VISHWA KANNADIGA NEWS - ವಿಶ್ವ ಕನ್ನಡಿಗ ನ್ಯೂಸ್

ವಿಶ್ವ ಕನ್ನಡಿಗ ನ್ಯೂಸ್ ಈಗ ಹೊಸ ತಾಣದಲ್ಲಿ

ಆತ್ಮೀಯ ಓದುಗರೇ ವಿಶ್ವ ಕನ್ನಡಿಗ ನ್ಯೂಸ್ ಓದಲು ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿರಿ...





http://www.vknewz.com

Feb 20, 2010

ಅಂಗವಿಕಲ ಮಕ್ಕಳು, ಅಪಘಾತಕ್ಕೀಡಾದ ಪತಿ ಎಲ್ಲರನ್ನೆತ್ತಿ ಸಾಗಿಸುವಳು ಈ ಮಹಾತಾಯಿ!



- ಅಶ್ರಫ್‌ ವಾಲ್ಪಾಡಿ
ಆಕೆಯ ಪ್ರಾಯ ಈಗ ಪ್ರೌಢತೆ ಯಲ್ಲಿದೆ ಕನಸುಗಳು ಆಕಾಶದೆ ತ್ತರಕ್ಕಿದೆ. ಆದರೆ ದುರಂತ ಎಂದರೆ ಆಕೆ ಚನಾ ಶಕ್ತಿಯೇ ಇಲ್ಲದ ಪರವಾ ಲಂಬಿ.ಇದು ಕಡಂದಲೆಯ 16ರ ತರುಣಿಯೋರ್ವಳ ಅಸಹಾಯಕ ಕಥೆ. ವರ್ಷ 16 ಆದರೂ ತಾಯಿಗೆ ಮಾತ್ರ ಆಕೆ ಇನ್ನೂ ಮಗುವೇ. ಪರಿಣಾಮ ಆಕೆಯನ್ನು ಸಣ್ಣ ಮಗುವಿ ನಂತೆ ಅತ್ತಿತ್ತ ಎತ್ತಿಕೊಂಡೇ ಹೋಗಬೇ ಕಾದ ಪರಿಸ್ಥಿತಿ. ಇದು ಆಕೆಯೋರ್ವಳ ಕಥೆಯಲ್ಲ, ನಿಮಿಷಗಳ ಅಂತರದಲ್ಲಿ ಹುಟ್ಟಿದ ಆಕೆಯ ಅಣ್ಣ ಕೂಡಾ ಅಂಗವಿಕಲ. ಇವೆಲ್ಲದರ ನಡುವೆ ಇವರ ತಂದೆಯ ಅವಸ್ಥೆ ಮತ್ತೊಂದು. ಅವರು ಎರಡೆರಡು ಬಾರಿ ಅಪಘಾತಕ್ಕೀಡಾಗಿ ಸೋತವರು. ಹೀಗಾಗಿ ಇವರೆಲ್ಲರ ಜೀವನ ನಿರ್ವಹಣೆಯ ಜವಾಬ್ದಾರಿ ಮನೆಯ ಯಜಮಾನಿ ಮೇಲೆ. ಅದೂ ಬೀಡಿಯನ್ನೇ ನಂಬಿ. ಇಂತಹ ದುರಂತ ಸ್ಥಿತಿ ಈ ಕುಟುಂಬದ್ದಾದರೂ ಇವರತ್ತ ಕಣ್ಣೆತ್ತಿ ನೋಡುವವರಿಲ್ಲ. ಈ ಕುಟುಂಬದ ಕರುಣಾಜನಕದ ಕಥೆ ಮಾತ್ರ ಈ ಭಾಗದ ಯಾವ ಜನಪ್ರತಿನಿಧಿಗಳ ಕಣ್ಣಿಗೂ ಕಾಣಿಸದಂತಿದೆ. ಜಾತಿ ಸಂಘಟನೆಗಳ ನೆರವೂ ದೊರೆತ್ತಿಲ್ಲ. ಈ ದುರಂತ ಕುಟುಂಬಕ್ಕೀಗ ಆಸರೆ ಅಶ್ವಿನಿ ಶೆಟ್ಟಿ. ಮೂಲತಃ ತೋಡಾರಿನವರು. ಕಡಂದಲೆಯ ಅಶೋಕ ಶೆಟ್ಟಿ ಎಂಬವರ ಕೈ ಹಿಡಿದು ಅವಳಿ ಮಕ್ಕಳನ್ನು ಪಡೆದವರು. ವಿಪರ್ಯಾಸವೆಂದರೆ ಈ ಅವಳಿ ಮಕ್ಕಳಲ್ಲಿ ಗಂಡು ಮಗು ಅರುಣಾ, ಹೆಣ್ಣು ಮಗಳು ಅಕ್ಷಿತಾ. ಇಬ್ಬರೂ ಅಂಗವಿಕಲರು. ಅಕ್ಷಿತಾಳಿಗೆ ಮಾತು ಬರೋಲ್ಲ. ಜೊತೆಗೆ ಕೈಕಾಲುಗಳಲ್ಲೂ ಬಲವಿಲ್ಲ ಹುಟ್ಟು ಅಂಗವಿಕಲೆ. ಆಕೆಗೀಗ ವರ್ಷ 16ರಾದರೂ ಆಕೆಯ ಎಲ್ಲಾ ಕೆಲಸಗಳನ್ನೂ ತಾಯಿ ಅಶ್ವಿನಿಯವರೇ ಮಾಡಬೇಕು. ನಡೆದಾಡಲಾಗದೆ ಅಸಹಾಯಕಳಾಗಿರುವ ಅಕ್ಷಿತಾಳನ್ನು ಎತ್ತಿಕೊಂಡೇ ಹೋಗಬೇಕಾದಂತಹ ಅನಿವಾರ್ಯತೆ. ಮನೆಬಿಟ್ಟು ಮತ್ತೆಲ್ಲೂ ಹೋಗುವಂತಿಲ್ಲ.

ಇನ್ನು ಅರುಣನ ಕಥೆಯೇ ಬೇರೆ. ಈತನಿಗೂ ಕಾಲುಗಳಲ್ಲಿ ಬಲವಿಲ್ಲ. ಮಾತುಗಳೂ ಅಸ್ಪಷ್ಟ. ಈತನನ್ನು ಕೂಡಾ ನಿತ್ಯ ಕೈಹಿಡಿದುಕೊಂಡು, ಕೆಲವೊಮ್ಮೆ ಎತ್ತಿಕೊಂಡು ಶಾಲೆಗೆ ಕಳುಹಿಸಿಕೊಡಬೇಕಾದ ಜವಾಬ್ದಾರಿಯೂ ಅಶ್ವಿನಿ ಮೇಲಿತ್ತು. ಆದರೆ ತನಗಾಗಿ ತನ್ನ ತಾಯಿ ಪಟ್ಟ ಕಷ್ಟ, ಪರಿಶ್ರಮವೆಲ್ಲದಕ್ಕೂ ಅರುಣ ಅಡ್ಡಿಯಾಗಲಿಲ್ಲ. ಇಷ್ಟೆಲ್ಲಾ ಅಂಗವೈಕಲ್ಯತೆಯ ನಡುವೆಯೂ ಕಳೆದ ವರ್ಷದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಪಾಸಾಗಿ ಗಮನ ಸೆಳೆದಿದ್ದಾನೆ. ತಿಂಗಳಿಗೆ 900 ರೂ. ರಿಕ್ಷಾ ವೆಚ್ಚ ನೀಡಿ ಅರುಣನನ್ನು ಶಾಲೆಗೆ ಕಳುಹಿಸಿದ್ದಕ್ಕೆ ಸಾರ್ಥಕವೆನಿಸಿತು.

ಇನ್ನು ಅಶ್ವಿನಿಯವರ ಗಂಡನ ಕಥೆ ಮತ್ತೊಂದು. ಅಶೋಕ ಶೆಟ್ಟಿಯವರು ಕಡಂದಲೆಯವರಾದರೂ ಇರುವುದು ಮುಂಬೈಯಲ್ಲಿ. ಎರಡೆರಡು ಬಾರಿ ಅಪಘಾತಕ್ಕೀಡಾಗಿ ತನ್ನ ಕಾಲಿನ ಬಲವನ್ನೇ ಕಳೆದುಕೊಂಡಿದ್ದಾರೆ. ಅವರದ್ದೂ ಅಸಹಾಯಕ ಸ್ಥಿತಿ.

ಈ ಇಬ್ಬರು ಮಕ್ಕಳ ಕರುಣಾಜನಕ ಕಥೆಯ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಪಾಲೇಮಾರ್‌ ಅವರಿಗೆ ಮೂಡಬಿದ್ರೆಯಲ್ಲಿ ನಡೆದ ಸಮಾರಂಭವೊಂದರಲ್ಲಿ ಮನವರಿಕೆ ಮಾಡಲಾಗಿದೆ. ಇವರಿಗೆ ಒಂದು ಸಾವಿರ ಬರುವಂತೆ ಮಾಡಿ ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದ್ದರು. ಅಧಿಕಾರಿಗಳು ಸರಿ ಸಾರ್‌ ಎಂದು ತಲೆಯಾಡಿಸಿದ್ದರು. ಅದಕ್ಕೂ ಮುಂಚೆ ಶಾಸಕ ಅಭಯಚಂದ್ರರು ಪಾಲಡ್ಕ ಗ್ರಾ.ಪಂ. ಕಾರ್ಯದರ್ಶಿಯನ್ನೂ ತರಾಟೆಗೆ ತೆಗೆದುಕೊಂಡಿದ್ದರು. ಆದರೆ ಅಧಿಕಾರಿಗಳು ಮಾತ್ರ ಹೌದ ಬಸವ ಹೌದು, ಅಲ್ಲ ಬಸವ ಅಲ್ಲ ಎಂಬಂತೆ ತಲೆಯಾಡಿಸುತ್ತಾರೇ ವಿನಹ ಇಂತಹ ಅಸಹಾಯಕರ ಬಗ್ಗೆ ಅವರಿಗೆ ಮತ್ತೆ ಕಾಳಜಿ ಇರುವುದಿಲ್ಲ.

ಈಗ ಈ ಅವಳಿ ಮಕ್ಕಳ ಭವಿಷ್ಯಕ್ಕೆ ಬೇಕಾಗಿರುವುದು ಒಂದಿಷ್ಟು ಆರ್ಥಿಕ ಸಹಕಾರ. ಕುಟುಂಬದ ಸರ್ವ ಜವಾಬ್ದಾರಿಯನ್ನು ನಿರ್ವಹಿಸಬೇಕಾದ ಅಗತ್ಯವೀಗ ಅಶ್ವಿನಿ ಮೇಲಿದೆ. ಅದು ಬೀಡಿ ಕಟ್ಟಿ, ಇದರಿಂದ ಎಷ್ಟು ನಿರೀಕ್ಷಿಸಬಹುದು? ಸರಕಾರ ಕೂಡಾ ಇಲ್ಲಸಲ್ಲದಕ್ಕೆ ಬೇಕಾದಷ್ಟು ಹಣ ಖರ್ಚು ಮಾಡುತ್ತಿರಬೇಕಾದರೆ ಇಂತಹ ಅಸಹಾಯಕರಿಗೆ ನೆರವು ದೊರೆಯದ್ದೆ ದುರಂತ. ಸ್ಥಳೀಯ ಜನಪ್ರತಿನಿಧಿಗಳು ಇವರಿಗೆ ಸರಕಾರದ ನೆರವು ದೊರಕಿಸುವ ಮನಸ್ಸು ಮಾಡಿದರೆ ಮತ್ತು ಸಂಘ ಸಂಸ್ಥೆಗಳು, ಸ್ವಜಾತಿ ಬಾಂಧವರು ಕೂಡಾ ಸಹಕಾರ ನೀಡಿದಲ್ಲಿ ಅಶ್ವಿನಿಯವರ ಹೊರೆ ಒಂದಿಷ್ಟು ಕಡಿಮೆಯಾಗಬಹುದು.

ಯಾರ ನೆರವು ಇಲ್ಲದೆ ಅಶ್ವಿನಿ ಹದಿನಾರು ವರುಷ ಕಳೆದಿದ್ದಾಳೆ. ಈಗವರು ಬಳಲಿ ಹೋಗಿದ್ದಾರೆ. ಸಂಸಾರದ ಹೊರೆ ಹೊತ್ತು ನಲುಗಿ ಹೋಗಿದ್ದಾರೆ. ಸಹೃದಯಿಗಳ ನೆರವು ನಿರೀಕ್ಷಿಸುತ್ತಿದ್ದಾರೆ.

ನಿಮ್ಮ ಬೊಗಸೆ ನೆರವನ್ನು ಅಶ್ವಿನಿ ಶೆಟ್ಟಿ ತಿ/ ಅಶೋಕ ಶೆಟ್ಟಿ, ಪಡೀಲ್‌ ಬಾಕ್ಯಾರ್‌ ದರ್ಖಾಸು ಮನೆ, ತೋಡಾರು ಗ್ರಾಮ, ಮಿಜಾರು ಅಂಚೆ ಅಥವಾ ಸಚ್ಚೇರಿಪೇಟೆ ಕೆನರಾ ಬ್ಯಾಂಕ್‌ ಖಾತೆ ಸಂಖ್ಯೆ 6693ಕ್ಕೆ ಕಳುಹಿಸಬಹುದು.

source: jayakirana

No comments: