ಪಾಕಿಸ್ತಾನದಿಂದ ಸ್ವಯಂ ಗಡಿಪಾರು ಹೊಂದಿರುವ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ.
ಲಂಡನ್ (ಪಿಟಿಐ): ಪಾಕಿಸ್ತಾನದಿಂದ ಸ್ವಯಂ ಗಡಿಪಾರು ಹೊಂದಿರುವ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ.
‘ಪಾಕಿಸ್ತಾನ ನನ್ನ ದೇಶ. ನಾನು ತುಂಬಾ ಪ್ರೀತಿಸುತ್ತೇನೆ. ದೇಶಕ್ಕಾಗಿ ಏನನ್ನು ಮಾಡಲೂ ನಾನು ಸಿದ್ಧ’ ಎಂದಿರುವ ಮುಷರಫ್ ‘ಚುನಾವಣೆಯಲ್ಲಿ ಸ್ಪರ್ಧಿಸುವ ಮೂಲಕ ದೇಶ ಸೇವೆ ಮಾಡಲು ಹಿಂದೆಂದೂ ಲಭಿಸದಿರುವ ಕಾನೂನುಬದ್ಧ ಅಧಿಕಾರ ಪಡೆಯುತ್ತೇನೆ ’ ಎಂದಿದ್ದಾರೆ. ಪಾಕಿಸ್ತಾನಕ್ಕೋಸ್ಕರ ಸಿದ್ಧವಾಗುತ್ತಿದ್ದೇನೆ, ಆದರೆ ಜನರು ಎಲ್ಲವನ್ನೂ ನಿರ್ಧರಿಸುವರು. ’ನಾನೀಗ ಮಿಲಿಟರಿ ಅಧಿಕಾರಿ ಅಲ್ಲ, ಸಾಮಾನ್ಯ ನಾಗರಿಕ’ ಎಂದು 66 ವರ್ಷ ವಯಸ್ಸಿನ ಮಾಜಿ ಸೇನಾ ಸರ್ವಾಧಿಕಾರಿ ಇಲ್ಲಿನ ಚಾತಮ್ ಹೌಸ್ ಸಭೆಯೊಂದರಲ್ಲಿ ಹೇಳಿದರು.
2007ರಲ್ಲಿ ನ್ಯಾಯಾಧೀಶರನ್ನು ವಜಾ ಗೊಳಿಸಿದ ಪ್ರಕರಣದ ವಿಚಾರಣೆಗಾಗಿ ಪಾಕಿಸ್ತಾನಕ್ಕೆ ವಾಪಸ್ಸಾಗುವ ಕುರಿತು ಮುಷರಫ್ ಮಾಹಿತಿ ನೀಡಲಿಲ್ಲ. ಆಪ್ಘನ್‌ನಲ್ಲಿ ತಾಲಿಬಾನ್ ದಮನ ದಾಳಿಯನ್ನು ಬೆಂಬಲಿಸಿರುವ ಮುಷರಫ್, ವಿಶ್ವದ ಪ್ರಬಲ ಶಕ್ತಿಗಳು ತಮ್ಮ ಬದ್ಧತೆಯನ್ನು ತೋರಬೇಕಿದೆ ಎಂದರು.
ಇಲ್ಲಿನ ಕೇಬಬ್ ಜಾಯಿಂಟ್ಸ್ ಮತ್ತು ಶೀಷಾಬಾರ್ಸ್‌ನ ಹಿಂಭಾಗದಲ್ಲಿರುವ ಅರೇಬಿಕ್ ಕ್ವಾರ್ಟರ್‌ನಲ್ಲಿರುವ 3 ಬೆಡ್‌ರೂಮ್ ಫ್ಲಾಟ್‌ನಲ್ಲಿ ನೆಲೆಸಿರುವ ಮುಷರಫ್ ಅವರ ರಕ್ಷಣೆಗಾಗಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ.
ಪ್ರಜಾವಾಣಿ ವಾರ್ತೆ
Subscribe to:
Post Comments (Atom)
No comments:
Post a Comment