VISHWA KANNADIGA NEWS - ವಿಶ್ವ ಕನ್ನಡಿಗ ನ್ಯೂಸ್

ವಿಶ್ವ ಕನ್ನಡಿಗ ನ್ಯೂಸ್ ಈಗ ಹೊಸ ತಾಣದಲ್ಲಿ

ಆತ್ಮೀಯ ಓದುಗರೇ ವಿಶ್ವ ಕನ್ನಡಿಗ ನ್ಯೂಸ್ ಓದಲು ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿರಿ...





http://www.vknewz.com

Jan 6, 2010

ಜನಾರ್ದನ ರೆಡ್ಡಿಗೆ ಜಾಮೀನು ರಹಿತ ಬಂಧನ ವಾರಂಟ್


ಸಂಡೂರು: ಗಣಿ ವ್ಯಾಜ್ಯ ಕುರಿತು ಎರಡು ವರ್ಷದಿಂದ ನ್ಯಾಯಾಲಯಕ್ಕೆ ಹಾಜರಾಗದ ಹಿನ್ನಲೆಯಲ್ಲಿ ರಾಜ್ಯ ಪ್ರವಾಸೋದ್ಯಮ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜನಾರ್ದನ ರೆಡ್ಡಿ ಅವರಿಗೆ ಸಂಡೂರು ನ್ಯಾಯಾಲಯ ಜಾಮೀನು ರಹಿತ ವಾರೆಂಟ್ ಹೊರಡಿಸಿದೆ.

ಕರ್ನಾಟಕ ಗಡಿ ಗುರುತು ನಾಶ ವಿವಾದಕ್ಕೆ ಸಂಬಂಧಿಸಿದಂತೆ ಟಿ‌ಎನ್‌ಆರ್ ಮೈನ್ಸ್‌ನ ಮಾಲೀಕ ಟಪಾಲ್ ನಾರಾಯಣ ರೆಡ್ಡಿ ಒ‌ಎಂಸಿಯ ಜನಾರ್ದನ ರೆಡ್ಡಿ, ರಾಮಚಂದ್ರ ರೆಡ್ಡಿ ಒಳಗೊಂಡಂತೆ ೪ ಮಂದಿ ವಿರುದ್ಧ ತೋ ರಣಗಲ್ ಪೊಲೀಸ್ ಠಾಣೆಯಲ್ಲಿ ೨೦೦೬ರಲ್ಲಿ ಪ್ರಕರಣ ದಾಖಲಿಸಿದ್ದರು.

ಗಡಿ ಗುರುತು ನಾಶಪಡಿಸಿದ, ಗುಂಪು ಕಟ್ಟಿಕೊಂಡು ಬೆದರಿಕೆ ಹಾಕಿದ ಬಗ್ಗೆ ಇವರ ವಿರುದ್ಧ ಪ್ರಕರಣ ದಾಖಲಾಗಿತ್ತು.

ನಾಲ್ವರಲ್ಲಿ ಜನಾರ್ದನ ರೆಡ್ಡಿ ಹಾಗೂ ರಾಮಚಂದ್ರ ರೆಡ್ಡಿ ಜಿಲ್ಲಾ ನ್ಯಾಯಾಲಯದಿಂದ ನಿರೀಕ್ಷಣಾ ಜಾಮೀನು ಪಡೆದಿದ್ದರು. ಸಂಡೂರು ನ್ಯಾಯಾಲಯದಿಂದಲೂ ಜಾಮೀನು ಪಡೆದಿದ್ದರು. ಈ ಪ್ರಕರಣದಲ್ಲಿ ಭಾಗಿ ಎನ್ನಲಾದ ಒಬ್ಬರು ಮರಣ ಹೊಂದಿದ್ದು, ಇನ್ನೊಬ್ಬರು ನ್ಯಾಯಾಲಯಕ್ಕೆ ಹಾಜರಾಗಿದ್ದರು.ಪ್ರಕರಣದ ಬಗ್ಗೆ ತನಿಖೆ ನಡೆಸಿದ ತೋರಣಗಲ್ ಪೊಲೀಸರು ೨೦೦೮ರಲ್ಲಿ ಸಂಡೂರು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.ಪೊಲೀಸರು ದೋಷಾರೋಪ ಪಟ್ಟಿ ಸಲ್ಲಿಸಿದ ನಂತರ ಸಚಿವ ಜನಾರ್ದನ ರೆಡ್ಡಿ ಹಾಗೂ ರಾಮಚಂದ್ರ ರೆಡ್ಡಿ ನ್ಯಾಯಾಲಯಕ್ಕೆ ಹಾಜರಾಗಿರಲಿಲ್ಲ.

ಈ ಹಿನ್ನೆಲೆಯಲ್ಲಿ ನ್ಯಾಯಾಧೀಶ ಕೆ.ಕೆ. ಅಮರನಾಥ ಡಿಸೆಂಬರ್ ೩೦ರಂದು ಜಾಮೀನು ರಹಿತ ವಾರಂಟ್ ಹೊರಡಿಸಿದ್ದಾರೆ.
ಕೃಪೆ : ಕನ್ನಡ ಪ್ರಭ

No comments: