ಟೀಂ ಇಂಡಿಯಾ ಕಪ್ತಾನ ಮಹೇಂದ್ರ ಸಿಂಗ್ ಧೋನಿ ಲಂಕಾ ಜೊತೆ ಫೈನಲ್ ಹಣಾಹಣಿಯಲ್ಲಿ ಸೋಲುಂಟಾಗಲು ಬ್ಯಾಟ್ಸ್‌ಮನ್‌ಗಳ ಶಾಟ್ ಸೆಲೆಕ್ಷನ್ ಸರಿಯಿಲ್ಲದಿದ್ದುದೇ ಕಾರಣ ಎಂದು ಸಿಟ್ಟು ಹೊರಹಾಕಿದ್ದಾರೆ. ಜೊತೆಗೆ ಗಾಯದ ಕಾರಣದಿಂದ ಆಶಿಶ್ ನೆಹ್ರಾ ಹೊರಗುಳಿದಿದ್ದೂ ತಂಡಕ್ಕೆ ನಷ್ಟವಾಯಿತು ಎಂದಿದ್ದಾರೆ.
ಶತಕ ಸಿಡಿಸಿದ ಸುರೇಶ್ ರೈನಾ (106), ರವೀಂದ್ರ ಜಡೇಜಾ (38) ಹಾಗೂ ಸೆಹ್ವಾಗ್ (42) ಹೊರತುಪಡಿಸಿದರೆ ಬಹುತೇಕ ಎಲ್ಲರೂ ಶಾಟ್ ಸೆಲೆಕ್ಟ್ ಮಾಡಿದ್ದೇ ಸರಿಯಿರಲಿಲ್ಲ. ಇದಷ್ಟೇ ಸೋಲಿಗೆ ಕಾರಣವಾಯಿತು ಎಂದು ಧೋನಿ ವಿಶ್ಲೇಷಿಸಿದರು.
ಬ್ಯಾಟ್ಸ್‌ಮನ್‌ಗಳು ಇನ್ನು ಮುಂದೆ ತುಂಬ ಜಾಗರೂಕರಾಗಿರಬೇಕು. ಸುರೇಶ್ ರೈನಾ ಅದ್ಭುತವಾಗಿ ಆಡಿದರು. ಅವರ ಕಾರಣದಿಂದ ಭಾರತ ತಂಡ ಲಂಕಾಕ್ಕೆ ಉತ್ತಮ ಸ್ಪರ್ಧೆಯನ್ನಾದರೂ ನೀಡುವಲ್ಲಿ ಶಕ್ಯವಾಯಿತು ಎಂದು ರೈನಾ ಪರ ಮೆಚ್ಚುಗೆ ವ್ಯಕ್ತಪಡಿಸಿದರು.
ಶ್ರೀಶಾಂತ್ ಆರಂಭದಲ್ಲಿ ಕೆಲವು ರನ್‌ಗಳನ್ನು ನೀಡಿದರಾದರೂ, ನಂತರ ತಮ್ಮ ಹಳೆಯ ಪಾರ್ಮ್‌ಗೆ ಮರಳಿದರು. ರೈನಾ ಔಟಾಗದೇ ಇದ್ದಿದ್ದರೆ ಗೆಲುವಿನ ಸಾಧ್ಯತೆಗಳಿದ್ದವೋ ಏನೋ ಎನ್ನುವ ಧೋನಿ, ರೈನಾ ಇನ್ನೂ 20 ರನ್ ಹೊಡೆದಿದ್ದರೂ ಸಾಕಿತ್ತು. ಆದರೆ ರೈನಾ ಈಗಷ್ಟೆ ಚಿಗುರುತ್ತಿರುವ ಪ್ರತಿಭೆ. ಹಾಗಾಗಿ ಅವರು ಉತ್ತಮ ಸಾಧನೆಯನ್ನೇ ತೋರಿದ್ದಾರೆ ಎಂದು ಶ್ಲಾಘಿಸಿದರು.
webdunia
Jan 14, 2010
Subscribe to:
Post Comments (Atom)
No comments:
Post a Comment