VISHWA KANNADIGA NEWS - ವಿಶ್ವ ಕನ್ನಡಿಗ ನ್ಯೂಸ್

ವಿಶ್ವ ಕನ್ನಡಿಗ ನ್ಯೂಸ್ ಈಗ ಹೊಸ ತಾಣದಲ್ಲಿ

ಆತ್ಮೀಯ ಓದುಗರೇ ವಿಶ್ವ ಕನ್ನಡಿಗ ನ್ಯೂಸ್ ಓದಲು ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿರಿ...





http://www.vknewz.com

Feb 17, 2010

ಟೊಮೆಟೊ: ಕೆಜಿಗೆ ಕೇವಲ 60 ಪೈಸೆ!

ಜಿಲ್ಲೆಯ ಟೊಮೆಟೊ ಬೆಳೆಗಾರರಿಗೆ ಕಷ್ಟದ ದಿನಗಳು ಎದುರಾಗಿವೆ. ಅವರು ಬೆಳೆದ ಟೊಮೆಟೊಗೆ ಕೆಜಿಗೆ ಸರಾಸರಿ 60 ಪೈಸೆಯಂತೆ ಬೆಲೆ ಕಟ್ಟಲಾಗಿದೆ.

ಕೋಲಾರ: ನಗರದ ಎಪಿಎಂಸಿ ಮಾರುಕಟ್ಟೆಯಲ್ಲಿ ಮಂಗಳ ವಾರ 15 ಕೆಜಿಯ ಒಂದು ಟೊಮೆಟೊ ಬಾಕ್ಸ್‌ನ ಬೆಲೆ 10 ರೂಪಾಯಿ ಇತ್ತು. ಉತ್ಕೃಷ್ಟ ಟೊಮೆಟೊ ಬೆಲೆ 60 ರೂಪಾಯಿ. ಜೊತೆಗೆ ಎಲ್ಲ ತರಕಾರಿ ಬೆಲೆಯೂ ಕೆಜಿಗೆ 10 ರೂಪಾಯಿ ಇಳಿದಿದೆ. ಎಪಿಎಂಸಿಯಲ್ಲಿ ಪ್ರತಿದಿನ ಸರಾಸರಿ 20 ಸಾವಿರ ಕ್ವಿಂಟಾಲ್ ಟೊಮೆಟೊ ಖರೀದಿಯಾಗುತ್ತದೆ. ಆದರೆ ಮಂಗಳವಾರ ಮಾರು ಕಟ್ಟೆಗೆ ಬಂದದ್ದು ಕೇವಲ 3,175 ಕ್ವಿಂಟಾಲ್ ಮಾತ್ರ. ಆದರೂ ಬೆಲೆ ಕುದುರಲಿಲ್ಲ.

‘ಕಳೆದ ಅಕ್ಟೋ ಬರ್, ನವೆಂಬರ್ ಮತ್ತು ಡಿಸೆಂ ಬರ್ ನಲ್ಲಿ 15ರಿಂದ 25 ರೂಪಾಯಿ ವರೆಗೂ ಬೆಲೆ ದಕ್ಕಿದ ಕಾರಣ ಬಹಳಷ್ಟು ರೈತರು ಮತ್ತೆ ಟೊಮೆಟೊ ಬೆಳೆದಿದ್ದರು. ಜನವರಿ, ಫೆಬ್ರುವ ರಿ ಯಲ್ಲಿ ಟೊಮೆಟೊ ಬೆಳೆಯದ ಮೈಸೂರು, ಮಂಡ್ಯ, ಹಾಸನ, ಚಿಕ್ಕಮಗಳೂರು, ಕಡೂರು, ಮದ್ದೂರು, ದಾವಣಗೆರೆಯಲ್ಲೂ ಬೆಲೆ ನಿರೀಕ್ಷಿಸಿ ಟೊಮೆಟೊ ಬೆಳೆದರು. ಉತ್ಪಾ ದನೆ ಹೆಚ್ಚಿದೆ. ಬೇಡಿಕೆ ಕುಸಿದಿದೆ. ತಮಿಳುನಾಡು, ಆಂಧ್ರಪ್ರದೇಶಗಳಲ್ಲೂ ಈಗ ಟೊಮೆಟೊ ಬೆಳೆಯಲಾಗುತ್ತಿದೆ’ ಎಂದು ಟೊಮೆಟೊ ಬೆಳೆಗಾರ ಮತ್ತು ಮಾರಾ ಟ ಗಾರ ಸುಧಾಕರ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕೆಜಿಗೆ ಮೂರು ರೂಪಾಯಿಯಾದರೂ ದೊರೆ ತರೆ ರೈತರು ಸಮಾಧಾನಪಡಬಹುದು. ತೋಟಗಾ ರಿಕೆ ಇಲಾಖೆ ನಿಗದಿಪಡಿಸಿದಂತೆ, ರೈತರಿಗೆ 15 ಕೆಜಿ ಬಾಕ್ಸ್‌ಗೆ 30 ರೂಪಾಯಿಯಾದರೂ ಸಿಗಬೇಕು’ ಎಂದು ಎಪಿಎಂಸಿ ಸಹಾಯಕ ನಿರ್ದೇಶಕ ರಮೇಶ್ ಹೇಳುತ್ತಾರೆ. 2008ರ ಜುಲೈನಲ್ಲಿ ಇಂಥದೇ ಸನ್ನಿವೇಶ ಎದುರಾಗಿತ್ತು. 15 ಕೆಜಿ ಬಾಕ್ಸ್‌ಗೆ 10 ರೂಪಾಯಿ ಬೆಲೆಯಾದಾಗ ರೈತರಿಗೆ ಬೆಂಬಲ ಬೆಲೆ ನೀಡಲಾಗಿತ್ತು. ಮತ್ತೆ ಟೊಮೆಟೊ ಬೆಲೆ ಕುಸಿದಿದೆ.
ಕಂಗಾಲಾಗಿರುವ ರೈತರು ಟೊಮೆಟೊಗೆ ಬೆಂಬಲ ಬೆಲೆ ಸಿಗುವುದೇ ಎಂಬ ನಿರೀಕ್ಷೆಯಲ್ಲಿದ್ದಾರೆ.

ಮಾರುಕಟ್ಟೆಗೆ ಬರುತ್ತಿರುವ ಟೊಮೆಟೊ ಪ್ರಮಾಣ ಗಮನಿಸಿದರೆ ಹೆಚ್ಚೆನಿಸುವುದಿಲ್ಲ. ಆದರೂ ಬೆಲೆ ಕುಸಿದಿದೆ. ಟೊಮೆಟೊ ಗುಣಮಟ್ಟವನ್ನು ಹೆಚ್ಚಿಸಿಕೊಳ್ಳುವುದೇ ಅದಕ್ಕಿರುವ ದಾರಿ ಎಂದು ಅವರು ತಿಳಿಸಿದರು.

ಪ್ರಜಾವಾಣಿ ವಾರ್ತೆ

No comments: