
ಬಜಪೆ: ಗಣರಾಜ್ಯೋತ್ಸವ ಆಚರಣೆ ಗೆಂದು ಸಂಭ್ರಮದಲ್ಲಿ ಸೈಕಲೇರಿಕೊಂಡು ಹೋಗುತ್ತಿದ್ದ ಶಾಲಾ ಬಾಲಕ ಟೆಂಪೋದಡಿಗೆ ಬಿದ್ದು ಸಾವನ್ನಪ್ಪಿದ ದಾರುಣ ಘಟನೆ ಮಳಲಿಯಲ್ಲಿ ಸಂಭವಿಸಿದೆ.
ಮೃತಪಟ್ಟ ಬಾಲಕ ಅಜಿತ್ ಕುಮಾರ್ (15) ಮಲ್ಲೂರಿನ ರುಕ್ಮಯ ಪೂಜಾರಿ ಎಂಬವರ ನಾಲ್ಕು ಮಕ್ಕಳಲ್ಲಿ ಮೂರನೆ ಯವನಾಗಿದ್ದಾನೆ. ಅಜಿತ್ ಮಳಲಿಯ ಸರಕಾರಿ ಪ್ರೌಢಶಾಲೆಯಲ್ಲಿ 8ನೇ ತರಗತಿ ವಿದ್ಯಾರ್ಥಿಯಾಗಿದ್ದು ಮಳಲಿ ಸಂಕೇಶದಲ್ಲಿ ರುವ ಅಜ್ಜಿ ಮನೆಯಲ್ಲಿ ವಾಸವಾಗಿದ್ದ. ನಿನ್ನೆ ಶಾಲೆಯಲ್ಲಿ ಗಣರಾಜ್ಯೋತ್ಸವ ಆಚರಣೆ ಯಿದ್ದು, ಅದರಲ್ಲಿ ಭಾಗವಹಿಸಲು ಅಜಿತ್ ಹಾಗೂ ಆತನ ಸ್ನೇಹಿತ ಮಸೂದ್ ಬೇರೆ ಬೇರೆ ಸೈಕಲೇರಿಕೊಂಡು ಹೊರಟಿದ್ದರು. ಅಷ್ಟರಲ್ಲಿ ಬೈಹುಲ್ಲು ತುಂಬಿಕೊಂಡು ಬರ ಲೆಂದು ಹೊರಟಿದ್ದ ಟೆಂಪೊವೊಂದು ಚಾಲಕನ ಅಜಾಗರೂಕತೆಯಿಂದಾಗಿ ಅಜಿತ್‌ನ ದೇಹದ ಮೇಲೆಯೇ ಹರಿದು ಹೋದ ಪರಿ ಣಾಮ ಬಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಸ್ವಲ್ಪ ಮುಂದೆ ಇನ್ನೊಂದು ಸೈಕಲಲ್ಲಿ ಹೋಗುತ್ತಿದ್ದ ಈತನ ಮಿತ್ರ ಮಸೂದ್ ಘಟನೆಯ ಪ್ರತ್ಯಕ್ಷದರ್ಶಿಯಾಗಿದ್ದು ಅಪಘಾತ ನೋಡಿ ಸ್ಥಳದಲ್ಲೇ ಮೂರ್ಛೆಹೋಗಿದ್ದ. ಅವಘಡ ಸಂಭವಿಸಿದ ತಕ್ಷಣ ಟೆಂಪೋ ಚಾಲಕ ಪರಾರಿಯಾಗಿದ್ದಾನೆ. ಬಾಲಕನ ಶವವನ್ನು ಗಂಜಿಮಠ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಶವಪರೀಕ್ಷೆ ನಡೆಸಿದ ಬಳಿಕ ವಾರೀಸುದಾರರಿಗೆ ಬಿಟ್ಟುಕೊಡಲಾಯಿತು.
ಮಾನವೀಯತೆ ಮರೆತ 108ರ ಚಾಲಕ
ಘಟನೆ ಬೆಳಿಗ್ಗೆ 9 ಗಂಟೆಗೆ ಸಂಭವಿಸಿದ್ದು ಸ್ಥಳಕ್ಕೆ ಬಜಪೆಯ 108 ಆಂಬ್ಯುಲೆನ್ಸ್ ಆಗಮಿಸಿತ್ತು. ಆದರೆ 108 ಆಂಬ್ಯುಲೆನ್ಸ್‌ನ್ನು ಗಾಯಾಳುಗಳನ್ನು ಮಾತ್ರ ಸಾಗಿಸಲು ಬಳಸಲಾಗುತ್ತದೆ, ಶವವನ್ನು ಸಾಗಿಸಲಾಗುವುದಿಲ್ಲ ಎಂಬ ನೆಲೆಯಲ್ಲಿ ಅದು ವಾಪಾಸ್ ಹೋಯಿತು. ಬೇರೆ ಖಾಸಗಿ ಆಂಬ್ಯುಲೆನ್ಸ್‌ನ ವ್ಯವಸ್ಥೆ ತಡವಾದುದರಿಂದ 11 ಗಂಟೆಯವರೆಗೂ ಶವವನ್ನು ರಸ್ತೆಯಲ್ಲೇ ಇಟ್ಟು ಕಾಯಬೇಕಾಯಿತು. ಅಂಬ್ಯುಲೆನ್ಸ್ ಸಿಬ್ಬಂದಿಯ ಈ ಅಮಾನವೀಯ ಕೃತ್ಯವನ್ನು ಸಾರ್ವಜನಿಕರು ತೀವ್ರವಾಗಿ ಖಂಡಿಸಿದ್ದಾರೆ.
source: jayakirana
No comments:
Post a Comment