ಟೆಕ್ಸಾಸ್: ಅಮೇರಿಕಾ ವಿರೋಧಿ ಭಾವನೆಯಿಂದ ಸಾಫ್ಟ್ ವೇರ್ ಎಂಜಿನಿಯರ್ ಒಬ್ಬ ಆತ್ಮಹತ್ಯಾ ದಾಳಿ ನಡೆಸಿ ಸುಮಾರು 190 ಜನ ಕೆಲಸ ಮಾಡುತ್ತಿದ್ದ ಐಆರ್‌ಎಸ್ ರೆವಿನ್ಯೂ ಕಟ್ಟಡದ ಮೂರನೇ ಮಹಡಿಗೆ ವಿಮಾನ ಚಲಾಯಿಸಿ ಡಿಕ್ಕಿ ಹೊಡೆದ ಘಟನೆ ನಿನ್ನೆ ತಡರಾತ್ರಿ ನಡೆದಿದೆ. ಘಟನೆಯಲ್ಲಿ ಗಾಯಗೊಂಡ ವ್ಯಕ್ತಿಗಳಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದ್ದು ಇತರ 13 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆಯಲ್ಲಿ ಒಬ್ಬ ವ್ಯಕ್ತಿ ಕಾಣೆಯಾಗಿದ್ದಾನೆ. ಈ ಘಟನೆಯನ್ನು ಅಮೇರಿಕಾ ವಿರೋಧಿ ಭಯೋತ್ಪಾದಕರ ಕೃತ್ಯ ಎಂದು ನಂಬಲಾಗಿದೆ. ಟೆಕ್ಸಾಸ್‌ನ 7 ಅಂತಸ್ತಿನ ಕಟ್ಟಡದ ಮೂರನೇ ಮಹಡಿಗೆ ಈ ವಿಮಾನ ಅಪ್ಪಳಿಸಿ ಸ್ಪೋಟ ಸಂಭವಿಸಿದೆ. ಫೈಲೆಟನನ್ನು ಸಾಪ್ಟ್ ವೇರ್ ಎಂಜಿನಿಯರ್ ಜೋಸೆಫ್ ಸ್ಟಾಕ್(53) ಎಂದು ಗುರುತಿಸಲಾಗಿದೆ. ಈತನ ಈ ದುಷ್ಕತ್ಯ ನಡೆಸುವ ಮುನ್ನ ತನ್ನ ಮನೆಗೆ ಬೆಂಕಿ ಹಚ್ಚಿದ್ದ. ಜಾರ್ಜ್‌ಟೌನ್ ವಿಮಾನ ನಿಲ್ದಾಣದಿಂದ ವಿಮಾನ ಹಾರಾಟ ನಡೆಸಿತ್ತು. ಇತ್ತೀಚೆಗಷ್ಟೇ ಉಗ್ರರು ಅಮೇರಿಕಾದ ಮೇಲೆ ದಾಳಿ ನಡೆಸುವ ಬೆದರಿಕೆ ಒಡ್ಡಿದ್ದರು.
source: jayakirana
Subscribe to:
Post Comments (Atom)
No comments:
Post a Comment