VISHWA KANNADIGA NEWS - ವಿಶ್ವ ಕನ್ನಡಿಗ ನ್ಯೂಸ್

ವಿಶ್ವ ಕನ್ನಡಿಗ ನ್ಯೂಸ್ ಈಗ ಹೊಸ ತಾಣದಲ್ಲಿ

ಆತ್ಮೀಯ ಓದುಗರೇ ವಿಶ್ವ ಕನ್ನಡಿಗ ನ್ಯೂಸ್ ಓದಲು ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿರಿ...





http://www.vknewz.com

Feb 25, 2010

ಪಾಕಿಸ್ತಾನ: ಬಂಧಿತ ತಾಲಿಬಾನ್ ಉಗ್ರ ಗನಿ ಅಫ್ಘಾನ್ ವಶಕ್ಕೆ

ಅಮೆರಿಕ ಮತ್ತು ಪಾಕಿಸ್ತಾನ ಗುಪ್ತಚರ ಇಲಾಖೆಯ ಜಂಟಿ ಕಾರ್ಯಾಚರಣೆಯಲ್ಲಿ ಸೆರೆ ಸಿಕ್ಕ ಅಫ್ಘಾನ್ ತಾಲಿಹಾನ್‌ನ ನಂ.2ಮುಖಂಡ‌ನನ್ನು ಪಾಕ್ ಸರ್ಕಾರ ಅಫ್ಘಾನಿಸ್ತಾನಕ್ಕೆ ಹಸ್ತಾಂತರಿಸಿರುವುದಾಗಿ ಬುಧವಾರ ತಿಳಿಸಿದೆ.

ಇತ್ತೀಚೆಗೆ ನಡೆಸಿದ ಮಹತ್ವದ ಕಾರ್ಯಾಚರಣೆಯಲ್ಲಿ ಮೂವರು ಪ್ರಮುಖ ತಾಲಿಬಾನ್ ಉಗ್ರರು ಪಾಕಿಸ್ತಾನದಲ್ಲಿ ಸೆರೆಸಿಕ್ಕಿದ್ದು, ಅದರಲ್ಲಿ ಮುಲ್ಲಾ ಅಬ್ದುಲ್ ಗನಿ ಬ್ರಾಡಾರ್ ಪ್ರಮುಖನಾಗಿದ್ದ. ಅಲ್ಲದೇ ಅಲ್ ಖಾಯಿದಾ ಮತ್ತು ತಾಲಿಬಾನ್ ಪ್ರಾಬಲ್ಯ ಹೊಂದಿದ ಪಾಕಿಸ್ತಾನದ ವಾಯುವ್ಯ ಪ್ರದೇಶದಲ್ಲಿ ಅಮೆರಿಕ ನಡೆಸಿದ ಮಿಸೈಲ್ ದಾಳಿಯಲ್ಲಿ ನಾಲ್ಕು ಉಗ್ರರು ಹತರಾಗಿದ್ದರು ಎಂದು ಗುಪ್ತಚರ ಇಲಾಖೆ ಅಧಿಕಾರಿಗಳು ವಿವರಿಸಿದ್ದಾರೆ.

ಬಂಧಿತ ತಾಲಿಬಾನ್ ಉಗ್ರರನ್ನು ಅಮೆರಿಕದ ವಶಕ್ಕೆ ಒಪ್ಪಿಸುವ ಪ್ರಶ್ನೆಯೇ ಇಲ್ಲ ಎಂದು ಪಾಕ್ ಈ ಮೊದಲೇ ಸ್ಪಷ್ಟಪಡಿಸಿತ್ತು. ಇದೀಗ ಅಬ್ದುಲ್ ಗನಿಯನ್ನು ಅಫ್ಘಾನಿಸ್ತಾನಕ್ಕೆ ಒಪ್ಪಿಸಿದೆ. ಈ ನಿಟ್ಟಿನಲ್ಲಿ ಅಫ್ಘಾನ್ ಆಂತರಿಕ ಸಚಿವ ಹನೀಫ್ ಅತ್ಮಾರ್ ಎಫ್‌ಬಿಐ ಮತ್ತು ಪಾಕಿಸ್ತಾನಿ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿದ್ದರು.

No comments: