ಮಂಗಳೂರು ಜ 19 : ಶಿರಾಡಿ ಘಾಟ್ ಬಳಿ ಮಣ್ಣುಗುಡ್ಡೆ ಕುಸಿತಗೊಂಡಿರುವುದರಿಂದ ಬೆಂಗಳೂರು ಮಂಗಳೂರು ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಇಂದಿನಿಂದ ಏಳು ದಿನಗಳ ಕಾಲ ಸಂಚಾರ ಸ್ಥಗಿತಗೊಳ್ಳಲಿದೆ. ಹಾಸನ ಜಿಲ್ಲಾ ಗಡಿಯಿಂದ ಗುಂಡ್ಯಾ ಚೆಕ್ ಪೋಸ್ಟ್ ವರೆಗಿನ ಹೆದ್ದಾರಿಯಲ್ಲಿ ವಾಹನ ಸಂಚಾರ ಸಂಪೂರ್ಣ ನಿಷೇಧಿಸಲಾಗಿದೆ.
ಇದೇ ತಿಂಗಳು 23ರಿಂದ ಕಲ್ಲುಮಣ್ಣು ತೆರವು ಕಾರ್ಯ ಆರಂಭಿಸುವುದಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ತಿಳಿಸಿದ್ದು, ಇದರಿಂದ 25ನೇ ತಾರೀಕಿನ ವರೆಗೆ ಶಿರಾಡಿಘಾಟ್ ರಸ್ತೆ ಸಂಚಾರ ಸ್ಥಗಿತಗೊಳಿಸಲು ಆದೇಶಿಸಲಾಗಿದೆ. ಪುತ್ತೂರು, ಮಡಿಕೇರಿ, ಮೈಸೂರು, ಮೂಡಿಗೆರೆ, ಚಾರ್ಮಾಡಿ, ಬೆಳ್ತಂಗಡಿ ಮಾರ್ಗಗಳಿಗೆ ಪರ್ಯಾಯ ಮಾರ್ಗ ಸೂಚಿಸಲಾಗಿದೆ ಎಂದು ಪ್ರಾಧಿಕಾರದ ಮಂಗಳೂರು ವಲಯದ ಅಧಿಕಾರಿಗಳು ಹೇಳಿಕೆ ನೀಡಿದ್ದಾರೆ.
thatskannada
Subscribe to:
Post Comments (Atom)
No comments:
Post a Comment