
ಪುತ್ತೂರು: ಇಲ್ಲಿನ ಕಿಲ್ಲೆ ಮೈದಾನದಲ್ಲಿ ಮುಖ್ಯಮಂತ್ರಿಯವರು ಪಾಲ್ಗೊಂಡ ಕಾರ್ಯಕ್ರಮ ಸೋಮವಾರ ನಡೆದ ಕಾರಣದಿಂದಾಗಿ ಕಿಲ್ಲೆ ಮೈದಾನದಲ್ಲಿ ಪ್ರತೀವಾರ ಸೋಮವಾರ ನಡೆಯುತ್ತಿದ್ದ ಸಂತೆ ವ್ಯಾಪಾರ ಅಸ್ತವ್ಯಸ್ಥಗೊಂಡು, ಸಂಚಾರ ವ್ಯವಸ್ಥೆ ಸಮಸ್ಯೆ ಎದುರಾಗಿ ಜನತೆ ಪರದಾಡುವಂತಾಯಿತು.
ಪ್ರತೀ ಸೋಮವಾರ ಪುತ್ತೂರಿನ ಕಿಲ್ಲೆ ಮೈದಾನದಲ್ಲಿ ವಾರದ ಸಂತೆ ನಡೆಯುತ್ತಿತ್ತು. ಎಂದಿನಂತೆ ಸಂತೆ ವ್ಯಾಪಾರಿಗಳು ತಮ್ಮ ಸರಕುಗಳೊಂದಿಗೆ ಪುತ್ತೂರಿಗೆ ಬಂದಿದ್ದರು. ಮುಖ್ಯಮಂತ್ರಿ ಯವರ ಕಾರ್ಯಕ್ರಮದ ಹಿನ್ನಲೆಯಲ್ಲಿ ಕಿಲ್ಲೆ ಮೈದಾನದಿಂದ ಸಂತೆ ವ್ಯಾಪಾರ ವನ್ನು ಸ್ಥಳಾಂತರಿಸಲಾಗಿತ್ತು. ಆದರೆ ಅವರಿಗೆ ಸಂತೆ ವ್ಯಾಪಾರ ನಡೆಸಲು ಪರ್ಯಾಯ ವ್ಯವಸ್ಥೆ ಕಲ್ಪಿಸಿಕೊಡದಿರುವುದು ಗೊಂದಲ ಸೃಷ್ಟಿಗೆ ಕಾರಣವಾಯಿತು.
ಕಿಲ್ಲೆ ಮೈದಾನದಲ್ಲಿ ಕಾರ್ಯಕ್ರಮ ಹಮ್ಮಿಕೊಂಡ ಕಾರಣ ಸಂತೆ ವ್ಯಾಪಾ ರಕ್ಕೆ ಹಳೆಯ ಎ.ಸಿ.ಕಚೇರಿ ಜಾಗದಲ್ಲಿ ವ್ಯವಸ್ಥೆ ಕಲ್ಪಿಸುವುದೆಂದು ಪ್ರಚಾರ ಮಾಡಲಾಗಿತ್ತು. ಆದರೆ ಸೋಮವಾರ ಬೆಳಿಗ್ಗೆ ಆ ಸ್ಥಳಕ್ಕೆ ಸಂತೆ ವ್ಯಾಪಾರಿಗಳು ತೆರಳಿದಾಗ ಪೊಲೀಸರು ಅವರನ್ನು ಹಿಂದಕ್ಕೆ ಕಳುಹಿಸಿದ್ದರೆಂದು ಆರೋಪ ವರ್ತಕ ವಲಯದಿಂದ ಕೇಳಿಬಂದಿದೆ.
ಸ್ಥಳಾವಕಾಶವಿಲ್ಲದೆ ಕಂಗಾಲಾದ
ನೂರಾರು ಮಂದಿ ಸಂತೆ ವ್ಯಾಪಾರಿ ಗಳು ಪುತ್ತೂರು ಸರ್ಕಾರಿ ಆಸ್ಪತ್ರೆಯ ಎದುರು ರಸ್ತೆಯಲ್ಲಿಯೇ ತಮ್ಮ ಸರಕುಗಳನ್ನು ಮಾರಾಟ ಮಾಡಲಾ ರಂಭಿಸಿದ ಪರಣಾಮವಾಗಿ ವಾಹನ ಮತ್ತು ಜನಸಂಚಾರಕ್ಕೆ ಸಮಸ್ಯೆಯಾಗಿ ಗೊಂದಲ ಸೃಷ್ಟಿಯಾ ಯಿತು. ವ್ಯಾಪಾರ ವಿಲ್ಲದೆ ತಲೆಯ ಮೇಲೆ ಕೈ ಇಟ್ಟು ಕೊಂಡು ಕುಳಿತಿದ್ದ ಸಂತೆ ವ್ಯಾಪಾರಿ ಗಳನೇಕರು ಮುಖ್ಯಮಂತ್ರಿಯವರಿಗೆ ಮತ್ತು ಆಡಳಿತ ವ್ಯವಸ್ಥೆಯ ವಿರುದ್ಧ ಹಿಡಿಶಾಪ ಹಾಕುತ್ತಿ ದ್ದುದು ಕಂಡು ಬಂತು.
ಸಾರ್ವಜನಿಕರು ಮತ್ತು ವಾಹನ ಚಾಲಕರು ಪರದಾಡಬೇಕಾದ ಸ್ಥಿತಿ ನಿರ್ಮಾಣವಾದಾಗ ಪುರಸಭಾ ಮುಖ್ಯಾಧಿಕಾರಿಗಳು ಅಲ್ಲಿಗೆ ಆಗಮಿಸಿ, ಆ ವ್ಯಾಪ್ತಿಯಲ್ಲಿ ವಾಹನ ಸಂಚಾರಕ್ಕೆ ನಿಷೇಧ ಹೇರಿದರು. ಇದರಿಂದಾಗಿ ವಾಹನ ಚಾಲಕರು ಇಕ್ಕಟ್ಟಿಗೆ ಸಿಲುಕು ವಂತಾಯಿತು.
ಹಳೆಯ ಎ.ಸಿ.ಕಚೇರಿ ಸ್ಥಳದಲ್ಲಿ ಬಹಳಷ್ಟು ಸ್ಥಳಾವಕಾಶವಿದ್ದರೂ ಸಂತೆ ವ್ಯಾಪಾರವನ್ನು ಅಲ್ಲಿ ನಡೆಸಲು ಅವಕಾಶ ನೀಡದ ಅಧಿಕಾರಿಗಳೇ ಗೊಂದಲ ಸೃಷ್ಟಿಗೆ ಕಾರಣರಾಗಿದ್ದಾರೆ ಎಂಬ ಆರೋಪ ವ್ಯಕ್ತವಾಗಿದೆ.
jayakirana
No comments:
Post a Comment