VISHWA KANNADIGA NEWS - ವಿಶ್ವ ಕನ್ನಡಿಗ ನ್ಯೂಸ್

ವಿಶ್ವ ಕನ್ನಡಿಗ ನ್ಯೂಸ್ ಈಗ ಹೊಸ ತಾಣದಲ್ಲಿ

ಆತ್ಮೀಯ ಓದುಗರೇ ವಿಶ್ವ ಕನ್ನಡಿಗ ನ್ಯೂಸ್ ಓದಲು ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿರಿ...





http://www.vknewz.com

Feb 25, 2010

ಲಿಟ್ಲ್ ಮಾಸ್ಟರ್ ಪ್ರಮುಖ ದಾಖಲೆಗಳ ಪಟ್ಟಿ ಇಲ್ಲಿವೆ...

ಪೂರ್ಣ ಹೆಸರು: ಸಚಿನ್ ರಮೇಶ್ ತೆಂಡೂಲ್ಕರ್
ಜನನ: 24 ಏಪ್ರಿಲ್ 1973
ಪ್ರಾಯ: 36
ಬ್ಯಾಟಿಂಗ್ ಸ್ಟೈಲ್: ಬಲಗೈ ಬ್ಯಾಟ್ಸ್‌ಮನ್
ಬೌಲಿಂಗ್ ಸ್ಟೈಲ್: ಬಲಗೈ ಲೆಗ್ ಹಾಗೂ ಆಫ್ ಸ್ಪಿನ್.


* ಭಾರತದ ಪರ 20 ವರ್ಷಕ್ಕಿಂತಲೂ ಹೆಚ್ಚು ಆಟವಾಡಿದ ಮೊದಲ ಆಟಗಾರ- 1989ರ ಡಿಸೆಂಬರ್ 18ರಂದು ಕ್ರಿಕೆಟ್‌ಗೆ ಪಾದರ್ಪಣೆಗೈದಿದ್ದ ಸಚಿನ್ 2010ರ ಫೆಬ್ರವರಿ 24ರಂದು 20 ವರ್ಷಗಳನ್ನು ಪೂರ್ಣಗೊಳಿಸಿದ್ದರು.

* ಏಕದಿನ ಇತಿಹಾಸದಲ್ಲೇ ಬ್ಯಾಟ್ಸ್‌ಮನ್‌ನಿಂದ ದಾಖಲಾದ ವೈಯಕ್ತಿಕ ಗರಿಷ್ಠ ಮೊತ್ತ. ಈ ಹಿಂದೆ ಸಯೀದ್ ಅನ್ವರ್ ಪಾಕಿಸ್ತಾನ ವಿರುದ್ಧ 194 ಹಾಗೂ ಜಿಂಬಾಬ್ವೆಯ ಚಾರ್ಲ್ಸ್ ಕೊವೆಂಟ್ರಿ ಬಾಂಗ್ಲಾದೇಶ ವಿರುದ್ಧ ಅಜೇಯ 194 ರನ್ ಗಳಿಸಿದ್ದು ಗರಿಷ್ಠ ಮೊತ್ತವಾಗಿತ್ತು.

* ವೈಯಕ್ತಿಕ ಗರಿಷ್ಠ ಮೊತ್ತ (ದ.ಆಫ್ರಿಕಾ ವಿರುದ್ಧ ಅಜೇಯ 200, 25 ಬೌಂಡರಿ, 3 ಸಿಕ್ಸರ್.). ಈ ಹಿಂದೆ ನ್ಯೂಜಿಲೆಂಡ್ ವಿರುದ್ಧ 1999ರಲ್ಲಿ ಅಜೇಯ 186 ಗಳಿಸಿದ್ದು ಗರಿಷ್ಠ ಮೊತ್ತವಾಗಿತ್ತು.

* ಏಕದಿನ ಇತಿಹಾಸದಲ್ಲೇ ಚೊಚ್ಚಲ ದ್ವಿಶತಕದ ಸಾಧನೆ.

* ಏಕದಿನದಲ್ಲಿ ಅತ್ಯಧಿಕ ರನ್- ಪಂದ್ಯ-442, ರನ್- 17,598, ಸರಾಸರಿ- 45.12.

* ಏಕದಿನ ಹಾಗೂ ಟೆಸ್ಟ್‌ನಲ್ಲಿ ಅತ್ಯಧಿಕ ಶತಕದ ಸಾಧನೆ - 46 ಹಾಗೂ 47 (ಒಟ್ಟು 93, ಒಂದು ದ್ವಿಶತಕ)

* ದಕ್ಷಿಣ ಆಫ್ರಿಕಾ ವಿರುದ್ಧ ಅತ್ಯಧಿಕ ರನ್ ಹಾಗೂ ಶತಕ ಬಾರಿಸಿದ ಮೊದಲ ಬ್ಯಾಟ್ಸ್‌ಮನ್-
54 ಏಕದಿನಗಳಲ್ಲಿ 1859 ರನ್ (ನಾಲ್ಕು ಶತಕ, ಸರಾಸರಿ 35.07).

* ಆಸ್ಟ್ರೇಲಿಯಾ ವಿರುದ್ಧ ಅತ್ಯಧಿಕ ರನ್ ಹಾಗೂ ಶತಕ ದಾಖಲಿಸಿದ ಮೊದಲ ಬ್ಯಾಟ್ಸ್‌ಮನ್- 67 ಪಂದ್ಯಗಳಲ್ಲಿ 3005ರನ್ (ಒಂಬತ್ತು ಶತಕ, ಸರಾಸರಿ 46.23).

* ಶ್ರೀಲಂಕಾ ವಿರುದ್ಧ ಅತ್ಯಧಿಕ ರನ್ ಹಾಗೂ ಶತಕ ಬಾರಿಸಿದ ಮೊದಲ ಬ್ಯಾಟ್ಸ್‌ಮನ್- 78 ಏಕದಿನಗಳಲ್ಲಿ 2965 ರನ್ (ಎಂಟು ಶತಕ, ಸರಾಸರಿ 45.61)

* ಕ್ಯಾಲೆಂಡರ್ ವರ್ಷವೊಂದರಲ್ಲಿ ಏಳು ಬಾರಿ ಸಾವಿರ ರನ್ನುಗಳ ಸಾಧನೆ (1994, 1196, 1997, 1998, 2000. 2003 ಮತ್ತು 2007)

* ಇನ್ನಿಂಗ್ಸ್‌ವೊಂದರಲ್ಲಿ ಅತ್ಯಧಿಕ ಬೌಂಡರಿಗಳ ದಾಖಲೆ (25, ದ.ಆಫ್ರಿಕಾ ವಿರುದ್ಧ)

* ಐದು ಬಾರಿ 150+ ಸಾದನೆ (186*, 152, 163, 175 ಮತ್ತು 200*)

* ಫೈನಲ್‌ ಪಂದ್ಯದಲ್ಲಿ ಅತ್ಯಧಿಕ ಶತಕದ ಸಾಧನೆ- 6 (ಆರು ಪಂದ್ಯಗಳಲ್ಲೂ ಭಾರತ ವಿಜಯಿಯಾಗಿತ್ತು.)

* ಅರ್ಧಶತಕಗಳ ದಾಖಲೆ- 93, 50+ ರನ್- 139 ಬಾರಿ (46ಶತಕ, 96 ಅರ್ಧಶತಕ)

* ವಿಶ್ವಕಪ್‌ ಪಂದ್ಯಗಳಲ್ಲಿ ಅತೀ ಹೆಚ್ಚು ಅರ್ಧಶತಕ - 13

* ಅತ್ಯಧಿಕ ಪಂದ್ಯಶ್ರೇಷ್ಠ ಪ್ರಶಸ್ತಿ- 61, ಅತ್ಯಧಿಕ ಸರಣಿಶ್ರೇಷ್ಠ ಪುರಸ್ಕಾರ- 15

* ಕ್ಯಾಲೆಂಡರ್ ವರ್ಷವೊಂದರಲ್ಲಿ ಅತ್ಯಧಿಕ ಶತಕ ಹಾಗೂ ರನ್- 9 ಶತಕ, 1,894 ರನ್ (1998).

* 2003ರ ವಿಶ್ವಕಪ್‌ನಲ್ಲಿ ಸರಣಿಶ್ರೇಷ್ಠ ಪ್ರಶಸ್ತಿ.

* ಕ್ರಿಕೆಟ್ ಜೀವನದಲ್ಲಿ 30ಸಾವಿರಕ್ಕಿಂತಲೂ ಹೆಚ್ಚು ರನ್

ಪ್ರಶಸ್ತಿ ಪಟ್ಟಿ:

1994- ಅರ್ಜುನ ಪ್ರಶಸ್ತಿ
1997- ವಿಸ್ಡನ್ ಆಫ್ ದಿ ಈಯರ್ ಅವಾರ್ಡ್
1997/98- ರಾಜೀವ್ ಗಾಂಧಿ ಖೇಲ್ ರತ್ನ.
1999- ಪದ್ಮ ಶ್ರೀ
2008- ಪದ್ಮ ವಿಭೂಷನ್.

No comments: