ಕಾಸರಗೋಡು: ಮುಸ್ಲಿಂ ಲೀಗ್ ಕಾರ್ಯಕರ್ತನನ್ನು ಅಪರಿಚಿತ ದುಷ್ಕರ್ಮಿಗಳು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಕುಂಬಳೆಯ ಪೆರುವಾಡು ಎಂಬಲ್ಲಿ ನಡೆದಿದೆ.
ನಿನ್ನೆ ರಾತ್ರಿ 8.45ರ ಸುಮಾರಿಗೆ ಹಮೀದ್ ಯಾನೆ ಉಂಡೆ ಹಮೀದ್‌ನ ಮೃತದೇಹ ಫಿಶರೀಸ್ ಕಾಲೇಜು ಸಮೀಪ ರಸ್ತೆ ಬದಿಯಲ್ಲಿ ಕಂಡು ಬಂದಿದೆ. ಕುಂಬಳೆಯಲ್ಲಿ ಮೀನು ಕಾರ್ಮಿಕ ನಾಗಿ ದುಡಿಯುತ್ತಿದ್ದ ಹಮೀದ್ ವಿವಾಹಿತನಾಗಿದ್ದು, ಫಿಶರೀಸ್ ಕಾಲೋನಿಯಲ್ಲಿ ವಾಸವಾಗಿದ್ದ. ಕುಂಬಳೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
ಮೃತ ದೇಹವನ್ನು ಕಾಸರಗೋಡು ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿಡಲಾಗಿದೆ. ಕೊಲೆ ಯಾವ ಕಾರಣಕ್ಕೆ ನಡೆದಿದೆ ಮತ್ತು ಕೊಲೆ ನಡೆಸಿದವರ ವಿವರಗಳು ಇನ್ನಷ್ಟೇ ಹೊರಬೀಳಬೇಕಿದೆ. ಘಟನೆಯಿಂದ ಕುಂಬಳೆ ಪರಿಸರದಲ್ಲಿ ಉದ್ರಿಕ್ತ ಪರಿಸ್ಥಿತಿ ನಿರ್ಮಾಣ ವಾಗಿದೆ. ಇತ್ತೀಚಿನ ದಿನಗಳಲ್ಲಿ ಕಾಸರಗೋಡು ರಾಜಕೀಯ ಹತ್ಯೆ ಹಾಗೂ ಅಪರಾಧ ಚಟುವಟಿಕೆಗಳಿಂದ ತತ್ತರಿಸುತ್ತಿದೆ. ಕೆಲ ದಿನಗಳ ಹಿಂದೆ ದಾವೂದ್ ಎನ್ನುವ ಯುವಕನ ಕೊಲೆಯಾಗಿತ್ತು. ರಾಜಕೀಯ ಕಾರ್ಯಕರ್ತನ ಹತ್ಯೆಯಿಂದಾಗಿ ಕಾಸರಗೋಡಿನಲ್ಲಿ ಮತ್ತೊಮ್ಮೆ ಹಿಂಸೆ ಭುಗಿಲೇಳುವ ಸಾಧ್ಯತೆಯಿದೆ.
source: jayakirana
Jan 6, 2010
Subscribe to:
Post Comments (Atom)
No comments:
Post a Comment