
ಮಂಗಳೂರು: ವಿಧಿ ಪ್ರತಿಯೊಬ್ಬರ ಬದುಕಲ್ಲೂ ಆಡುತ್ತದೆ. ಸುಖ ದುಃಖಗಳನ್ನು ನೀಡಿ ಮರೆಯಾಗುತ್ತದೆ. ಆದರೆ ಕೆಲವರ ಬದುಕಲ್ಲಿ ಮಾತ್ರ ಒಂದರ ಮೇಲೊಂದ ರಂತೆ ಕಷ್ಟಗಳನ್ನು ನೀಡಿ ನಿಲ್ಲದ ಆಟವನ್ನು ಆಡುತ್ತಲೇ ಇರುತ್ತದೆ, ಬಹುಷಃ ಅಬ್ಬಾಸ್ ಅವರ ಬದುಕಲ್ಲೂ ಇದು ಸತ್ಯ ವಾಯಿತು. ಹಾಗಾಗಿ ಅವರು ಜೀವನ್ಮರಣ ಸ್ಥಿತಿಯಲ್ಲಿ ಆಸ್ಪತ್ರೆಯ ಐಸಿಯು ಘಟಕದಲ್ಲಿದ್ದಾರೆ.
ಬಂಟ್ವಾಳ ತಾಲೂಕಿನ ಕುಕ್ಕಾಜೆಯ ಬಡ ಕುಟುಂಬವೊಂದು ನಗರದ ಎ.ಜೆ. ಆಸ್ಪತ್ರೆಯಲ್ಲಿ ಕಣ್ಣೀರಿನಲ್ಲಿ ಕೈತೊಳೆಯು ತ್ತಿದೆ. ಹೊಟ್ಟೆ-ಬಟ್ಟೆಗೆ ಗತಿ ಇಲ್ಲದ ಈ ಕುಟುಂಬದ ಯಜಮಾನ ಅಬ್ಬಾಸ್ ಮಲಗಿದಲ್ಲಿಯೇ ಜೀವಚ್ಛವವಾಗಿದ್ದು ಆಪರೇಶನ್ ಮಾಡಿಸದೆ ಇದ್ದರೆ ಬದುಕಿ ಉಳಿಯುವ ಸಾಧ್ಯತೆ ಇಲ್ಲವೆನ್ನಲಾಗಿದೆ.
ಕುಕ್ಕಾಜೆಯ ಮುಹಿಯುದ್ದೀನ್ ಜುಮ್ಮಾ ಮಸೀದಿ ಜಮಾಅತ್‌ಗೆ ಒಳಪಟ್ಟ ಅಬ್ಬಾಸ್ ಕುರಿಯಪ್ಪಾಡಿ ಎಂಬಲ್ಲಿ ತಟ್ಟಿಮನೆಯಲ್ಲಿ ಸಣ್ಣ ಸಂಸಾರದೊಂದಿಗೆ ನರಕ ಸದೃಶ್ಯವಾಗಿ ಬದುಕುತ್ತಿದ್ದರು. ಕಳೆದ ಮೂರು ವರ್ಷದ ಹಿಂದೆ ತೆಂಗಿನ ಮರದಿಂದ ಬಿದ್ದು ಬೆನ್ನೆ ಲುಬು ಮುರಿಸುಕೊಂಡು ಮನೆಯಲ್ಲಿ ಮಲಗಿದಲ್ಲಿಯೇ ಪತ್ನಿಯ ಆರೈಕೆಯಲ್ಲಿ ದಿನ ದೂಡುತ್ತಿದ್ದರು.
ಪತ್ನಿ ತಾಹಿರಾಳ ಕಾಲು ಪೋಲಿಯೊ ಬಾಧಿತವಾಗಿ ನಡೆದಾಡಲು ತ್ರಾಸಪಡು ವಂತಹ ಸ್ಥಿತಿಯಲ್ಲಿದ್ದರೂ ಆಕೆ ಪತಿ ಹಾಗೂ ಮಕ್ಕಳ ತುತ್ತು ಅನ್ನಕ್ಕಾಗಿ ಊರೂರು ಅಲೆದು ಕೈಚಾಚಿ ಸಿಕ್ಕಿದ ಹಣದಿಂದ ಜೀವನ ಅಲೆದು ಕೈಚಾಚಿ ಸಿಕ್ಕಿದ ಹಣ ದಿಂದ ಜೀವನ ನಡೆಸುತ್ತಿದ್ದಳು.
ಒಂದೆಡೆ ಮಕ್ಕಳ ವಿಧ್ಯಾಭ್ಯಾಸ ಹಾಗು ಪತಿಯ ಆರೋಗ್ಯ ಹಾಗೆ ಮನೆಯ ಜೀವನ ನಿರ್ವಹಣೆಯ ಭಾರ ಹೊತ್ತು ಕಾಲು ಕುಂಟುತ್ತ ಶುಕ್ರವಾರ ಮಸೀದಿ ಮುಂಭಾಗ ದಲ್ಲಿ ಹಾಗೆ ಶ್ರೀಮಂತರ ಮನೆಬಾಗಿಲಿನಲ್ಲಿ, ಅಂಗಡಿಗಳಲ್ಲಿ ಭಿಕ್ಷೆಯಾಚಿಸಿ ಬದುಕುತ್ತಿರುವ ತಾಹಿರಾಳ ಸಂಸಾರಕ್ಕೆ ಇದೀಗ ವಿಧಿಯು ಕ್ರೂರವಾದ ಯಾತನೆ ನೀಡಿದೆ.
ಕಳೆದ ಮೂರು ವರ್ಷದಿಂದ ಮಲಗಿದಲ್ಲಿಯೇ ಇದ್ದ ಅಬ್ಬಾಸ್‌ನಿಗೆ ಹಠಾತ್ ಹೃದಯಾಘಾತ ಉಂಟಾಗಿ ಅವರನ್ನು ವೆನ್ಲಾಕ್‌ಗೆ ಸೇರಿಸಲಾಯಿತು. ವೆನ್ಲಾಕ್‌ನಲ್ಲಿ ಶಸ್ತ್ರಚಿಕಿತ್ಸೆಯ ಅಗತ್ಯವಿದೆ ಎಂದಾಗ ಕಂಗೆಟ್ಟ ತಾಹಿರ ಬಂದರಿನಲ್ಲಿ ಅಲೆದಾಡುತ್ತ ತನ್ನ ಗಂಡನನ್ನು ಬದುಕಿಸಿ ಎಂದು ಅಂಗಲಾಚಿದಳು. ಇದನ್ನು ಕಂಡ ಇಕ್‌ಲಾಸ್ ಟ್ರಾವೆಲ್ಸ್‌ನ ಖಾದರ್ ಎಂಬವರು ವೆನ್ಲಾಕ್‌ಗೆ ಧಾವಿಸಿ ಅಬ್ಬಾಸ್‌ರನ್ನು ಎ.ಜೆ.ಆಸ್ಪತ್ರೆಗೆ ಸೇರಿಸಿದರು. ತಕ್ಷಣ ಆಪರೇಶನ್ ಮಾಡಿಸಬೇಕೆಂದು ವೈದ್ಯರು ಹೇಳಿದಾಗ ಆಪರೇಶನ್ ಮೊತ್ತ 65,000 ಸೇರಿಸಲು ತಾಹಿರಾ ಮತ್ತೆ ಕಂಗೆಟ್ಟರು.
ಖಾದರ್‌ರವರ ನೆರವಿನಿಂದ ಮಂಗಳೂರಿನ ಪ್ರಮುಖರನ್ನು ಸಂಪರ್ಕಿಸಿದಾಗ ಅಲ್ಪಮೊತ್ತ ದೊರೆಯಿತು. ಈತನ್ಮಧ್ಯೆ ಕುಕ್ಕಾಜೆಯ ಮುಹಿಯುದ್ಧೀನ್ ಮಸೀದಿ ಜಮಾಅತ್‌ನವರನ್ನು ಸಂಪರ್ಕಿಸಿದಾಗ ಅವರಿಂದ ಬಂದ ಉತ್ತರ ಜಮಾಅತ್‌ಗೆ ಅಬ್ಬಾಸ್ ವಂತಿಗೆ ಹಣ ಬಾಕಿಯಿದೆ ಅದನ್ನು ಕಟ್ಟಿದರೆ ಸಹಾಯ ಮಾಡಬಹುದು ಎಂದಿದ್ದರು. ಇದು ತಾಹಿರಾಳನ್ನು ಮತ್ತಷ್ಟು ಕುಗ್ಗುವಂತೆ ಮಾಡಿತು. ಮಕ್ಕಳ ವಿದ್ಯಾಭ್ಯಾಸವನ್ನು ಅರ್ಧದಲ್ಲಿ ನಿಲ್ಲಿಸಿ ಅವರನ್ನು ಆಸ್ಪತ್ರೆಯಲ್ಲಿ ಉಳಿಸಿಕೊಂಡಿರುವ ತಾಹಿರಾ ತನ್ನ ಇಬ್ಬರು ಮಕ್ಕಳನ್ನು ಅದೆಷ್ಟೊ ಬಾರಿ ಹಸಿವೆಯಲ್ಲಿ ಟ್ಟಿದ್ದಳಂತೆ.
ಆಪರೇಶನ್‌ಗೆ ಹಿದಾಯತ್ ಸೆಂಟರ್ ತಮ್ಮಿಂದಾದ ನೆರವು ನೀಡಿದೆ. ಸಹನ ವುಮೆನ್ಸ್ ಕೌನ್ಸಿಲಿಂಗ್‌ನ ಖೈರುನ್ನೀಸಾ ಸಯ್ಯದ್ ರವರು ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ಹನೀಫ್ ಪುತ್ತೂರು ಮತ್ತವರ ಸ್ನೇಹಿತ ಬಳಗ ಈ ಸಂಸಾರಕ್ಕೆ ಸಹಕಾರ ಒದಗಿಸುವಲ್ಲಿ ತುಂಬಾ ಶ್ರಮ ವಹಿಸಿದ್ದಾರೆ. ಆದರೂ ಆಪರೇಶನ್ ವೆಚ್ಚಕ್ಕೆ ಇನ್ನಷ್ಟು ಮೊತ್ತ ಬೇಕಾಗಿದೆ.
ದಾನಿಗಳು ಕರ್ಣಾಟಕ ಬ್ಯಾಂಕ್‌ನಲ್ಲಿರುವ ತಾಹಿರಾ ಅವರ ಖಾತೆ ನಂಬರ್ 4652500100851101ನ್ನು ಸಂಪರ್ಕಿಸಬಹುದು.
ಜಯ ಕಿರಣದಿಂದ ಅಕ್ಕಿ ನೆರವು
ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿರುವ ಅಬ್ಬಾಸ್, ಪತಿಯ ಸೇವೆಗಾಗಿ ನಿಂತಿರುವ ತಾಹಿರಾ ಇವರ ನಡುವೆ ವಿದ್ಯೆಯೂ ಇಲ್ಲದೆ, ಒಪ್ಪೊತ್ತಿನ ಅನ್ನವೂ ಇಲ್ಲದೆ ಬಡವಾಗಿರುವ ಇಬ್ಬರು ಕಂದಮ್ಮಗಳು, ದುಡಿಯುವ ಕೈಗಳಿಲ್ಲದೆ ಇವರೆಲ್ಲ ಉಪವಾಸ ಮಲಗಿದ್ದಾರೆ.
ಜಯ ಕಿರಣ ಪತ್ರಿಕೆ ಸದ್ಯ ತತ್‌ಕ್ಷಣದ ನೆರವಾಗಿ ಈ ಕುಟುಂಬಕ್ಕೆ ಮೂರು ವರ್ಷದ ಅಕ್ಕಿಯನ್ನು ಉಚಿತವಾಗಿ ನೀಡಿದೆ
source: jayakirana
No comments:
Post a Comment