ಬಾಲಿವುಡ್ ಬ್ಲಾಕ್‌ಬಸ್ಟರ್ 'ತ್ರಿ ಈಡಿಯೆಟ್ಸ್'ಗೆ ಹರಭಜನ್ ಸಿಂಗ್, ಇಶಾಂತ್ ಶರ್ಮಾ ಮತ್ತು ಅಮಿತ್ ಮಿಶ್ರಾರನ್ನು ಹೋಲಿಸಿರುವುದಕ್ಕೆ ಟೀಮ್ ಇಂಡಿಯಾ ಕೆಲವು ಮಾಧ್ಯಮಗಳೊಂದಿಗೆ ಮುನಿಸಿಕೊಂಡಿದೆ. ದಕ್ಷಿಣ ಆಫ್ರಿಕಾ ವಿರುದ್ಧ ಎರಡನೇ ಟೆಸ್ಟ್‌ನಲ್ಲಿ ಗೆಲುವು ಸಾಧಿಸಿ ನಂ.1 ಪಟ್ಟವನ್ನು ಮರಳಿ ಪಡೆದುಕೊಂಡ ನಂತರ ಕೆಲವು ಆಟಗಾರರು ತಮ್ಮ ಕೋಪವನ್ನು ಮೆರೆದಿದ್ದಾರೆ.
ಎರಡನೇ ಪಂದ್ಯದ ಮೊದಲ ದಿನದ ಎರಡು ಆರಂಭಿಕ ಅವಧಿಗಳಲ್ಲಿ ಪ್ರವಾಸಿಗರು ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿ ಪಂದ್ಯದಲ್ಲಿ ಹಿಡಿತ ಸಾಧಿಸಿದ್ದನ್ನು ಕಂಡ ಕೆಲವು ಮಾಧ್ಯಮಗಳು ಭಾರತೀಯ ಬೌಲರುಗಳನ್ನು 'ತ್ರೀ ಈಡಿಯೆಟ್ಸ್' ಎಂದು ಜರೆದಿದ್ದವು. ಆದರೆ ಇದು ಟೀಮ್ ಇಂಡಿಯಾದ ಅಸಮಾಧಾನಕ್ಕೆ ಕಾರಣವಾಗಿತ್ತು.
ಈ ಸಂಬಂಧ ಮಾಧ್ಯಮಗಳೊಂದಿಗೆ ಮಾತುಕತೆ ನಡೆಸಬಾರದೆಂದು ಬಿಸಿಸಿಐ ಅಧಿಕೃತ ಆದೇಶ ನೀಡದ ಹೊರತಾಗಿಯೂ ಟೀಮ್ ಇಂಡಿಯಾ ಮಾಧ್ಯಮಗಳ ಜತೆ ಮಾತುಕತೆಗೆ ನಿರಾಕರಿಸಿದೆ.
ಹರಭಜನ್ ಸಿಂಗ್ ಶ್ರೇಷ್ಠ ಪ್ರದರ್ಶನದ ಕುರಿತು ಪ್ರತಿಕ್ರಿಯೆ ನೀಡುವಂತೆ ಭಾರತೀಯ ಕ್ರಿಕೆಟ್ ತಂಡದ ಹಿರಿಯ ಸದಸ್ಯರೊಬ್ಬರನ್ನು 'ಮಿಡ್ ಡೇ' ಪತ್ರಿಕೆ ಸಂಪರ್ಕಿಸಿದಾಗ ಉತ್ತರಿಸಲು ನಿರಾಕರಿಸಿರುವ ಅವರು, 'ಯಾರೊಂದಿಗೆ ಯಾವುದೇ ವಿಚಾರಗಳನ್ನು ಹಂಚಿಕೊಳ್ಳಬಾರದು ಎಂದು ಬಿಸಿಸಿಐ ನಮಗೆ ಸೂಚನೆ ನೀಡಿದೆ' ಎಂದು ಸಂದೇಶ ರವಾನಿಸಿದ್ದಾರೆ.
ಹರಿಣಗಳ ವಿರುದ್ಧದ ಜಯದಲ್ಲಿ ಮಹತ್ವದ ಪಾತ್ರವಹಿಸಿದ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಹರಭಜನ್ ಮಾಧ್ಯಮಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಲವು ಸುದ್ದಿಗಳನ್ನು ಮಾಧ್ಯಮಗಳಿಂದ ನಾನು ಕೇಳುತ್ತಾ ಬರುತ್ತಿದ್ದೇನೆ. ಆದರೆ ಅವುಗಳಿಗೆ ಇಂದು ಸಮರ್ಥ ಉತ್ತರ ಸಿಕ್ಕಿದೆ ಎಂದು ಭಾವಿಸುತ್ತೇನೆ. ರಾಷ್ಟ್ರೀಯ ಮಾಧ್ಯಮದಲ್ಲಿ ಯಾವುದನ್ನು ಪ್ರಸಾರ ಮಾಡಬೇಕು ಅಥವಾ ಮಾಡಬಾರದೆಂದು ಅವರಿಗೆ ಅರಿವಿರಬೇಕು ಎಂದು ಮುನಿಸು ಹೊರ ಹಾಕಿದರು.
ನಾವು ತೀವ್ರ ಭಾವಾವೇಶದಿಂದ ದೇಶಕ್ಕಾಗಿ ಆಡುತ್ತೇವೆ. ಆದರೆ ನಮ್ಮನ್ನು ಮಾಡಿದಂತೆ (ತ್ರೀ ಈಡಿಯೆಟ್ಸ್) ಟೀಕಿಸುವ ರೀತಿಯು ಕೆಲವು ಸಂದರ್ಭಗಳಲ್ಲಿ ಎಲ್ಲಾ ಆಟಗಾರರ ಅಸಮಾಧಾನಕ್ಕೆ ಕಾರಣವಾಗುತ್ತದೆ. ನಾನು ಮೈದಾನದಲ್ಲಿ ಅತ್ಯುತ್ತಮ ಪ್ರದರ್ಶನ ತೋರಿಸದಿದ್ದರೆ ಅವರು ನಮ್ಮನ್ನು 'ತ್ರೀ ಈಡಿಯೆಟ್ಸ್' ಎಂದು ತೋರಿಸುತ್ತಾರೆ ಎಂದರು.
ಗೆಲುವಿನ ಸಂಭ್ರಮವನ್ನು ಯಾವ ರೀತಿ ಆಚರಿಸಲಾಗಿದೆ ಎಂಬುದರ ಬಗ್ಗೆ ಮಾಹಿತಿ ನೀಡಲು ಕೂಡ ತಂಡ ನಿರಾಕರಿಸಿದೆ. ಕ್ಷಮಿಸಿ, ನಾನೇನೂ ಹೇಳಲಾರೆ, ಆಫ್ ದಿ ರೆಕಾರ್ಡ್ ಹೇಳಿಕೆಯನ್ನೂ ನೀಡಲಾರೆ ಎಂದು ತಂಡದ ಸಹಾಯಕ ಸಿಬ್ಬಂದಿಯೊಬ್ಬರು ಪ್ರತಿಕ್ರಿಯೆ ನೀಡಿದ್ದಾರೆ.
ಟೀವಿ ಚಾನೆಲ್‌ಗಳು ಹರಭಜನ್ ಸಿಂಗ್, ಇಶಾಂತ್ ಶರ್ಮಾ ಮತ್ತು ಅಮಿತ್ ಮಿಶ್ರಾ ಅವರನ್ನು 'ತ್ರೀ ಈಡಿಯೆಟ್ಸ್' ಪಾತ್ರಗಳಿಗೆ ಹೋಲಿಸಿ ವರದಿ ಮಾಡಿದ ನಂತರ ಅದರ ಪರಿಣಾಮ ಮಾಧ್ಯಮಗಳ ಅನುಭವಕ್ಕೆ ಬಂದಿದ್ದು, ಸಚಿನ್ ತೆಂಡೂಲ್ಕರ್ ಮತ್ತು ವೀರೇಂದ್ರ ಸೆಹ್ವಾಗ್ ಶತಕ ದಾಖಲಿಸಿದರೂ ತಂಡ ಪತ್ರಿಕಾಗೋಷ್ಠಿ ನಡೆಸದಿರಲು ತೀರ್ಮಾನಿಸುವುದರೊಂದಿಗೆ.
ಭಾರತದ ಗೆಲುವಿನಲ್ಲಿ ದ. ಆಫ್ರಿಕಾ ಕೈ...
ಅದೇ ವೇಳೆ ತಂಡದ ಗೆಲುವಿನಲ್ಲಿ ದಕ್ಷಿಣ ಆಫ್ರಿಕಾದ ಸಾಹಸ ವಿವರಣೆಗಾರ ಮೈಕ್ ಹಾರ್ನ್ ಪ್ರೇರೆಣೆ ಪ್ರಮುಖ ಪಾತ್ರ ನಿರ್ವಹಿಸಿತ್ತು ಎಂಬುದು ಬೆಳಕಿಗೆ ಬಂದಿದೆ. ಈ ವಿಷಯವನ್ನು ಕೋಚ್ ಗ್ಯಾರಿ ಕರ್ಸ್ಟನ್ ಮತ್ತು ತಂಡದ ಮಾನಸಿಕ ತಜ್ಞ ಪ್ಯಾಡಿ ಅಪ್ಟನ್ ಕೂಡಾ ಒಪ್ಪಿಕೊಂಡಿದ್ದಾರೆ.
72 ಗಂಟೆಯೊಳಗೆ ಎರಡು ಬಾರಿ ಟೀಮ್ ಇಂಡಿಯಾಕ್ಕೆ ಆತ್ಮವಿಶ್ವಾಸ ತುಂಬಿದ್ದ ಮೈಕ್ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎನ್ನಲಾಗಿದೆ. ಕಳೆದ ಶುಕ್ರವಾರ ಮತ್ತು ದ್ವಿತೀಯ ಟೆಸ್ಟ್‌ನ ಎರಡನೇ ದಿನದ ನಂತರ ಮೈಕ್, ಟೀಮ್ ಇಂಡಿಯಾಕ್ಕೆ ಸಲಹೆಗಳನ್ನು ನೀಡಿದ್ದರು ಎಂದು ವರದಿಯಾಗಿದೆ.
ಅದೇ ವೇಳೆ ಅವರ ಸಂದೇಶವು ತಮ್ಮಲ್ಲಿ ಆತ್ಮವಿಶ್ವಾಸ ತುಂಬಿದ್ದವು ಎಂಬುದನ್ನು ತಂಡದ ಹಿರಿಯ ಆಟಗಾರರಾದ ವಿ.ವಿ.ಎಸ್. ಲಕ್ಷ್ಮಣ್ ಹಾಗೂ ಗೌತಮ್ ಗಂಭೀರ್ ಕೂಡಾ ಒಪ್ಪಿಕೊಂಡಿದ್ದಾರೆ.
ಕ್ರಪೆ - ವೆಬ್ ದುನಿಯಾ
Subscribe to:
Post Comments (Atom)
No comments:
Post a Comment