VISHWA KANNADIGA NEWS - ವಿಶ್ವ ಕನ್ನಡಿಗ ನ್ಯೂಸ್

ವಿಶ್ವ ಕನ್ನಡಿಗ ನ್ಯೂಸ್ ಈಗ ಹೊಸ ತಾಣದಲ್ಲಿ

ಆತ್ಮೀಯ ಓದುಗರೇ ವಿಶ್ವ ಕನ್ನಡಿಗ ನ್ಯೂಸ್ ಓದಲು ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿರಿ...





http://www.vknewz.com

Jan 14, 2010

ಇತಿಹಾಸದ ಹೊಸ್ತಿಲಲ್ಲಿ ಕರ್ನಾಟಕ

ಈವರೆಗೆ ಒಟ್ಟಾರೆ 75 ಫೈನಲ್ ಪಂದ್ಯಗಳು ನಡೆದಿದ್ದು, ಕೇವಲ ಒಮ್ಮೆ ಮಾತ್ರ ತಂಡವೊಂದು ಪಂದ್ಯದ ನಾಲ್ಕನೇ ಇನ್ನಿಂಗ್ಸ್‌ನಲ್ಲಿ 300ಕ್ಕೂ ಅಧಿಕ ಮೊತ್ತವನ್ನು ಬೆನ್ನಟ್ಟಿ ಗೆಲುವು ಪಡೆದಿದೆ.



ಮೈಸೂರು: ಕರ್ನಾಟಕಕ್ಕೆ ಇನ್ನೊಂದು ಇತಿಹಾಸ ನಿರ್ಮಿಸುವ ಅವಕಾಶ. ಹನ್ನೊಂದು ವರ್ಷಗಳ ಬಳಿಕ ಪ್ರಶಸ್ತಿಯ ಕನಸು ಕಾಣುತ್ತಿರುವ ಆತಿಥೇಯ ತಂಡ ಗ್ಲೇಡ್ಸ್ ಮೈದಾನದಲ್ಲಿ ನಡೆಯುತ್ತಿರುವ ಫೈನಲ್‌ನಲ್ಲಿ ಮುಂಬೈನ ಸವಾಲಿನ ಮೊತ್ತವನ್ನು ಯಶಸ್ವಿಯಾಗಿ ಬೆನ್ನಟ್ಟಿದ್ದೇ ಆದಲ್ಲಿ ಆ ಗೆಲುವು ದಾಖಲೆಯ ಪುಟ ಸೇರಲಿದೆ. ರಣಜಿ ಫೈನಲ್‌ನ ಇತಿಹಾಸದಲ್ಲೇ ಇಷ್ಟು ದೊಡ್ಡ ಮೊತ್ತವನ್ನು ಬೆನ್ನಟ್ಟಿ ಗೆಲುವು ಪಡೆದ ತಂಡ ಇನ್ನೊಂದಿಲ್ಲ.

ಈವರೆಗೆ ಒಟ್ಟಾರೆ 75 ಫೈನಲ್ ಪಂದ್ಯಗಳು ನಡೆದಿದ್ದು, ಕೇವಲ ಒಮ್ಮೆ ಮಾತ್ರ ತಂಡವೊಂದು ಪಂದ್ಯದ ನಾಲ್ಕನೇ ಇನ್ನಿಂಗ್ಸ್‌ನಲ್ಲಿ 300ಕ್ಕೂ ಅಧಿಕ ಮೊತ್ತವನ್ನು ಬೆನ್ನಟ್ಟಿ ಗೆಲುವು ಪಡೆದಿದೆ. 1937-38ರಲ್ಲಿ ಹೈದರಾಬಾದ್ ಹಾಗೂ ನವನಗರ ತಂಡಗಳ ನಡುವೆ ಮುಂಬೈನಲ್ಲಿ ನಡೆದ ಪಂದ್ಯದಲ್ಲಿ ಹೈದರಾಬಾದ್ ತಂಡ 310 ರನ್ನುಗಳ ಗುರಿಯನ್ನು ಯಶಸ್ವಿಯಾಗಿ ತಲುಪಿ, ಒಂದು ವಿಕೆಟ್ ಜಯ ಸಾಧಿಸಿತ್ತು.

ಅದಾದ ಬಳಿಕ ಯಾವ ತಂಡಗಳೂ ಈವರೆಗೂ 300 ರನ್‌ಗಳಿಗೂ ಹೆಚ್ಚು ಮೊತ್ತದ ಹಿಂದೆ ಬಿದ್ದು ಜಯ ಸಾಧಿಸಿದ ದಾಖಲೆಗಳಿಲ್ಲ ಎನ್ನುತ್ತಾರೆ ಅಂಕಿಅಂಶ ತಜ್ಞ ಎಚ್.ಆರ್. ಗೋಪಾಲಕೃಷ್ಣ.

ಆದರೆ, ಮುಂಬೈ ತಂಡ ಮಾತ್ರ ಒಮ್ಮೆ ಗೆಲುವಿನ ಸನಿಹಕ್ಕೆ ಬಂದು ಸೋತಿತ್ತು. 1990-91ರಲ್ಲಿ ಮುಂಬೈನಲ್ಲಿ ನಡೆದ ಫೈನಲ್‌ನ ಕಡೆಯ ಇನ್ನಿಂಗ್ಸ್‌ನಲ್ಲಿ ಹರಿಯಾಣ ಒಡ್ಡಿದ 352 ರನ್ನುಗಳ ಸವಾಲಿನ ಹಿಂದೆ ಬಿದ್ದ ಮುಂಬೈ 350 ರನ್ ಗಳಿಸಲಷ್ಟೇ ಶಕ್ತವಾಗಿತ್ತು. ಈ ಮೂಲಕ ಹರಿಯಾಣ ಕೇವಲ 2 ರನ್‌ಗಳ ಜಯದೊಂದಿಗೆ ಟ್ರೋಫಿ ಮುಡಿಗೇರಿಸಿತ್ತು.

Prajavani

No comments: