ಆಹಾರ ಧಾನ್ಯಗಳ ಬೆಲೆಗಳು ಮಾರ್ಚ್ ತಿಂಗಳ ಹೊತ್ತಿಗೆ ಕಡಿಮೆ ಆಗುವ ನಿರೀಕ್ಷೆ ಇದೆ ಎಂದು ಪ್ರಧಾನಿ ಆರ್ಥಿಕ ಸಲಹಾ ಸಮಿತಿ ಅಭಿಪ್ರಾಯಪಟ್ಟಿದೆ.
ನವದೆಹಲಿ (ಪಿಟಿಐ): ಮಾರ್ಚ್ - ಏಪ್ರಿಲ್ ತಿಂಗಳ ಹೊತ್ತಿಗೆ ಹಿಂಗಾರು ಫಸಲು ಮಾರುಕಟ್ಟೆಗೆ ಬರಲಿರುವ ಹಿನ್ನೆಲೆಯಲ್ಲಿ, ಆಹಾರ ಧಾನ್ಯಗಳ ಹಣ ದುಬ್ಬರವು ಸದ್ಯದ ಶೇ 18ರಿಂದ ಕಡಿಮೆ ಆಗಲಿದೆ ಎಂದು ಸಮಿತಿಯ ಸದಸ್ಯ ವಿ. ಎಸ್. ವ್ಯಾಸ್, ಮಂಗಳವಾರ ಇಲ್ಲಿ ಆಶಾವಾದ ವ್ಯಕ್ತಪಡಿಸಿದರು.
ಹಿಂಗಾರಿನ ಫಸಲಿನಲ್ಲಿ ಗೋಧಿ ಮತ್ತು ಅಕ್ಕಿ ಉತ್ಪಾದನೆಯು ಉತ್ತಮ ಮಟ್ಟದಲ್ಲಿ ಇರಲಿದೆ. ಮುಂದಿನ ಎರಡು ತಿಂಗಳಲ್ಲಿ ಹೊಸ ಫಸಲು ಮಾರುಕಟ್ಟೆಗೆ ಬರಲಿರುವುದರಿಂದ ಹಣದುಬ್ಬರ ನಿಯಂತ್ರಣದಲ್ಲಿ ಇರಿಸಲು ಸಾಧ್ಯವಾಗಲಿದೆ.
ಹಣದುಬ್ಬರಕ್ಕೆ ಪೂರೈಕೆ ಕೊರತೆಯೇ ಮುಖ್ಯ ಕಾರಣ. ಹೀಗಾಗಿ ಅಗತ್ಯ ವಸ್ತುಗಳ ಪೂರೈಕೆ ಹೆಚ್ಚಿಸುವುದರಿಂದಷ್ಟೇ ಬೆಲೆ ಏರಿಕೆಗೆ ಕಡಿವಾಣ ವಿಧಿಸಬಹುದು ಎಂದು ಹೇಳಿದ್ದಾರೆ.
prajavani
Subscribe to:
Post Comments (Atom)
No comments:
Post a Comment