ಜಂಟಿ ಅಧಿವೇಶನದಲ್ಲಿ ಇಂದು ರಾಜ್ಯಪಾಲರ ಭಾಷಣ
ವಿಧಾನಮಂಡಲದ ಈ ವರ್ಷದ ಸದನ ಕಲಾಪಗಳಿಗೆ ಗುರುವಾರದಿಂದ ಚಾಲನೆ ಸಿಗಲಿದೆ.
ಬೆಂಗಳೂರು: ಉಭಯ ಸದನಗಳ ಜಂಟಿ ಅಧಿವೇಶನವನ್ನು ಉದ್ದೇಶಿಸಿ ರಾಜ್ಯಪಾಲ ಎಚ್.ಆರ್.ಭಾರದ್ವಾಜ್ ಅವರು ಮಾಡುವ ಭಾಷಣವು ಸರ್ಕಾರದ ಆದ್ಯತೆಗಳನ್ನು ಬಿಂಬಿಸಲಿದೆ.
ಇದರ ಜೊತೆಗೇ ಬಜೆಟ್ ಅಧಿವೇಶನ. ಬಜೆಟ್ ಬಗ್ಗೆ ಜನರ ನಿರೀಕ್ಷೆ, ಕಾತುರವೂ ಅಪಾರ. ಈ ಬಾರಿಯೂ ನೂರೆಂಟು ನಿರೀಕ್ಷೆಗಳಿವೆ. ರಾಜ್ಯ ಸರ್ಕಾರದ ನಿಲುವಿನ ವಿರುದ್ಧ ಈಚೆಗೆ ಬಹಿರಂಗವಾಗಿ ಟೀಕೆಗಳನ್ನು ಮಾಡಿರುವ ರಾಜ್ಯಪಾಲರು ಇದೀಗ ಸರ್ಕಾರ ಸಿದ್ಧಪಡಿಸಿ ಕೊಡುವ ಭಾಷಣವನ್ನು ಓದಲಿದ್ದಾರೆ. ಇದೂ ಕುತೂಹಲಕ್ಕೆ ಕಾರಣವಾಗಿದೆ.
ಪರಸ್ಪರ ಕೆಸರೆರೆಚಾಟದ ನಿತ್ಯ ವಿದ್ಯಮಾನಗಳಿಗಿಂತ ತೀರಾ ಭಿನ್ನವಾಗಿ ಈ ಬಾರಿ ಕೂಡ ಸದನ ನಡೆಯುತ್ತದೆ ಎಂಬ ವಿಶ್ವಾಸ ಯಾರಲ್ಲೂ ಇಲ್ಲ. ಆದರೂ, ಈ ವರ್ಷದಿಂದ ಕನಿಷ್ಠ 60 ದಿನಗಳಿಗಿಂತ ಕಡಿಮೆ ಇಲ್ಲದಂತೆ ಅಧಿವೇಶನ ನಡೆಸುತ್ತೇವೆ, ಸಂಸತ್ತಿನ ಮಾದರಿಯನ್ನು ಅನುಸರಿಸುತ್ತೇವೆ ಎಂಬ ಮುಖ್ಯಮಂತ್ರಿಗಳ ಭರವಸೆ ಆಶಾಕಿರಣ ಮೂಡಿಸಿದೆ. ಇದಕ್ಕೆ ಪೂರಕವಾಗಿ ಸದನ ಕಲಾಪಗಳ ಗುಣ ಮಟ್ಟ ಹೆಚ್ಚಿಸಲು ಸರ್ಕಾರ ಕೆಲ ವೊಂದು ಯೋಜನೆಗಳನ್ನು ಹಮ್ಮಿ ಕೊಂಡಿರುವುದು ಈ ಬಾರಿಯ ವಿಶೇಷ.
ಜಂಟಿ ಅಧಿವೇಶನದ ಬೆನ್ನಿಗೇ ರಾಜ್ಯದ ಬಜೆಟ್‌ನ ನಿರೀಕ್ಷೆಗಳೊಂದಿಗೆ ಪ್ರಾರಂಭ ಆಗಿರುವ ಈ ಅಧಿವೇಶನಕ್ಕೆ ಬಹಳಷ್ಟು ಮಹತ್ವ ಇದೆ. ಉತ್ತರ ಕರ್ನಾಟಕದ ಜನತೆಯನ್ನು ಬಹುವಾಗಿ ಕಾಡಿದ ಪ್ರವಾಹ ಪರಿಹಾರ ಕಾಮಗಾರಿಗಳ ಅವಲೋಕನಕ್ಕೆ ಇದು ಸಕಾಲ. ಈ ನಿಟ್ಟಿನಲ್ಲೂ ಸರ್ಕಾರ ಮತ್ತು ವಿರೋಧ ಪಕ್ಷಗಳ ನಡುವೆ ಬಹಳಷ್ಟು ‘ಸಂಘರ್ಷ’ ನಡೆಯುವ ಸಾಧ್ಯತೆ ನಿಚ್ಚಳವಾಗಿದೆ.
ನೆರೆ ಸಂತ್ರಸ್ತರಿಗೆ ಪರಿಹಾರ ಮತ್ತು ಸೂರು ಕಲ್ಪಿಸುವ ಯೋಜನೆ, ಗಣಿಗಾರಿಕೆ ವಿವಾದ, ರೈತರ ಭೂಸ್ವಾಧೀನ ಪ್ರಕ್ರಿಯೆ, ವಿದ್ಯುತ್ ಅಭಾವ, ಬಿಎಂಐಸಿ (ನೈಸ್) ರಸ್ತೆ ವಿವಾದ, ಬಿಬಿಎಂಪಿ ಚುನಾವಣೆ ವಿಳಂಬ.. ಹೀಗೆ ಹತ್ತು ಹಲವು ಜ್ವಲಂತ ಸಮಸ್ಯೆಗಳ ಬಗ್ಗೆ ಈ ಅಧಿವೇಶನವು ಬೆಳಕು ಚೆಲ್ಲಲು ಸಜ್ಜಾಗಿದೆ. ವಿರೋಧ ಪಕ್ಷಗಳು ಎತ್ತುವ ಎಲ್ಲ ಪ್ರಶ್ನೆಗಳಿಗೆ ಉತ್ತರ ಕೊಡಲು ಸರ್ಕಾರ ಸಿದ್ಧವಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಸರ್ಕಾರದ ವೈಫಲ್ಯಗಳ ವಿರುದ್ಧ ದನಿ ಎತ್ತಲು ವಿರೋಧ ಪಕ್ಷಗಳೂ ಯೋಜನೆ ರೂಪಿಸಿಕೊಂಡಿವೆ. ದಾಖಲೆಗಳ ಸಂಗ್ರಹದಲ್ಲಿ ತೊಡಗಿವೆ.
ಗುಣಮಟ್ಟ ಸುಧಾರಣೆಯತ್ತ: ವರ್ಷದಲ್ಲಿ ಕನಿಷ್ಠ 60 ದಿನಗಳ ಅವಧಿಯ ಅಧಿವೇಶನ ನಡೆಸುವುದರ ಜೊತೆಗೆ ಸದನ ಕಲಾಪಗಳ ಗುಣ ಮಟ್ಟವನ್ನು ಸುಧಾರಿಸುವತ್ತ ಸರ್ಕಾರ ಚಿಂತನೆ ನಡೆಸಿದೆ. ಈ ಸಂಬಂಧ ಪಂಚಸೂತ್ರಗಳನ್ನು ಸದನದಲ್ಲಿ ಮಂಡಿ ಸಲು ಯೋಚಿಸಿರುವುದಾಗಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಸುರೇಶ್‌ಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.
ಯಾವುದೇ ಕಾರಣಕ್ಕೂ ಪ್ರಶ್ನೋ ತ್ತರ ಕಲಾಪ ರದ್ದಾಗ ಬಾ ರದು. ಸದನ ದಲ್ಲಿ ಪಕ್ಷಭೇದ ಇಲ್ಲದೆ ಎಲ್ಲ ಸದಸ್ಯ ರಿಗೂ ಮಾತನಾಡಲು ಇದೊಂದೇ ಪ್ರಮುಖ ಮಾರ್ಗ ವಾಗಿದೆ. ಹೀಗಾಗಿ ಪ್ರಶ್ನೋತ್ತರ ಕಲಾಪ ರದ್ದಾಗಬಾರದು. ಅದೇ ರೀತಿ ಯಾರೇ ಸದಸ್ಯರು ಕೇಳಿದ ಪ್ರಶ್ನೆ ಕೂಡ ರದ್ದು ಆಗಬಾರದು. ಪ್ರಶ್ನೆ ಕೇಳಿದ ಸದಸ್ಯರು ಸದನದಲ್ಲಿ ಇರಲಿ, ಗೈರುಹಾಜರಾಗಲಿ. ಪ್ರಶ್ನೆ ರದ್ದಾಗ ದಂತೆ ನೋಡಿಕೊಳ್ಳೇಕು. ಪ್ರಶ್ನೆ ಹಾಕಿದ ಸದ ಸ್ಯರ ಪರವಾಗಿ ಇನ್ನೊಬ್ಬರು ಕೇಳ ಬಹುದು. ಸರ್ಕಾರ ಉತ್ತರ ಕೊಡ ಬಹುದು. ಅದೇ ರೀತಿ ಪ್ರಶ್ನೋತ್ತರ ಅವಧಿಯನ್ನೂ ಎಳೆಯಬಾರದು. ಪ್ರತಿ ಪ್ರಶ್ನೆಗೆ ಪೂರಕವಾಗಿ ಇನ್ನೊಂದು ಪ್ರಶ್ನೆ ಮಾತ್ರ ಕೇಳಬೇಕು. ಸಮಯ ಪಾಲನೆ ಯನ್ನು ಕಟ್ಟುನಿಟ್ಟುಗೊಳಿಸಬೇಕು.
ಸದನದಲ್ಲಿ ಸದಸ್ಯರ ಹಾಜರಿ ಪ್ರಮಾಣವನ್ನು ಸುಧಾರಿಸುವ ನಿಟ್ಟಿ ನಲ್ಲೂ ಪ್ರಯತ್ನ ಸಾಗಿದೆ. ಎಲ್ಲ ಸದಸ್ಯ ರಿಗೂ ಮಾತನಾಡಲು ಅವಕಾಶ ಸಿಗು ತ್ತದೆ ಎಂಬುದು ಖಾತ್ರಿಯಾದಾಗ ಅವರು ಹೆಚ್ಚಿನ ಆಸಕ್ತಿ ತೋರುತ್ತಾರೆ. ಈ ನಿಟ್ಟಿನಲ್ಲಿ ಎಲ್ಲ ರಾಜಕೀಯ ಪಕ್ಷಗಳ ನಾಯಕರೇ ಸಹಕರಿಸಬೇಕು. ಹಿಂದಿನ ಸಾಲಿನ ಸದಸ್ಯರಿಗೂ ಅವಕಾಶ ಸಿಗುವಂತೆ ಪ್ರೋತ್ಸಾಹಿಸಬೇಕು ಎಂದು ಸುರೇಶ್‌ಕುಮಾರ್ ಆಗ್ರಹಿಸಿದರು.
ಶಾಸಕರಿಗೆ ಪ್ರಶ್ನೆ ಮತ್ತು ನಿಲು ವಳಿಗಳನ್ನು ಕಳುಹಿಸಲು ಅನು ಕೂಲ ಆಗುವಂತೆ ಶಾಸಕಾಂಗ ಶಾಖೆಯಲ್ಲಿ ‘ಎಂಎಲ್‌ಎ ಡೆಸ್ಕ್’ ರೂಪಿಸುವ ಯೋಜನೆಯೂ ಇದೆ. ಕೆಲವು ವಿಚಾರ ಗಳಲ್ಲಿ ಸದಸ್ಯರಿಗೆ ಮಾರ್ಗದರ್ಶನ ಅಗತ್ಯ ಇದೆ. ಈ ಹಿನ್ನೆಲೆಯಲ್ಲಿ ಈ ಯೋಚನೆ ಇದೆ ಎಂದರು. ಸದನದಲ್ಲಿ ಮಂಡಿಸುವ ಎಲ್ಲ ಮಸೂದೆಗಳನ್ನು ಅಧಿವೇಶನದ ಮೊದಲ ಮೂರು ದಿವ ಸ ಗಳ ಒಳಗಾಗಿ ಮಂಡನೆ ಮಾಡುವ ಯೋಜನೆಯೂ ಇದೆ. ಇದರಿಂದ ಈ ಮಸೂದೆಗಳ ಬಗ್ಗೆ ಸದಸ್ಯ ರಿಗೆ ಸಾಕಷ್ಟು ಅಧ್ಯಯನ ಮಾಡಿ ಕೊಂಡು ಬರಲು ಅನುಕೂಲ ಆಗಲಿದೆ. ಕೊನೆ ಗಳಿಗೆ ಯಲ್ಲಿ ತರಾತುರಿಯಲ್ಲಿ ಮಸೂದೆ ಗಳನ್ನು ಮಂಡಿಸಿ ತಂತ್ರ ಪೂರ್ವ ಕವಾಗಿ ಅನುಮೋದನೆ ಮಾಡಿಸಿ ಕೊಳ್ಳುವ ಪರಿಪಾಠವೂ ತಪ್ಪುತ್ತದೆ ಎಂಬುದು ಅವರ ಅಭಿಪ್ರಾಯ. ಈ ವಿಚಾರಗಳನ್ನು ಸದನದಲ್ಲಿ ಮಂಡಿಸಿ ಸದಸ್ಯರ ಅಭಿಪ್ರಾಯ ಪಡೆದು ಮುಂದುವರಿ ಯುವುದಾಗಿ ತಿಳಿಸಿದರು.
ಈ ಅಧಿವೇಶನದಲ್ಲಿ 16 ಪ್ರಮುಖ ಮಸೂದೆಗಳು ಮಂಡನೆ ಆಗಲಿವೆ ಎಂದು ವಿಧಾನಸಭಾಧ್ಯಕ್ಷ ಕೆ.ಜಿ. ಬೋಪಯ್ಯ ಅವರು ತಿಳಿಸಿದರು. ಇದರ ಜೊತೆಗೆ ‘ಅಕ್ರಮ-ಸಕ್ರಮ’ ಯೋಜನೆಗೆ ಸಂಬಂಧಿಸಿದ ಸುಗ್ರೀವಾಜ್ಞೆ ಚರ್ಚೆಗೆ ಬರುವ ಸಾಧ್ಯತೆ ಇದೆ.
ಕಳೆದ ಜುಲೈ ತಿಂಗಳಲ್ಲೇ ಸದನದ ಅನುಮೋದನೆ ಪಡೆದರೂ ರಾಜ್ಯಪಾಲರು ವಾಪಸ್ ಕಳುಹಿಸಿದ್ದ ಈ ಮಸೂದೆ ನಂತರ ಸುಗ್ರೀವಾಜ್ಞೆ ರೂಪದಲ್ಲೂ ರಾಜ್ಯ ಪಾಲ ರಿಂದ ಮರಳಿ ಸರ್ಕಾರಕ್ಕೆ ಬಂದಿರುವು ದರಿಂದ ಗಮನ ಸೆಳೆದಿದೆ.
ಕ್ರಪೆ - ಪ್ರಜಾವಾಣಿ
Subscribe to:
Post Comments (Atom)
No comments:
Post a Comment