ರಾಬಟ್ (ಎಪಿ): ಇಲ್ಲಿನ ಐತಿಹಾಸಿಕ ನಗರಿ ಮಿಕೆನ್ಸ್ ನಲ್ಲಿನ ಮಸೀದಿಯೊಂದರ ಸ್ತಂಭ ಗೋಪುರ ಕುಸಿದು ಬಿದ್ದ ಪರಿಣಾಮ 36 ಮಂದಿ ಸಾವಿಗೀಡಾಗಿದ್ದು, 71 ಮಂದಿ ಗಾಯಗೊಂಡಿದ್ದಾರೆ. ಈ ಪ್ರಾರ್ಥನಾ ಮಂದಿರವು ಸುಮಾರು ನಾಲ್ಕು ಶತಮಾನದಷ್ಟು ಹಳೆಯದು ಎಂದು ಹೇಳಲಾಗಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಸ್ತಂಭ ಗೋಪುರ ಕುಸಿಯಲು ಎಡೆಬಿಡದೆ ಸುರಿಯುತ್ತಿರುವ ಮಳೆಯೇ ಕಾರಣ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮುಂದಿನ ಕೆಲವು ದಿನಗಳಲ್ಲಿ ಭಾರಿ ಮಳೆ ಬೀಳುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಮಸೀದಿಯ ಪುನರ್ ನಿರ್ಮಾಣಕ್ಕೆ ಇಲ್ಲಿನ ದೊರೆ ಆದೇಶಿಸಿದ್ದಾರೆ.
source: prajavani
Feb 20, 2010
Subscribe to:
Post Comments (Atom)
No comments:
Post a Comment