ಆಸ್ಟ್ರೇಲಿಯನ್ ಓಪನ್ ಅರ್ಹತಾ ಪಂದ್ಯಾವಳಿಯಲ್ಲಿ ಸೋಮದೇವ್ ದೇವವರ್ಮನ್,ಮೊದಲ ಸುತ್ತಿನ ಪಂದ್ಯದಲ್ಲಿ ಸುಲಭ ಎದುರಾಳಿಯಾದ ಸ್ಥಳೀಯ ಆಟಗಾರ ಜೇಮ್ಸ್ ಡಕ್‌ವರ್ತ್ ಅವರನ್ನು ಎದುರಿಸಲಿದ್ದಾರೆ.
ಎಟಿಪಿ ಶ್ರೇಯಾಂಕದಲ್ಲಿ ಸೋಮದೇವ್ 161ನೇ ಸ್ಥಾನವನ್ನು ಹೊಂದಿದ್ದು,ಎದುರಾಳಿ ಡಕ್‌ವರ್ತ್ 1712ನೇ ಶ್ರೇಯಾಂಕವನ್ನು ಹೊಂದಿದ್ದಾರೆ.ಮತ್ತೊಬ್ಬ ಯುವ ಆಟಗಾರ ಯೂಕಿ ಭಾಂಬ್ರಿ,ಜೆಕ್ ಗಣರಾಜ್ಯದ 245ನೇ ಶ್ರೇಯಾಂಕ ಹೊಂದಿರುವ ಜಾನ್ ಮಿನಾರ್ ಅವರನ್ನು ಎದುರಿಸಲಿದ್ದಾರೆ.
ಏತನ್ಮಧ್ಯೆ, 330ನೇ ಶ್ರೇಯಾಂಕವನ್ನು ಹೊಂದಿರುವ ಯೂಕಿ, ಚೆನ್ನೈ ಓಪನ್ ಪಂದ್ಯಾವಳಿಯಲ್ಲಿ 110ನೇ ಶ್ರೇಯಾಂಕದ ಉಕ್ರೇನ್‌ನ ಇಲಿಯಾ ಮರ್ಚೆಂಕೊ ಅವರನ್ನು ಸೋಲಿಸಿ ತಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಂಡಿದ್ದಾರೆ.
ಪ್ರಕಾಶ್ ಅಮೃತ್‌ರಾಜ್,ತಮ್ಮ ಜರ್ಮನ್ ಎದುರಾಳಿಯಾದ ಅಂಡ್ರೆಬೆಗೆಮಾನ್ ಅವರನ್ನು ಎದುರಿಸಲಿದ್ದಾರೆ.
ಕಳೆದ ವರ್ಷ ಯುಎಸ್ ಓಪನ್ ಗ್ರ್ಯಾಂಡ್‌ಸ್ಲ್ಯಾಮ್‌ನ ಸಿಂಗಲ್ಸ್‌ನಲ್ಲಿ ಆಡುವ ಅರ್ಹತೆ ಪಡೆದ ಸೋಮದೇವ್,ಏಳು ವರ್ಷಗಳ ಅವಧಿಯಲ್ಲಿ ಮೊದಲ ಬಾರಿಗೆ ಭಾರತೀಯ ಆಟಗಾರ ಎನ್ನುವ ಖ್ಯಾತಿಗೆ ಒಳಗಾಗಿದ್ದರು. ಸೋಮದೇವ್ ಎರಡನೇ ಸುತ್ತಿನಲ್ಲಿ ನಿರ್ಗಮಿಸಿದ್ದರು.
ಅದಕ್ಕಿಂತ ಮುಂಚೆ 2002ರಲ್ಲಿ ಪ್ರಕಾಶ್ ಅಮೃತ್‌ರಾಜ್ ವೈಲ್ಡ್‌ಕಾರ್ಡ್ ಪಡೆದು ಯುಎಸ್ ಓಪನ್ ಸಿಂಗಲ್ಸ್‌ನಲ್ಲಿ ಆಡುವ ಅವಕಾಶ ಪಡೆದಿದ್ದರು.
webdunia
Subscribe to:
Post Comments (Atom)
No comments:
Post a Comment