ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ ಎರಡು ಹೊಸ ತಂಡಗಳು ಯಾವುವು ಎಂಬುದು ಮಾರ್ಚ್ 8 ರಂದು ತಿಳಿಯಲಿದೆ.
ನವದೆಹಲಿ (ಪಿಟಿಐ): ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ ಎರಡು ಹೊಸ ತಂಡಗಳು ಯಾವುವು ಎಂಬುದು ಮಾರ್ಚ್ 8 ರಂದು ತಿಳಿಯಲಿದೆ. ಐಪಿಎಲ್‌ಗೆ ಸೇರಲಿರುವ ಎರಡು ತಂಡಗಳ ಅನಾವರಣ ಮುಂದಿನ ತಿಂಗಳು ನಡೆಯಲಿದೆ ಎಂದು ಲೀಗ್‌ನ ಮುಖ್ಯಸ್ಥ ಲಲಿತ್ ಮೋದಿ ಹೇಳಿದರು.
ತಂಡಗಳಿಗೆ ಬಿಡ್ ಸಲ್ಲಿಸುವ ಪ್ರಕ್ರಿಯೆ ಫೆ.21 ರಿಂದ ಆರಂಭವಾ ಗ ಲಿದೆ. ‘ಟೆಂಡರ್ ಅರ್ಜಿ ಗಳು ಬಿಸಿ ಸಿಐ/ ಐಪಿಎಲ್ ಕಚೇರಿ ಯಲ್ಲಿ ಫೆ. 21 ರಿಂದ ಲಭಿಸ ಲಿದೆ. ಮಾ. 8 ರಂದು ಮುಂಬೈನಲ್ಲಿ ಬಿಡ್ ತೆರೆಯಲಾ ಗು ವುದು’ ಎಂದು ಮೋದಿ ವಿವರಿಸಿದರು.
ಅಹಮದಾಬಾದ್, ನಾಗಪುರ, ಕಾನ್ಪುರ, ಧರ್ಮಶಾಲಾ, ಇಂ ದೋರ್, ಕಟಕ್, ಗ್ವಾಲಿಯರ್ ಮತ್ತು ವಿಶಾಖಪಟ್ಟಣ ನಗರಗಳು ಕ್ರೀಡಾಂಗಣ ಹೊಂದಿದ್ದು, ಬಿಡ್ ಸಲ್ಲಿಸ ಬಹುದು ಎಂದು ಮೋದಿ ನುಡಿದರು,
‘ರಾಜ್‌ಕೋಟ್, ಪುಣೆ, ಬರೋಡ ಮತ್ತು ಕೊಚ್ಚಿ ನಗರಗಳಲ್ಲಿ ಹೊಸ ಕ್ರೀಡಾಂಗಣ ನಿರ್ಮಾಣ ಹಂತದಲ್ಲಿವೆ. ಈ ನಗರಗಳೂ ಬಿಡ್ ಸಲ್ಲಿಸಲು ಅರ್ಹತೆ ಹೊಂದಿವೆ’ ಎಂದರು. ಹೊಸ ತಂಡಗಳ ಬೇಸ್ ಪ್ರೈಸ್ 225 ದಶಲಕ್ಷ ಡಾಲರ್ ಆಗಿದೆ.
ಪ್ರಸಕ್ತ ಎಂಟು ನಗರಗಳ ತಂಡಗಳು ಐಪಿಎಲ್ ಟ್ವೆಂಟಿ-20 ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಿವೆ. ಮುಂದಿನ ವರ್ಷದಿಂದ 10 ತಂಡಗಳು ಭಾಗವಹಿಸಲಿವೆ.
ಈ ವರ್ಷ ನಡೆಯುವ ಟೂರ್ನಿಯಲ್ಲಿ ಎರಡು ಹೊಸ ತಂಡಗಳು ಪಾಲ್ಗೊಳ್ಳುತ್ತಿಲ್ಲ. ‘ಆದರೆ ಹೊಸ ತಂಡಗಳ ಒಡೆಯರು ಮತ್ತು ಆಡಳಿತಕ್ಕೆ ಮೂರನೇ ವರ್ಷದ ಟೂರ್ನಿಯ ವಿವಿಧ ಪ್ರಕ್ರಿಯೆಗಳಲ್ಲಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸುವೆವು. ಇದು ಮುಂದಿನ ಋತುವಿನ ಟೂರ್ನಿಗೆ ಸಜ್ಜಾಗಲು ಅವರಿಗೆ ನೆರವಾಗಲಿದೆ’ ಎಂದು ಮೋದಿ ಹೇಳಿದರು.
ಪ್ರಜಾವಾಣಿ ವಾರ್ತೆ
Subscribe to:
Post Comments (Atom)
No comments:
Post a Comment