VISHWA KANNADIGA NEWS - ವಿಶ್ವ ಕನ್ನಡಿಗ ನ್ಯೂಸ್

ವಿಶ್ವ ಕನ್ನಡಿಗ ನ್ಯೂಸ್ ಈಗ ಹೊಸ ತಾಣದಲ್ಲಿ

ಆತ್ಮೀಯ ಓದುಗರೇ ವಿಶ್ವ ಕನ್ನಡಿಗ ನ್ಯೂಸ್ ಓದಲು ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿರಿ...





http://www.vknewz.com

Feb 25, 2010

ಗಣಿ ಮಾಲೀಕರಿಂದ ಸಂತ್ರಸ್ತರಿಗೆ 20 ಸಾವಿರ ಮನೆ

ಉತ್ತರ ಕರ್ನಾಟಕ ವಿವಿಧ ಜಿಲ್ಲೆಗಳ ನೆರೆ ಸಂತ್ರಸ್ತರಿಗೆ ಗಣಿ ಮಾಲೀಕರಿಂದ 250 ಕೋಟಿ ರೂಪಾಯಿ ವೆಚ್ಚದಲ್ಲಿ 20 ಸಾವಿರ ಮನೆಗಳನ್ನು ನಿರ್ಮಿಸಿಕೊಡುವುದಾಗಿ ಪ್ರವಾಸೋದ್ಯಮ ಸಚಿವ ಜಿ.ಜನಾ ರ್ಧನ ರೆಡ್ಡಿ ಇಂಗಿತ ವ್ಯಕ್ತಪಡಿಸಿದರು.

ಸಿರುಗುಪ್ಪ: ತಾಲ್ಲೂಕಿನ ಪ್ರವಾಹ ಪೀಡಿತ ಶ್ರೀಧರಗಡ್ಡೆ ಮತ್ತು ಚಿಕ್ಕಬಳ್ಳಾರಿ ಗ್ರಾಮಗಳಲ್ಲಿ ಸಂಡೂರಿನ ವೀರ ಭದ್ರಪ್ಪ ಸಂಗಪ್ಪ ಆ್ಯಂಡ್ ಕಂಪೆನಿ ವತಿಯಿಂದ ನೆರೆ ಸಂತ್ರಸ್ತರಿಗೆ ಪುನ ರ್ವಸತಿ ಕಲ್ಪಿಸುವ ನವಗ್ರಾಮ ನಿರ್ಮಾ ಣದ ಕಾಮಗಾರಿಗೆ ಬುಧ ವಾರ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.

ಶ್ರೀಧರಗಡ್ಡೆ ಮತ್ತು ಚಿಕ್ಕಬಳ್ಳಾರಿ ಗ್ರಾಮದ ನೆರೆ ಸಂತ್ರಸ್ತರಿಗೆ ಸಂಡೂರಿನ ವೀರಭದ್ರಪ್ಪ ಸಂಗಪ್ಪ ಆ್ಯಂಡ್ ಕಂಪೆನಿ ವತಿಯಿಂದ 17 ಕೋಟಿ ರೂಪಾಯಿ ವೆಚ್ಚದಲ್ಲಿ 1310 ಮನೆಗಳನ್ನು ನಿರ್ಮಿಸಿ ಕೊಡುವರು ಎಂದರು.

ಉತ್ತರ ಕರ್ನಾಟಕದ 200ಕ್ಕೂ ಅಧಿಕ ಗ್ರಾಮಗಳನ್ನು ಸ್ಥಳಾಂತರ ಮಾಡಿ ನವಗ್ರಾಮಗಳನ್ನು ನಿರ್ಮಿಸ ಲಾಗು ತ್ತಿದೆ.ರಾಜ್ಯದ ಕೈಗಾರಿಕೋದ್ಯ ಮಿಗಳು, ಮಠಾಧೀಶರು ಮತ್ತು ಬಳ್ಳಾರಿ ಜಿಲ್ಲೆಯ ಗಣಿಮಾಲೀಕರು ಮನೆಗಳನ್ನು ನಿರ್ಮಿಸಿಕೊಡಲು ಮುಂದೆ ಬಂದಿ ್ದದ್ದಾರೆ. ಈ ನವಗ್ರಾಮ ಗಳಲ್ಲಿ ಎಲ್ಲಾ ಮೂಲ ಸೌಲಭ್ಯಗಳನ್ನು ಕಲ್ಪಿಸಿ ಕೊಡಲು ಸೂಕ್ತಕ್ರಮ ಕೈಗೊಳ್ಳ ಲಾಗುವುದೆಂದರು.

ಕ್ರಪೆ - ಪ್ರಜಾವಾಣಿ

No comments: