ರಾಜಸ್ಥಾನ : ಜನವರಿ ೨೬: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ನೂತನ ರಾಜಕೀಯ ಪಕ್ಷ ಸೋಶಿಯಲ್ ಡೆಮೊಕ್ರಾಟಿಕ್ ಪಾರ್ಟಿ ಆಫ್ ಇಂಡಿಯಾ ರಾಜಸ್ಥಾನದ ಸರಪಂಚ್ ಚುನಾವಣೆಯಲ್ಲಿ ತನ್ನ ಮೊದಲ ಜಯವನ್ನು ದಾಖಲಿಸಿದೆ. ರಾಜಸ್ಥಾನದ ಸವಾಯ್ ಮಧೋಕ್ಪುರ ಜಿಲ್ಲೆಯ ಚಾನ್ ಗ್ರಾಮ ಪಂಚಾಯತಿಯ ಸರಪಂಚ್ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಎಸ್.ಡಿ.ಪಿ.ಐ. ಅಧಿಕೃತ ಅಭ್ಯರ್ಥಿ ಶ್ರೀ ಮಹಮ್ಮದ್ ಹನೀಫ್ ತಮ್ಮ ಪ್ರತಿಸ್ಪರ್ಧಿ ಬಿ.ಜೆ.ಪಿ ಯ ಕಮೆಲೇಶ್ ವಿರುದ್ಧ 1224 ಮತಗಳ ಅಂತರದಿಂದ ಜಯಗಳಿಸಿದ್ದಾರೆ. ಇಲ್ಲಿನ ಸರಪಂಚ್ ಸ್ಥಾನ ಕರ್ನಾಟಕದ ಗ್ರಾಮ ಪಂಚಾಯತಿ ಅಧ್ಯಕ್ಷ ಸ್ಥಾನಕ್ಕೆ ಸಮನಾಗಿದ್ದು 1960 ರಲ್ಲಿ ಇಕ್ರಾಮುದ್ದೀನ್ ಖಾಸಿಕ್ ರವರ ನಂತರ ಇದು ಮೊದಲನೆಯ ಬಾರಿ ಓರ್ವ ಮುಸ್ಲಿಂ ಸಮುದಾಯದ ವ್ಯಕ್ತಿ ಇಲ್ಲಿನ ಸರಪಂಚ್ ಆಗಿ ಆಯ್ಕೆಯಾಗಿದ್ದಾರೆ.
ಈ ಕ್ಷೇತ್ರದಲ್ಲಿ ಒಟ್ಟು 5200 ಮತಗಳಿದ್ದು ಶೇ 60 % ರಷ್ಟು ಮತಗಳು ಚಲಾವಣೆಯಾಗಿವೆ. ಗುಜ್ಜಾರ್ ಮತ್ತು ಮೀನಾ ಸಮುದಾಯದ ಪ್ರಭಾವವಿರುವ ಈ ಕ್ಷೇತ್ರದಲ್ಲಿ ಒಟ್ಟು 2100 ಮುಸ್ಲಿಂ ಮತದಾರರಿದ್ದು ಅದರಲ್ಲಿ 1700 ಮುಸ್ಲಿಂ ಮತಗಳು ಚಲಾವಣೆಯಾಗಿವೆ . ಹೀಗಿದ್ದರೂ ಎಸ್.ಡಿ.ಪಿ.ಐ. ಅಭ್ಯರ್ಥಿ 2448 ಮತ ಪಡೆದು ಜಯಶೀಲರಾಗಿರುವುದು ರಾಜಸ್ಥಾನದಲ್ಲಿ ವೃದ್ಧಿಸುತ್ತಿರುವ ಈ ಪಕ್ಷದ ಜನಪ್ರಿಯತೆಗೆ ನಿದರ್ಶನವಾಗಿದೆ. ಈ ಹಿಂದೆ ಕಾಂಗ್ರೆಸ್ಸ್ ಮತ್ತು ಬಿ.ಜೆ.ಪಿ. ಹಲವು ಬಾರಿ ಆಡಳಿತ ನಡೆಸಿದ ಈ ಕ್ಷೇತ್ರ ಈಗ ಎಸ್.ಡಿ.ಪಿ.ಐ. ಪಾಲಾಗಿರುವುದು ಮತ್ತು ಈ ಮೂಲಕ ಈ ಪಕ್ಷ ದೇಶದಲ್ಲಿಯೇ ತನ್ನ ಪ್ರಥಮ ಖಾತೆಯನ್ನು ತೆರೆದಿರುವುದು ರಾಜಸ್ಥಾನದಲ್ಲಿ ಆ ಪಕ್ಷದ ವರ್ಚಸ್ಸನ್ನು ವೃದ್ಧಿಸಿದೆ.
- ಅಶ್ರಫ್ ಮಂಜ್ರಾಬಾದ್ .
No comments:
Post a Comment