ಭಾರತ ಹಾಗೂ ಪಾಕಿಸ್ತಾನ ನಡುವಣ ಕಡಿದುಕೊಂಡಿರುವ ಕ್ರಿಕೆಟ್ ಭಾಂದವ್ಯವನ್ನು ಪುನರಾರಂಭಿಸಲು ಅಂತಾರಾಷ್ಟ್ರೀಯ ಕ್ರಿಕೆಟ್ ಕೌನಿಲ್ಸ್ (ಐಸಿಸಿ) ಉತ್ಸುಕತೆ ವ್ಯಕ್ತಪಡಿಸಿದೆ.
ಈ ಬಗ್ಗೆ ಹೇಳಿಕೆ ನೀಡಿರುವ ಐಸಿಸಿ ಅಧ್ಯಕ್ಷ ಡೇವಿಡ್ ಮೊರ್ಗನ್, 2008ರಲ್ಲಿ ಮುಂಬೈಗೆ ನಡೆದ ಉಗ್ರರ ದಾಳಿಯ ನಂತರ ನಿಲುಗಡೆಗೊಂಡಿರುವ ಉಭಯ ದೇಶಗಳ ನಡುವಣ ಕ್ರಿಕೆಟ್ ಸಂಬಂಧ ಶೀಘ್ರದಲ್ಲೇ ಪುನರಾರಂಭಗೊಳ್ಳಬೇಕಾದ ಅವಶ್ಯಕತೆಯಿದೆಯೆಂದರು.
ಪಾಕಿಸ್ತಾನ ಹಾಗೂ ಭಾರತ ನಡುವಣ ಸರಣಿಯು ಆಶಸ್‌ನಷ್ಟೇ ಮಹತ್ವವನ್ನು ಪಡೆದಿದೆ. ಆದ್ದರಿಂದ ಇತ್ತಂಡಗಳ ಮಂಡಳಿಗಳೂ ಟೆಸ್ಟ್ ಸರಣಿ ಆಯೋಜನೆಗೆ ಕ್ರಮ ಕೈಗೊಳ್ಳಬೇಕಾಗಿದೆ ಎಂದು ಅವರು ಹೇಳಿದರು.
ಕ್ರಿಕೆಟ್ ಪಂದ್ಯಗಳನ್ನು ಆಡುವ ಮೂಲಕ ಇದು ಎರಡೂ ದೇಶಗಳ ನಡುವಣ ಸಂಬಂಧಕ್ಕೆ ಸಕರಾತ್ಮಕ ಪರಿಣಾಮ ಬೀರಲಿದೆ ಎಂಬುದನ್ನು ಅವರು ಮನಗಂಡರು.
webdunia
Subscribe to:
Post Comments (Atom)
No comments:
Post a Comment