮಿಸಿದೆ ಎಂದು ಶಾಂತಿಪಾಲನಾ ಪಡೆಯ ಮುಖ್ಯಸ್ಥ ರಾದ ಅಲನ್ ಲೆ ರಾಯ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಹೈಟಿಯಲ್ಲಿನ ಸದ್ಯದ ಪರಿಸ್ಥಿತಿ ನಿಭಾಯಿಸಲು ಈಗಿನ ಸೇನಾ ಪಡೆ ಹಾಗೂ ಪೊಲೀಸ್ ಬಲ ಹೆಚ್ಚಿಸಲು ನಿರ್ಧರಿಸಲಾಗಿದೆ.
ಈಗ 3400 ಅಮೆರಿಕ ಪಡೆಗಳು ಹೈಟಿಯಲ್ಲಿ ಪರಿಸ್ಥಿತಿ ನಿಭಾಯಿಸುತ್ತಿವೆ. ದಿನದಿಂದ ದಿನಕ್ಕೆ ಇಲ್ಲಿನ ಸ್ಥಿತಿ ಹದಗೆಡುತ್ತಿದ್ದು, ಜನರ ನೆರವಿಗೆ ಮತ್ತು ರಕ್ಷಣೆಗೆ ಇನ್ನಷ್ಟು ಬಲದ ಅವಶ್ಯವಿದೆ ಎಂದು ಲೆ ರಾಯ್ ಹೇಳಿದ್ದಾರೆ.
ಹೈಟಿಯ ಉತ್ತರ ಭಾಗ, ಪೋರ್ಟ್ ಅ ಪ್ರಿನ್ಸ್ ಮತ್ತು ಡೊಮಿನಿಕನ್ ರಿಪಬ್ಲಿಕ್ ನಡುವೆ ಸಂಚರಿಸಲು ನಾಗರಿಕರಿಗೆ ಈಗ ಎಲ್ಲ ರೀತಿಯ ನೆರವು ಕಲ್ಪಿಸಲಾಗಿದೆ.
ಪತ್ತೆಗೆ ಗೂಗಲ್ ಹೊಸ ಸೇವೆ
ಸ್ಯಾನ್‌ಫ್ರಾನ್ಸಿಸ್ಕೊ (ಡಿಪಿಎ): ಭೂಕಂಪದಲ್ಲಿ ಬದುಕುಳಿದವರು ಹಾಗೂ ನಾಪತ್ತೆಯಾದವರ ಪತ್ತೆಗಾಗಿ ಗೂಗಲ್ ವೆಬ್ ಸಂಸ್ಥೆಯು ಹೊಸದಾಗಿ ಕೇಂದ್ರೀಕೃತ ಹುಡುಕು ತಾಣವೊಂದನ್ನು (ಸರ್ಚ್ ಸಿಸ್ಟಂ) ರೂಪಿಸಿದೆ.
ಗೂಗಲ್ ತನ್ನ ಈ ಹೊಸ ವ್ಯವಸ್ಥೆಯ ವಿವರಗಳನ್ನು ಬ್ಲಾಗ್ ಸ್ಪಾಟ್‌ನಲ್ಲಿ ಸೋಮವಾರ ಪ್ರಕಟಿಸಿದೆ. ಅಮೆರಿಕ ಗೃಹ ಇಲಾಖೆಯ ಜತೆ ಸಮಾ ಲೋಚನೆ ನಡೆಸಿ ಇದನ್ನು ಅಭಿವೃದ್ಧಿಪಡಿಸಲಾಗಿದೆ. ಇಂಗ್ಲಿಷ್ ಮತ್ತು ಫ್ರೆಂಚ್ ಭಾಷೆ ಯಲ್ಲಿ ಸೇವೆ ಲಭ್ಯವಿದೆ.
prajavani
Subscribe to:
Post Comments (Atom)
No comments:
Post a Comment