ಮಂಗಳವಾರ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ ಹರಾಜಿನಲ್ಲಿ ತಮ್ಮ ದೇಶದ ಆಟಗಾರರನ್ನು ಪರಿಗಣಿಸದಿರುವ ಮೂಲಕ ಐಪಿಎಲ್ ತಮ್ಮ ತೇಜೋವಧೆ ಮಾಡಿರುವುದಾಗಿ ಪಾಕಿಸ್ತಾನ ಟ್ವೆಂಟಿ-20 ನಾಯಕ ಶಾಹಿದ್ ಆಫ್ರಿದಿ ಆರೋಪಿಸಿದ್ದು, ಭಾರತದಲ್ಲೂ ತಮಗೆ ಅಪಾರ ಅಭಿಮಾನಿಗಳಿದ್ದಾರೆ ಎಂದು ಹೇಳಿಕೊಂಡಿದ್ದಾರೆ.
ಐಪಿಎಲ್ ಹರಾಜು ಪಟ್ಟಿಯಲ್ಲಿ ಅತೀ ಹೆಚ್ಚು ಮೂಲಧನದೊಂದಿಗೆ ಅಗ್ರ ಸ್ಥಾನದಲ್ಲಿದ್ದ ಆಫ್ರಿದಿ ಸೇರಿದಂತೆ ಪಾಕಿಸ್ತಾನಿ ಆಟಗಾರರನ್ನು ಖರೀದಿಸಲು ಯಾವುದೇ ತಂಡ ಮುಂದಾಗಿರಲಿಲ್ಲ.
ನಮ್ಮ ಆಟಗಾರರನ್ನು ಈ ರೀತಿಯಾಗಿ ನೋಡಿಕೊಳ್ಳುವ ಮೂಲಕ ಐಪಿಎಲ್ ಮತ್ತು ಭಾರತ ನಮ್ಮನ್ನು ಗೇಲಿ ಮಾಡಿದೆ. ತಂಡಗಳ ಈ ನಿರ್ಧಾರ ನನಗೆ ತೀವ್ರ ನಿರಾಸೆಯನ್ನುಂಟು ಮಾಡಿದೆ ಎಂದು ಅವರು ಟೀಕಿಸಿದರು.
ನಾವು ಟ್ವೆಂಟಿ-20 ವಿಶ್ವ ಚಾಂಪಿಯನ್ನರು. ನಮ್ಮನ್ನು ಫ್ರಾಂಚೈಸಿಗಳು ನಡೆಸಿಕೊಂಡ ರೀತಿ ಖೇದಕರ. ನಮ್ಮ ಆಟವನ್ನು ನೋಡ ಬಯಸಿದ್ದ ಭಾರತೀಯ ಅಭಿಮಾನಿಗಳಿಗೆ ಇದು ತೀರಾ ನಿರಾಸೆಯ ವಿಚಾರ. ಭಾರತದಲ್ಲಿ ನನಗೆ ಅಪಾರ ಅಭಿಮಾನಿಗಳಿದ್ದಾರೆ ಎಂದರು.
ಆಫ್ರಿದಿ ಅವರಿಗೆ 250000 ಅಮೆರಿಕನ್ ಡಾಲರ್ ಮೂಲಧನ ನಿಗದಿ ಪಡಿಸಲಾಗಿತ್ತು. ಆದರೆ ದುರದೃಷ್ಟವಶಾತ್ ಯಾವುದೇ ತಂಡಗಳು ಖರೀದಿಗೆ ಮುಂದಾಗಿರಲಿಲ್ಲ.
ಐಪಿಎಲ್ ನೀತಿಯಿಂದಾಗಿ ತಮ್ಮನ್ನು ಅವಮಾನಿಸಿದಂತಾಗಿದೆ ಎಂದು ಪಾಕಿಸ್ತಾನಿ ವೇಗಿ ಸೊಹೈಲ್ ತನ್ವೀರ್ ಕೂಡ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮೊದಲ ಐಪಿಎಲ್ ಆವೃತ್ತಿಯಲ್ಲಿ ಭಾಗವಹಿಸಿದ್ದ ತನ್ವೀರ್, ರಾಜಸ್ತಾನ ರಾಯಲ್ಸ್ ಚಾಂಪಿಯನ್‌ಶಿಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರು.
webdunia
Subscribe to:
Post Comments (Atom)
No comments:
Post a Comment