VISHWA KANNADIGA NEWS - ವಿಶ್ವ ಕನ್ನಡಿಗ ನ್ಯೂಸ್

ವಿಶ್ವ ಕನ್ನಡಿಗ ನ್ಯೂಸ್ ಈಗ ಹೊಸ ತಾಣದಲ್ಲಿ

ಆತ್ಮೀಯ ಓದುಗರೇ ವಿಶ್ವ ಕನ್ನಡಿಗ ನ್ಯೂಸ್ ಓದಲು ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿರಿ...





http://www.vknewz.com

Jan 7, 2010

ಮರಳು ಮಾಫಿಯಾ ಕೃತ್ಯ: ಟಿವಿ9 ಪತ್ರಕರ್ತನ ಮೇಲೆ ಹಲ್ಲೆ

ವಿಟ್ಲ: ವಿಟ್ಲ, ಕೇರಳ ಗಡಿಭಾಗದಲ್ಲಿ ಮರಳು ಮಾಫಿಯಾದ ಅಟಾಟೋಪ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ನಿನ್ನೆ ಅಕ್ರಮ ಮರಳುಗಾರಿಕೆಯ ಚಿತ್ರೀಕರಣ ನಡೆಸಿದ ಟಿವಿ9 ವರದಿಗಾರನ ಮೇಲೆ ಗುಂಪೊಂದು ತೀವ್ರವಾಗಿ ಹಲ್ಲೆ ಮಾಡಿ ಕ್ಯಾಮರಾ ಹಾಗೂ ವಾಹನವನ್ನು ಜಖಂ ಮಾಡಿದೆ.

ಕರ್ನಾಟಕದ ಬಾಕ್ರಬೈಲ್ ಆಸುಪಾಸು ಅಕ್ರಮ ಮರಳು ಮಾಫಿಯಾ ಕಾರ್ಯಾಚರಿಸುತ್ತಿದ್ದು ನಿನ್ನೆ ಅದೇ ದಾರಿಯಾಗಿ ಮಂಜೇಶ್ವರ ಚರ್ಚ್ನಲ್ಲಿ ನಡೆಯುತ್ತಿದ್ದ ಕಾರ್ಯಕ್ರಮಕ್ಕೆ ಹೋಗುತ್ತಿದ್ದ ಟಿವಿ9 ಕ್ಯಾಮರಾಮೆನ್ ಹಾಗೂ ವರದಿಗಾರ ವಿಲ್ಫ್ರೆಡ್ ಇದನ್ನು ಚಿತ್ರೀಕರಿಸಿದ್ದರು. ಇದು ಅಕ್ರಮ ಮರಳು ಮಾಫಿಯಾದವರಿಗೆ ಗೊತ್ತಾಯಿತು. ಆದರೆ ತಾವು ಚಿತ್ರೀಕರಣ ನಡೆಸಿದ ಜಾಗ ಬಲಿಷ್ಠ ಅಕ್ರಮ ಮರಳು ಮಾಫಿಯಾದ ಹಿಡಿತದಲ್ಲಿದೆ ಎಂದು ತಿಳಿಯದ ಟಿವಿ9 ಕ್ಯಾಮರಾಮೆನ್ ಹಾಗೂ ವರದಿಗಾರ ವಿಲ್ಫ್ರೆಡ್ ಸಂಜೆ ವಾಪಾಸು ಬಂದಾಗ ಕಾದು ಕುಳಿತಿದ್ದ ತಂಡ ವಿಲ್ಫ್ರೆಡ್ ಅವರನ್ನು ಕೇರಳದ ಗಡಿಭಾಗದ ಕಜೆಪದವು ಎಂಬಲ್ಲಿಗೆ ಕರೆದೊಯ್ದು ಗಂಭೀರ ಸ್ವರೂಪದಲ್ಲಿ ಹಲ್ಲೆ ಮಾಡಿದರು ಎಂದು ತಿಳಿದುಬಂದಿದೆ.

ಹಲ್ಲೆಯ ಸಂದರ್ಭ ವಿಲ್ಫ್ರೆಡ್ ಅವರ ಕ್ಯಾಮರಾಕ್ಕೆ ಹಾನಿ ಮಾಡಲಾಗಿದೆ. ವಾಹನಕ್ಕೂ ಹಾನಿಯಾಗಿದೆ. ಮರಳು ಮಾಫಿಯಾದ ತಂಡ ಕಜೆಪದವಿವ ಮದರಸದ ಎದುರು ಹಲ್ಲೆ ಮಾಡಿತು ಎಂದು ಹಲ್ಲೆಗೊಳಗಾದ ವಿಲ್ಫ್ರೆಡ್ ತಿಳಿಸಿದ್ದಾರೆ. ಬಂಟ್ವಾಳ ಸರ್ಕಲ್ ಇನ್ಸ್ಪೆಕ್ಟರ್ ನಂಜುಂಡೆಗೌಡ ಅವರ ತಂಡ ಹಾಗೂ ಕೇರಳ ಪೊಲೀಸರು ಹಲ್ಲೆಕೋರರಲ್ಲಿ ಓರ್ವನನ್ನು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ. ಹಲ್ಲೆಕೋರರ ಶೋಧ ಕಾರ್ಯ ನಡೆದಿದೆ ಎಂದು ಪೊಲೀಸರು ಪತ್ರಿಕೆಗೆ ತಿಳಿಸಿದ್ದಾರೆ.

source: jayakirana

No comments: