ಇಲ್ಲಿನ ಶೇರ್ ಎ ಬಾಂಗ್ಲಾ ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ತ್ರಿಕೋನ ಸರಣಿಯ ಫೈನಲ್ ಪಂದ್ಯದಲ್ಲಿ ಬುಧವಾರ ಟಾಸ್ ಗೆದ್ದ ಶ್ರೀಲಂಕಾದಿಂದ ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಭಾರತವು ಆರಂಭದಲ್ಲಿಯೇ ಐದು ಪ್ರಮುಖ ವಿಕೆಟುಗಳನ್ನು ಪಟಪಟನೆ ಕಳೆದುಕೊಳ್ಳುವ ಮೂಲಕ ತೀವ್ರ ಆಘಾತ ಅನುಭವಿಸಿದ್ದು, ಅಗ್ರ ಕ್ರಮಾಂಕವು ಮತ್ತೊಮ್ಮೆ ತನ್ನ ವೈಫಲ್ಯವನ್ನು ಜಗಜ್ಜಾಹೀರು ಮಾಡಿದೆ.
ಇತ್ತೀಚಿನ ಮಾಹಿತಿಗಳ ಪ್ರಕಾರ ವೀರೇಂದ್ರ ಸೆಹ್ವಾಗ್ ಕೂಡ ಅರ್ಧಶತಕದಂಚಿನಲ್ಲಿ (42) ವಿಕೆಟ್ ಒಪ್ಪಿಸಿದ್ದು, ಭಾರತ 11 ಓವರುಗಳಲ್ಲಿ 5 ವಿಕೆಟ್ ಕಳೆದುಕೊಂಡು 60 ರನ್ ಗಳಿಸಿದೆ.
ಕನ್ನಡದಲ್ಲಿ ಸ್ಕೋರ್ ಪಟ್ಟಿ: ಕ್ಷಣ ಕ್ಷಣದಲ್ಲಿ ಅಪ್‌ಡೇಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ.
ಎರಡು ಓವರುಗಳಲ್ಲೇ ಗೌತಮ್ ಗಂಭೀರ್ ಮತ್ತು ವಿರಾಟ್ ಕೋಹ್ಲಿ ಅವರ ವಿಕೆಟ್‌ಗಳನ್ನು ಕಳೆದುಕೊಂಡಿರುವ ಭಾರತಕ್ಕೆ ಹೊಡೆಬಡಿಯ ಆಟಗಾರ ಸೆಹ್ವಾಗ್ ಸೇರಿಕೊಂಡರೂ, 3.3 ಓವರಿನಲ್ಲಿ ಯುವರಾಜ್ ಸಿಂಗ್ ಕೂಡ ನಿರ್ಗಮಿಸಿದಾಗ ತಂಡದ ಮೊತ್ತ 16/3. ಇದರ ಬೆನ್ನಿಗೆ ನಾಯಕ ಮಹೇಂದ್ರ ಸಿಂಗ್ ಧೋನಿ ಕೂಡ ವಿಕೆಟ್ ಕಳೆದುಕೊಂಡಿದ್ದಾರೆ.
ಮೊದಲ ಓವರಿನ 2 ಎಸೆತ ಎದುರಿಸಿದ್ದ ಗಂಭೀರ್ ಅವರು ವಲೆಗೆದರಾ ದಾಳಿಯಲ್ಲಿ ಯಾವುದೇ ರನ್ ಮಾಡದೆಯೇ ಬೌಲ್ಡ್ ಆಗಿ ಮರಳಿದರೆ, ಮುಂದಿನ ಓವರಿನಲ್ಲಿ ಕುಲಶೇಖರ ಎಸೆತಕ್ಕೆ ಬಲಿಯಾದವರು ವಿರಾಟ್ ಕೋಹ್ಲಿ. ಅವರು ಸಂಗಕ್ಕಾರ ಕೈಗೆ ಕ್ಯಾಚಿತ್ತು ನಿರ್ಗಮಿಸುವ ಮೊದಲು 8 ಎಸೆತ ಎದುರಿಸಿ 2 ರನ್ ಮಾತ್ರ ಮಾಡಿದ್ದರು. ಮೂರು ಎಸೆತ ಎದುರಿಸಿದ್ದ ಯುವರಾಜ್ ಸಿಂಗ್ ಕೂಡ ಸಂಪಾದಿಸಿದ್ದು ಶೂನ್ಯ ರನ್.
ನಾಯಕನಾಟವಾಡಬೇಕಿದ್ದ ಧೋನಿ ಕೂಡ 14 ರನ್ ಗಳಿಸುವಷ್ಟರಲ್ಲಿ ಕುಲಶೇಖರ ದಾಳಿಗೆ ಎರವಾಗಿದ್ದಾರೆ. ಬೆನ್ನಿಗೆ ಸೆಹ್ವಾಗ್ ಕೂಡ ಕುಲಶೇಖರ ಬಲೆಗೆ ಬಿದ್ದು ಪೆವಿಲಿಯನ್‌ಗೆ ಹೋಗಿದ್ದಾರೆ. ಇದರೊಂದಿಗೆ ಪ್ರವಾಸಿ ತಂಡವು ಭಾರೀ ಒತ್ತಡಕ್ಕೆ ಸಿಲುಕಿದೆ.
webdunia
Subscribe to:
Post Comments (Atom)
No comments:
Post a Comment