VISHWA KANNADIGA NEWS - ವಿಶ್ವ ಕನ್ನಡಿಗ ನ್ಯೂಸ್

ವಿಶ್ವ ಕನ್ನಡಿಗ ನ್ಯೂಸ್ ಈಗ ಹೊಸ ತಾಣದಲ್ಲಿ

ಆತ್ಮೀಯ ಓದುಗರೇ ವಿಶ್ವ ಕನ್ನಡಿಗ ನ್ಯೂಸ್ ಓದಲು ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿರಿ...





http://www.vknewz.com

Jan 14, 2010

ರೈತರ ಕಣ್ಣೀರು ನಿಮ್ಮನ್ನು ಮುಗಿಸಲಿದೆ.. ಜನಾರ್ದನ ಪೂಜಾರಿ ಹೇಳಿಕೆ

‘ನೈಸ್ ವಿವಾದಕ್ಕೆ ಸಂಬಂಧಿಸಿದಂತೆ ಮೂಲ ಒಪ್ಪಂದದ ದಾಖಲೆಗಳ ಸಮೇತ ರೈತರ ಜತೆ ಕುಳಿತು ಚರ್ಚಿಸಿ. ಯೋಜನೆ ಜಾರಿಗೆ ಮನವೊಲಿಸಿ. ಇಲ್ಲದಿದ್ದರೆ ರೈತರ ಕಣ್ಣೀರು ನಿಮ್ಮನ್ನು ಮುಗಿಸಿಬಿಡುತ್ತದೆ...’



ಬೆಂಗಳೂರು: ‘ನೈಸ್ ವಿವಾದಕ್ಕೆ ಸಂಬಂಧಿಸಿದಂತೆ ಮೂಲ ಒಪ್ಪಂದದ ದಾಖಲೆಗಳ ಸಮೇತ ರೈತರ ಜತೆ ಕುಳಿತು ಚರ್ಚಿಸಿ. ಯೋಜನೆ ಜಾರಿಗೆ ಮನವೊಲಿಸಿ. ಇಲ್ಲದಿದ್ದರೆ ರೈತರ ಕಣ್ಣೀರು ನಿಮ್ಮನ್ನು ಮುಗಿಸಿಬಿಡುತ್ತದೆ...’

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಉದ್ದೇಶಿಸಿ ಹೀಗೆ ಹೇಳಿದ್ದು ಕಾಂಗ್ರೆಸ್‌ನ ಹಿರಿಯ ಮುಖಂಡ ಬಿ.ಜನಾರ್ದನ ಪೂಜಾರಿ.

ಪಕ್ಷದ ಕಚೇರಿಯಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮೂಲ ಒಪ್ಪಂದದಲ್ಲಿ ಏನಿದೆ ಎನ್ನುವುದನ್ನು ರೈತರ ಬಳಿಗೇ ಹೋಗಿ ಹೇಳಿ. ಹಾಗೆಯೇ ನೈಸ್ ಕಂಪೆನಿಯವರನ್ನೂ ಕರೆದು, ಭೂಮಿ ಕಳೆದುಕೊಳ್ಳುವ ರೈತರಿಗೆ ಹೆಚ್ಚಿನ ಪರಿಹಾರ ಕೊಡುವಂತೆ ಸೂಚನೆ ಕೊಡಿ. ಈ ಕೆಲಸ ಮಾಡಲು ನಿಮಗೇಕೆ ಆಗುತ್ತಿಲ್ಲ’ ಎಂದು ಪ್ರಶ್ನಿಸಿದರು.

‘ಆರ್‌ಎಸ್‌ಎಸ್ ಕಚೇರಿಗೆ ಹೋಗಲು ಸಮಯ ಇರುತ್ತದೆ. ಆದರೆ, ಅನ್ನದಾತರ ಬಳಿಗೆ ಹೋಗಿ ಅವರ ಸಮಸ್ಯೆ ಬಗ್ಗೆ ಚರ್ಚಿಸಲು ಏಕಾಗುತ್ತಿಲ್ಲ. ಮೂಲ ಒಪ್ಪಂದದಲ್ಲಿ ಏನಿದೆ. ಈಗ ಏನೇನು ನಡೆಯುತ್ತಿದೆ ಎನ್ನುವುದರ ಬಗ್ಗೆ ಮನವರಿಕೆ ಮಾಡಿ’ ಎಂದು ಮುಖ್ಯಮಂತ್ರಿಯವರಿಗೆ ಸೂಚಿಸಿದರು.

ಕ್ಷಮೆ ಯಾಚಿಸಲಿ: ನೈಸ್ ವಿಚಾರದಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಮುಖ್ಯಮಂತ್ರಿ ವಿರುದ್ಧ ಬಳಸಿದ ಭಾಷೆ ಸರಿ ಇಲ್ಲ. ಇದನ್ನು ಯಾರೂ ಮೆಚ್ಚಲು ಸಾಧ್ಯ ಇಲ್ಲ. ಹೀಗಾಗಿ ಅವರು ಜನರ ಕ್ಷಮೆ ಕೇಳಬೇಕು ಎಂದು ಆಗ್ರಹಪಡಿಸಿದರು.

ಹಾಗಂತ, ಯಡಿಯೂರಪ್ಪ ಅವರೇನೂ ಕಡಿಮೆ ಇಲ್ಲ. ರೈತರ ವಿರುದ್ಧ ಗೋಲಿಬಾರ್, ಲಾಠಿ ಪ್ರಹಾರ ಮಾಡಿಸಿದರು. ಅವರಿಗೂ ಮನುಷ್ಯತ್ವ ಇಲ್ಲ. ಹೀಗಾಗಿ ಅವರು ಕೂಡ ರೈತರ ಕ್ಷಮೆ ಕೋರಬೇಕು’ ಎಂದು ಒತ್ತಾಯಿಸಿದರು.

‘ನಿಮ್ಮನ್ನು (ಯಡಿಯೂರಪ್ಪ) ನಿಮ್ಮ ಸಚಿವರೇ ಕಂಸ ಅಂದರು. ಇನ್ನು ಮುಂದೆ ನಿಮ್ಮ ಮುಖ ನೋಡುವುದಿಲ್ಲ ಎಂದರು. ಆಗ ನಿಮಗೇಕೆ ಸಿಟ್ಟು ಬರಲಿಲ್ಲ. ದೇವೇಗೌಡರು ಹೇಳಿದ್ದಕ್ಕೆ ಇಷ್ಟೊಂದು ಸಿಟ್ಟೇಕೆ? ಅವರು ಒಮ್ಮೆ ಹೇಳಿದ್ದನ್ನೇ ನಿಮ್ಮ ಸಂಗಡಿಗರು ಅನೇಕ ಬಾರಿ ಹೇಳುತ್ತ, ನಿಮ್ಮ ವಿರುದ್ಧ ಪಿತೂರಿ ನಡೆಸುತ್ತಿದ್ದಾರೆ. ಆ ಬಗ್ಗೆ ಎಚ್ಚರದಿಂದ ಇರಿ’ ಎಂದು ಹೇಳಿದರು.

‘ನೈಸ್ ವಿಚಾರದಲ್ಲಿ ದೇವೇಗೌಡರು ಮತ್ತು ಆನಂತರ ಬಂದ ಕಾಂಗ್ರೆಸ್ ಸರ್ಕಾರಗಳು ತಪ್ಪು ಮಾಡಿರಬಹುದು. ಹಾಗಂತ ನೀವೇಕೆ ತಪ್ಪು ಮಾಡುತ್ತೀರಿ. ಅದನ್ನು ಸರಿಪಡಿಸಿ, ರೈತರಿಗೆ ನ್ಯಾಯ ಒದಗಿಸಿ’ ಎಂದೂ ಒತ್ತಾಯಿಸಿದರು.
ಗೌಡರ ಬಗ್ಗೆ ಮೆಚ್ಚುಗೆ: ಮಾಜಿ ಪ್ರಧಾನಿ ಎಂಬ ಅಹಂ ಇಲ್ಲದೆ ದೇವೇಗೌಡರು ರೈತರ ಮಧ್ಯೆ ಕುಳಿತು ಚಳವಳಿ ನಡೆಸುತ್ತಿರುವುದನ್ನು ತಾವು ಮೆಚ್ಚುವುದಾಗಿಯೂ ಪೂಜಾರಿ ಹೇಳಿದರು. ‘ಅವರ ಹೋರಾಟವನ್ನು ಒಪ್ಪುತ್ತೇನೆ ಮತ್ತು ಗೌರವಿಸುತ್ತೇನೆ’ ಎಂದೂ ಹೇಳಿದರು.

ಸಚಿವ ಕೆ.ಎಸ್.ಈಶ್ವರಪ್ಪ ಅವರನ್ನು ಕುರಿತು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಬಳಸಿದ ಭಾಷೆ ಕೂಡ ಸರಿ ಇಲ್ಲ. ಅವರು ಕೂಡ ಜನರ ಕ್ಷಮೆ ಕೋರಬೇಕು ಎಂದು ನುಡಿದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ರಾಮಚಂದ್ರಪ್ಪ, ಕಾರ್ಯದರ್ಶಿ ಕೆಂಚೇಗೌಡ ಸೇರಿದಂತೆ ಇತರರು ಈ ಸಂದರ್ಭದಲ್ಲಿ ಹಾಜರಿದ್ದರು.

Prajavani

1 comment:

MOHD. ARIF said...

very right comments by janardhana poojary
hatsaff