ಜನರನ್ನು ವಂಚಿಸುವ ನಿಟ್ಟಿನಲ್ಲಿ ರೈತರ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ನೀಡುವ ಭರವಸೆಗಳು ಹಸಿರು ಶಾಲಿನೊಳಗೆ ದೊಣ್ಣೆ ಇಟ್ಟುಕೊಂಡು ಆಡುವ ಬೆಣ್ಣೆ ಮಾತುಗಳಾಗಿವೆ ಎಂದು ರೈತ ಸಂಘದ ರಾಜ್ಯ ಘಟಕದ ಕಾರ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಕಿಡಿಕಾರಿದ್ದಾರೆ.
ಮಲ್ಲಶೆಟ್ಟಿಹಳ್ಳಿ-ಹೊನ್ನೂರು ಗೊಲ್ಲರಹಟ್ಟಿ ಮಧ್ಯೆ ಬುಧವಾರ ಭೂಸ್ವಾಧೀನ ವಿರೋಧಿಸಿ ನಡೆದ ರೈತರ ಬೃಹತ್ ಸಮಾವೇಶದಲ್ಲಿ ಅವರು ಮಾತನಾಡಿದರು.
ಕೇವಲ ಅಧಿಕಾರದ ಗದ್ದುಗೆ ಏರಲು ರೈತರು ಮತ್ತು ಜನಸಾಮಾನ್ಯರಿಗೆ ಸುಳ್ಳಿನ ಭರವಸೆ ನೀಡಿದ ಮುಖ್ಯಮಂತ್ರಿಗಳು ಬೆಣ್ಣೆಯಂತ ಮಾತನಾಡಿದರೂ ಕೂಡ ಬಗಲಲ್ಲಿ ದೊಣ್ಣೆ ಇಟ್ಟುಕೊಳ್ಳುವ ಪ್ರವೃತ್ತಿ ಎಂದು ವಾಗ್ದಾಳಿ ನಡೆಸಿದರು.
ರೈತರ ಸಾಲಮನ್ನಾ ಮಾಡುತ್ತೇವೆ, ಪಂಪ್‌ಸೆಟ್‌ಗಳಿಗೆ 24ಗಂಟೆ ಕಾಲ ವಿದ್ಯುತ್ ನೀಡುತ್ತೇವೆ, ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡುತ್ತೇವೆ ಎಂದೆಲ್ಲಾ ಭರವಸೆ ನೀಡಿದ ಮುಖ್ಯಮಂತ್ರಿಗಳು ಇದೀಗ ಮಾರ್ಯಾದೆ ಬಿಟ್ಟವರಂತೆ, ಚುನಾವಣೆ ಸಂದರ್ಭದಲ್ಲಿ ಮತಗಳಿಸಲು ಆ ರೀತಿ ಹೇಳಿದ್ದೆ, ಬೊಕ್ಕಸದಲ್ಲಿ ಹಣವೇ ಇಲ್ಲ ಎಂದಾದ ಮೇಲೆ ರೈತರ ಸಾಲ ಮನ್ನಾ ಮಾಡುವುದು ಹೇಗೆಂದು ಅವರೇ ಪ್ರಶ್ನಿಸುತ್ತಾರೆ ಎಂದು ತರಾಟೆಗೆ ತೆಗೆದುಕೊಂಡರು.
ರೈತರ ಮೇಲೆ ಕೈ ಎತ್ತುವ, ಕೈಕೋಳ ತೊಡಿಸುವ ಈ ಸರ್ಕಾರಕ್ಕೆ ಮಾನ-ಮರ್ಯಾದೆ ಇಲ್ಲ. ರೈತರು ಅಸಂಸ್ಕೃತರಲ್ಲ, ರಾಜಕೀಯ ಪಕ್ಷದ ಕಾರ್ಯಕರ್ತರು ಅಲ್ಲ, ಅಂತಹವರ ಮೇಲೆ ಸರ್ಕಾರ ಲಾಠಿ ಪ್ರಹಾರ ನಡೆಸಿ, ಕೈಕೋಳ ಹಾಕಲು ಮುಂದಾಗಿರುವ ಈ ಸರ್ಕಾರಕ್ಕೆ ಏನೆನ್ನಬೇಕು ಎಂದು ಕೋಡಿಹಳ್ಳಿ ಪ್ರಶ್ನಿಸಿದ್ದಾರೆ.
Source - Webdunia
Subscribe to:
Post Comments (Atom)
No comments:
Post a Comment