VISHWA KANNADIGA NEWS - ವಿಶ್ವ ಕನ್ನಡಿಗ ನ್ಯೂಸ್

ವಿಶ್ವ ಕನ್ನಡಿಗ ನ್ಯೂಸ್ ಈಗ ಹೊಸ ತಾಣದಲ್ಲಿ

ಆತ್ಮೀಯ ಓದುಗರೇ ವಿಶ್ವ ಕನ್ನಡಿಗ ನ್ಯೂಸ್ ಓದಲು ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿರಿ...





http://www.vknewz.com

Jan 27, 2010

ಕೆಎಂಎಫ್‌ ಅಧ್ಯಕ್ಷ ಹುದ್ದೆಗೆ ಸದಾನಂದ ಗೌಡ ನೇಮಕ ಸಂಭವ

ಬೆಂಗಳೂರು:ಪ್ರದೇಶ ಬಿಜೆಪಿ ಅಧ್ಯಕ್ಷ ಸ್ಥಾನದಿಂದ ನಿರ್ಗಮಿಸುತ್ತಿರುವ ಸದಾನಂದ ಗೌಡರನ್ನು ಕೆಎಂಎಫ್‌ ಅಧ್ಯಕ್ಷರನ್ನಾಗಿ ಮಾಡಲು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಚಿಂತಿಸಿದ್ದಾರೆ. ಈ ಉದ್ದೇಶದಿಂದಲೇ ಅವರನ್ನು ಕೆಎಂಎಫ್‌ನ ಆಡಳಿತ ಮಂಡಳಿಯ ಸದಸ್ಯರನ್ನಾಗಿ ನಾಮಕರಣ ಮಾಡಲಾಗಿದೆ.

ಆಡಳಿತದ ಉದ್ದಕ್ಕೂ ಉತ್ತಮ ಸಹಕಾರ ನೀಡಿರುವ ಸದಾನಂದಗೌಡರನ್ನು ಕೈಬಿಡದ ಅವರಿಗೆ ಅಧಿಕಾರ ನೀಡುವ ಲಾಲಸೆ ಮುಖ್ಯಮಂತ್ರಿಯವರಿಗಿದೆ. ಈ ಉದ್ದೇಶದಿಂದ ಎರಡು ಸಾವಿರ ಕೋಟಿ ರೂ.ವಿಗೂ ಅಧಿಕ ವಾರ್ಷಿಕ ವಹಿವಾಟು ನಡೆಸುತ್ತಿರುವ ಕೆಎಂಎಫ್‌ ಅಧ್ಯಕ್ಷ ಹುದ್ದೆಯನ್ನು ವಹಿಸುವುದು. ಇದರಿಂದ ಅವರು ಕೆಎಂಎಫ್‌ ಅಭಿವೃದ್ಧಿಗೂ ರೈತರಿಗೂ ಸಹಕಾರಿಯಾಗುತ್ತಾರೆ. ಇದು ಅಭಿವೃದ್ಧಿಗೊಂಡರೆ ತಕ್ಷಣ ಒಳ್ಳೆಯ ಹೆಸರು ಬರುತ್ತದೆಂಬ ಹಿನ್ನಲೆಯಲ್ಲಿ ದೂರದೃಷ್ಟಿ ಯಿಂದ ಗೌಡರಿಗೆ ಜವಾಬ್ದಾರಿ ವಹಿಸಲು ಮುಖ್ಯಮಂತ್ರಿ ನಿರ್ಧರಿಸಿದ್ದಾರೆ. ಹಾಲಿ ಅಧ್ಯಕ್ಷ ಗಣಿರೆಡ್ಡಿಯವರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಿ ಈ ಸ್ಥಾನ ನೀಡುವುದು. ರೆಡ್ಡಿ ಅಧಿಕಾರ ವಹಿಸಿಕೊಳ್ಳುವ ಮುನ್ನವೇ ತಾತ್ಕಾಲಿಕ ಎಂದು ಹೇಳಲಾಗಿದೆ. ಸದಾನಂದಗೌಡ ರಾಜ್ಯಾಧ್ಯಕ್ಷ ಸ್ಥಾನದಿಂದ ಕೆಳಗಿಳಿಯುತ್ತಿದ್ದಂತೆ ರೆಡ್ಡಿ ತನ್ನ ಅಧಿಕಾರ ಬಿಟ್ಟು ಕೊಡಬೇಕೆಂದು ಈ ಮೊದಲೇ ಷರತ್ತು ಮೀಸಲಾಗಿದೆ. ಬಹುತೇಕ ಫೆಬ್ರವರಿ ತಿಂಗಳಲ್ಲಿ ಗೌಡರಿಗೆ ಕೆಎಂಎಫ್‌ನ ಜವಾಬ್ದಾರಿ ದೊರೆಯ ಲಿದೆ. ಇದಕ್ಕೆ ಗಣಿರೆಡ್ಡಿ ಗಳು ಸಮ್ಮತಿಸಲಿದ್ದಾರೆಂದು ಉನ್ನತ ಮೂಲಗಳು ತಿಳಿಸಿವೆ.


source: jayakirana

No comments: