VISHWA KANNADIGA NEWS - ವಿಶ್ವ ಕನ್ನಡಿಗ ನ್ಯೂಸ್

ವಿಶ್ವ ಕನ್ನಡಿಗ ನ್ಯೂಸ್ ಈಗ ಹೊಸ ತಾಣದಲ್ಲಿ

ಆತ್ಮೀಯ ಓದುಗರೇ ವಿಶ್ವ ಕನ್ನಡಿಗ ನ್ಯೂಸ್ ಓದಲು ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿರಿ...





http://www.vknewz.com

Jan 26, 2010

ರಿಯಾದ್ (ಸೌದಿ ಅರೇಬಿಯಾ) ರಸ್ತೆ ಅಪಘಾತದಲ್ಲಿ ಕುಂಜತ್ತೂರಿನ ವ್ಯಕ್ತಿ ಮೃತ್ಯು . ಇಬ್ಬರ ಸ್ಥಿತಿ ಗಂಭೀರ

ರಿಯಾದ್ (ಸೌದಿ ಅರೇಬಿಯಾ) ಜನವರಿ೨೬ : ಮಕ್ಕಾದಿಂದ ಉಮ್ರಾ ನಿರ್ವಹಿಸಿ ಮರಳುತಿದ್ದ ಮಂಜೇಶ್ವರ ಸಮೀಪದ ಕುಂಜತ್ತೂರಿನ ಕುಟುಂಬವಿದ್ದ ಕಾರೊಂದು ಮುಂಭಾಗದ ಚಕ್ರ ಸಿಡಿದ ಕಾರಣ ಉರುಳಿ ಬಿದ್ದು ಓರ್ವ ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ರಿಯಾದ್ ಬಳಿ ಸಂಭವಿಸಿದೆ.
ಮೃತರನ್ನು ಕುಂಜತ್ತೂರಿನ ನಿವಾಸಿ ಜುಬೈರ್ ಎಂದು ಗುರುತಿಸಲಾಗಿದೆ.
ಇವರು ತಮ್ಮ ಪತ್ನಿ ಸಮೇತ ತಮ್ಮ ಇತರ ಕುಟುಂಬಿಕರೊಂದಿಗೆ ರಿಯಾದಿನಿಂದ ಮಕ್ಕಾಗೆ ತೆರಳಿ ಅಲ್ಲಿ ಉಮ್ರಾ ನಿರ್ವಹಿಸಿ ಮರಳಿ ರಿಯಾದಿಗೆ ಹಿಂದಿರುಗುತಿದ್ದಾಗ ಈ ಅವಘಡ ಸಂಭವಿಸಿದೆ. ಕಾರಿನಲ್ಲಿದ್ದ ಇವರ ಸಂಬಂಧಿಕ ಗರ್ಭಿಣಿ ಮಹಿಳೆಯೋರ್ವರು ತೀವ್ರವಾಗಿ ಗಾಯಗೊಂಡಿದ್ದು ಆಕೆಯ ಮಗು ಮೃತಪಟ್ಟಿರುವುದಾಗಿ ಆಕೆಯ ಸ್ಥಿತಿ ಗಂಭೀರವಿರುವುದಾಗಿಯೂ ತಿಳಿದು ಬಂದಿದೆ. ಅಪಘಾತದ ತೀವ್ರತೆಗೆ ಕಾರು ಪಲ್ಟಿ ಆಗಿದ್ದು ಆ ಸಂಧರ್ಭದಲ್ಲಿ ಕಾರಿನಲ್ಲಿದ್ದ ಇವರ ಸಂಬಂಧಿಕರ ಮಗುವೊಂದು ರಸ್ತೆಗೆ ಎಸೆಯಲ್ಪಟ್ಟ ಕಾರಣ ಆ ಮಗುವನ್ನು ಎತ್ತಿಕೊಳ್ಳಲು ಹೋದ ಇವರ ಪತಿಯ ಕಾಲಿನ ಮೇಲೆ ಟ್ರಕ್ ಒಂದು ಚಲಿಸಿದ ಕಾರಣ ಅವರ ಎರಡು ಕಾಲು ತುಂಡಾಗಿವೆ. ಒಟ್ಟಿನಲ್ಲಿ ಒಂದು ಅಪಘಾತ ಸಂಭವಿಸಿ ಚೆತರಿಸಿಕೊಳ್ಳುತ್ತಿದ್ದಂತೆ ನಡೆದ ಇನ್ನೊಂದು ಅಪಘಾತ ಮನ ಕಲುಕುವಂತಿತ್ತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಅಪಘಾತದ ವಿಷಯ ತಿಳಿಯುತ್ತಿದ್ದಂತೆ ಮಂಜೇಶ್ವರ ಮತ್ತು ಮಂಗಳೂರಿನ ಆಸುಪಾಸಿನ ನಿವಾಸಿಗಳು ಆಸ್ಪತ್ರೆಗೆ ಭೇಟಿ ನೀಡಿದ್ದು ಗಾಯಾಳುಗಳಿಗೆ ಸಾಂತ್ವಾನ ಹೇಳುತಿದ್ದರು. ಮೃತ ಜುಬೈರ್ರವರ ಮಗ್ಫಿರತಿಗಾಗಿ ದುವಾ ಮತ್ತು ಮಯ್ಯತ್ ನಮಾಜ್ ನಿರ್ವಹಿಸಬೇಕೆಂದು ಅವರ ಕುಟುಂಬಿಕರು ವಿನಂತಿಸಿದ್ದಾರೆ.
ವರದಿ : ಅಶ್ರಫ್ ಮಂಜ್ರಾಬಾದ್. ತಬೂಕ್. ಸೌದಿ ಅರೇಬಿಯಾ .

No comments: