ಮುಂಬೈ, ಜ. 19 : ಮೂರನೇ ಆವೃತ್ತಿಯ ಐಪಿಎಲ್ ಪಂದ್ಯಗಳ ಸಮೀಪಿಸತೊಡಗಿದ್ದು, ಕೆಲಸದ ಒತ್ತಡದಲ್ಲಿ ಪಂದ್ಯಗಳನ್ನು ನೋಡಲಾಗುತ್ತಿಲ್ಲ ಎಂಬ ಕ್ರಿಕೆಟ್ ಅಭಿಮಾನಿಗಳ ಕೊರಗನ್ನು ಬಿಸಿಸಿಐ ನಿವಾರಿಸಲು ಮುಂದಾಗಿದೆ. ಬಿಸಿಸಿಐ ಮತ್ತು ಗೂಗಲ್ ಇಂಡಿಯಾ ಸಹಯೋಗದಲ್ಲಿ ಐಪಿಎಲ್ 3 ನೇ ಆವೃತ್ತಿಯ ಎಲ್ಲ ಪಂದ್ಯಗಳನ್ನು ಯುಟ್ಯೂಬ್ ಮೂಲಕ ವೀಕ್ಷಿಸುವ ವಿಶೇಷ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಹೆಜ್ಜೆ ಇರಿಸಿದೆ.
ಮಾರ್ಚ್ ನಲ್ಲಿ ಆರಂಭವಾಗುವ 3ನೇ ಆವೃತ್ತಿಯ ದೇಶಿಯ ಐಪಿಎಲ್ ಪಂದ್ಯಗಳು 44 ದಿನಗಳಲ್ಲಿ 59 ಪಂದ್ಯಗಳು ನಡೆಯಲಿವೆ. ಎಂಟು ಪ್ರಾಂಚೈಸಿ ತಂಡಗಳು ಪಾಲ್ಗೊಳ್ಳಲಿವೆ. ಯುಟ್ಯೂಬ್ ಮೂಲಕ ಪಂದ್ಯ ವೀಕ್ಷಿಸುವ ಪ್ರಾಯೋಗಿಕ ಪ್ರಯತ್ನವನ್ನು ಐಪಿಎಲ್ 2ನೇ ಆವೃತ್ತಿಯಲ್ಲೇ ಮಾಡಲಾಗಿತ್ತು. 3ನೇ ಆವೃತ್ತಿಯಲ್ಲಿ ಮೊದಲ ಪಂದ್ಯ ಮುನ್ನ ಅಧಿಕೃತವಾಗಿ ಕಾರ್ಯರೂಪಕ್ಕೆ ತರಲು ಬಿಸಿಸಿಐ ನಿರ್ಧರಿಸಿದೆ. ಕೆಲಸದ ಜೊತೆಗೆ ಐಪಿಎಲ್ ಪಂದ್ಯವನ್ನು ಹಾಗೂ ಪಂದ್ಯದ ಮುಖ್ಯಾಂಶವನ್ನು ಯಾವುದೇ ಖರ್ಚಿಲ್ಲದೆ ನಮ್ಮ ಪಿಸಿಯಲ್ಲಿ ನೋಡಬಹುದಾಗಿದೆ.
ಅಂತರ್ಜಾಲದಲ್ಲಿ ಯುಟ್ಯೂಬ್ ಮೂಲಕ ಐಪಿಎಲ್ ಯೋಜನೆಯನ್ನು ಬುಧವಾರ ಬಿಬಿಸಿಐ ಅಧಿಕೃತವಾಗಿ ಘೋಷಣೆ ಮಾಡಲಿದೆ. ಐಪಿಎಲ್ ಪ್ರಸಾರದ ಹಕ್ಕು ಪಡೆದಿರುವ ಮಲ್ಟಿ ಸ್ಕ್ರೀನ್ ಮೀಡಿಯಾ ಯುಟ್ಯೂಬ್ ಯೋಜನೆಯನ್ನು ಪಡೆದುಕೊಂಡಿದೆ. ಹಣಕಾಸಿನ ವ್ಯವಹಾರ ಅಂತಿಮಗೊಂಡ ನಂತರ ಅಧಿಕೃತವಾಗಿ ಘೋಷಣೆಯಾಗಲಿದೆ. ಭಾರತದಲ್ಲಿ ಇದರ ಹಕ್ಕು ಸೆಟ್ ಮ್ಯಾಕ್ಸ್ ಮಲ್ಟಿ ಮೀಡಿಯಾ ಸಿಕ್ಕಿದ್ದರೆ, ಅಂತಾರಾಷ್ಟ್ರೀಯ ಮಟ್ಟದಲ್ಲಿ ವರ್ಲ್ಡ್ ಸ್ಫೋರ್ಟ್ಸ್ ಗ್ರೂಪ್ ಪ್ರಸಾರದ ಹಕ್ಕು ಪಡೆದುಕೊಳ್ಳುವ ಸಾಧ್ಯತೆ ಇದೆ.
thatskannada
Subscribe to:
Post Comments (Atom)
No comments:
Post a Comment