
ಬೆಂಗಳೂರು, ಜ 5 : ಕೇಂದ್ರದ ಮಾಜಿ ಸಚಿವ ಬಸನಗೌಡ ಪಾಟೀಲ್ ಯತ್ನಾಳ್ ಬಿಜೆಪಿ ತೊರೆದು ಜಾತ್ಯಾತೀತ ಜನತಾದಳಕ್ಕೆ ಜನವರಿ 20ರಂದು ಸೇರ್ಪಡೆಯಾಗಲಿದ್ದಾರೆ. ಬಿಜಾಪುರದಲ್ಲಿ ನಡೆಯುವ ಸಮಾವೇಶದಲ್ಲಿ ಯತ್ನಾಳ್ ತಮ್ಮ ಅಪಾರ ಬೆಂಬಲಿಗರೊಂದಿಗೆ ಪಕ್ಷಕ್ಕೆ ಸೇರಲಿದ್ದಾರೆಂದು ಜೆಡಿಎಸ್ ಪಕ್ಷದ ಮೂಲಗಳುತಿಳಿಸಿವೆ.
ಜೆಡಿಎಸ್ ವರಿಷ್ಠರೊಂದಿಗೆ ಈಗಾಗಲೇ ಮಾತುಕತೆ ನಡೆಸಿರುವ ಯತ್ನಾಳ್, ಪಕ್ಷ ಸೇರುವುದನ್ನು ಖಚಿತ ಪಡಿಸಿದ್ದಾರೆ. ಬಿಜೆಪಿಯಲ್ಲಿ ಬಂಡಾಯದ ಬಾವುಟ ಹಾರಿಸಿರುವ ಯತ್ನಾಳ್, ಭಿನ್ನಮತಿಯರು ಮತ್ತು ಬಂಡಾಯಗಾರರ ಬೆಂಬಲಕ್ಕೆ ನಿಂತಿದ್ದಲ್ಲದೆ ಬಿಜೆಪಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದ್ದರು. ಬಿಜೆಪಿಯಲ್ಲಿ ನಿಷ್ಠಾವಂತರಿಗೆ ಅನ್ಯಾಯವಾಗುತ್ತಿದ್ದು ಮೂಲ ಕಾರ್ಯಕರ್ತರನ್ನು ಕಡೆಗಣಿಸಿ ವಲಸೆ ಬಂದವರಿಗೆಮಣೆ ಹಾಕಲಾಗುತ್ತಿದೆ ಎಂದು ಬಿಜೆಪಿ ಮುಖಂಡರ ವಿರುದ್ಧ ಪದೇಪದೇ ಆಕ್ಷೇಪ ಎತ್ತಿದ್ದರು.
No comments:
Post a Comment