VISHWA KANNADIGA NEWS - ವಿಶ್ವ ಕನ್ನಡಿಗ ನ್ಯೂಸ್

ವಿಶ್ವ ಕನ್ನಡಿಗ ನ್ಯೂಸ್ ಈಗ ಹೊಸ ತಾಣದಲ್ಲಿ

ಆತ್ಮೀಯ ಓದುಗರೇ ವಿಶ್ವ ಕನ್ನಡಿಗ ನ್ಯೂಸ್ ಓದಲು ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿರಿ...





http://www.vknewz.com

Jan 7, 2010

ಹಜ್‌ನಂತೆ ಅಯ್ಯಪ್ಪ ಭಕ್ತರಿಗೂ ಸಹಾಯಧನ ಕೊಡಿ: ಮುತಾಲಿಕ್


ಹಜ್ ಯಾತ್ರಾರ್ಥಿಗಳಿಗೆ ನೀಡುವಂತೆ ಶಬರಿಮಲೆಗೆ ತೆರಳುವ ಹಿಂದೂ ಭಕ್ತರಿಗೂ ಕೂಡ ರಾಜ್ಯ ಸರ್ಕಾರ ಸಹಾಯಧನ ನೀಡಬೇಕೆಂದು ಶ್ರೀರಾಮಸೇನೆ ಒತ್ತಾಯಿಸಿದೆ.

ಕೇರಳದಲ್ಲಿನ ಪ್ರಸಿದ್ಧ ಯಾತ್ರಾ ಸ್ಥಳವಾಗಿರುವ ಶಬರಿಮಲೆಗೆ ತೆರಳುವ ಪ್ರತಿಯೊಬ್ಬ ಭಕ್ತನಿಗೂ 5ಸಾವಿರ ರೂಪಾಯಿ ಧನಸಹಾಯ ನೀಡಬೇಕೆಂದು ಶ್ರೀರಾಮಸೇನೆಯ ವರಿಷ್ಠ ಪ್ರಮೋದ್ ಮುತಾಲಿಕ್ ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದ್ದಾರೆ.

ಶಬರಿಮಲೆಯ ಅಯ್ಯಪ್ಪ ಕೋಟ್ಯಂತರ ಹಿಂದೂಗಳ ಆರಾಧ್ಯ ದೇವರಾಗಿದ್ದು, ಇಲ್ಲಿಗೆ ಪ್ರತಿವರ್ಷ ಲಕ್ಷಾಂತರ ಭಕ್ತರು ತೆರಳುತ್ತಾರೆ. ಆ ನಿಟ್ಟಿನಲ್ಲಿ ಹಜ್ ಯಾತ್ರಿಗಳಿಗೆ ಸರ್ಕಾರ ಧನಸಹಾಯದ ನೆರವು ನೀಡುವಂತೆ ಅಯ್ಯಪ್ಪ ಭಕ್ತರಿಗೂ ಸಹಾಯಧನ ನೀಡಲಿ ಎಂದು ಹೇಳಿದರು.

ಕಳೆದ ವರ್ಷ ಜನವರಿ ತಿಂಗಳಿನಲ್ಲಿ ಮಂಗಳೂರಿನ ಪಬ್‌ವೊಂದರಲ್ಲಿ ಯುವತಿಯರ ಮೇಲೆ ಹಲ್ಲೆ ಹಾಗೂ ಪ್ರೇಮಿಗಳ ದಿನಾಚರಣೆಯಂದು ಕಾಣಸಿಗುವ ಜೋಡಿಗಳಿಗೆ ಸ್ಥಳದಲ್ಲೇ ಮದುವೆ ಮಾಡಿಸುವುದಾಗಿ ಹೇಳಿಕೆಗಳನ್ನು ನೀಡುವ ಮೂಲಕ ಶ್ರೀರಾಮಸೇನೆ ರಾಷ್ಟ್ರಾದ್ಯಂತ ವಿವಾದಕ್ಕೀಡಾಗಿತ್ತು.
source: webdunia

No comments: