
ಮುಂಬೈ, ಜ. 5 : ರಿಯಾಲಿಟಿ ಷೋದಲ್ಲಿ ಭಾಗವಹಿಸದಿರುವಂತೆ ಪೋಷಕರು ಒತ್ತಾಯ ಹೇರಿದ್ದರಿಂದ ಮನನೊಂದ ಶಾಲಾ ಬಾಲಕಿ ಅತ್ಮಹತ್ಯೆ ಮಾಡಿಕೊಂಡರುವ ದಾರುಣ ಘಟನೆ ನಗರದ ಡೊಂಬಿವಲಿ ಸಾಯಿದರ್ಶನ್ ಅಪಾರ್ಟ್ ಮೆಂಟ್ ನಲ್ಲಿ ನಡೆದಿದೆ.
ನೇಹಾ ಸಾವಂತ್(11) ಅತ್ಮಹತ್ಯೆ ಮಾಡಿಕೊಂಡ ನತದೃಷ್ಟೆ. ಬೂಗಿವೂಗಿ ಸಹಿತ ಮೂರು ರಿಯಾಲಿಟಿ ಷೋಗಳಲ್ಲಿ ನೇಹಾ ಭಾಗವಹಿಸಿದ್ದಳು. ಡ್ಯಾನ್ಸ್ ಅಕಾಡಮಿ ವಿದ್ಯಾರ್ಥಿನಿಯೂ ಆಗಿದ್ದ ಆಕೆಗೆ ನೃತ್ಯದಲ್ಲಿ ಆಸಕ್ತಿ ಮತ್ತು ವಿಶೇಷ ಪರಿಣಿತಿಯಿತ್ತು. ವಿದ್ಯಾಭ್ಯಾಸದ ಕಡೆಗೆ ಹೆಚ್ಚಿನ ಗಮನ ಹರಿಸಬೇಕೆಂಬ ಉದ್ದೇಶದಿಂದ ಹೆತ್ತವರು ನೇಹಾಳನ್ನು ಡ್ಯಾನ್ಸ್ ಅಕಾಡಮಿಯಿಂದ ಬಿಡಿಸಿದ್ದರು. ಇದರಿಂದ ತೀವ್ರ ಮನನೊಂದ ನೇಹಾ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ದುಪ್ಪಟ್ಟಾವನ್ನೇ ಉರುಳಾಗಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಕೃಪೆ: ದಟ್ಸ್ ಕನ್ನಡ
No comments:
Post a Comment