ಮೊದಲ ಇನ್ನಿಂಗ್ಸ್‌ನಲ್ಲಿ 347 ರನ್ನುಗಳ ಬೃಹತ್ ಹಿನ್ನೆಡೆಯೊಂದಿಗೆ ಅಂತಿಮ ದಿನದಾಟ ಮುಂದುವರಿಸಿದ ಪ್ರವಾಸಿ ದಕ್ಷಿಣ ಆಫ್ರಿಕಾ ಊಟದ ವಿರಾಮದ ವೇಳೆಗೆ 70 ಓವರುಗಳಲ್ಲಿ ಐದು ವಿಕೆಟ್ ಕಳೆದುಕೊಂಡು 164 ರನ್ ಗಳಿಸಿದ್ದು, ಪಂದ್ಯ ಉಳಿಸಿಕೊಳ್ಳಲು ಪರದಾಡುತ್ತಿದೆ.
115/3 ಎಂಬಲ್ಲಿದ್ದ ದಿನದಾಟ ಮುಂದುವರಿಸಿದ ಪ್ರವಾಸಿಗರಿಗೆ ಆಶೀಮ್ ಆಮ್ಲಾ ಮತ್ತು ಆಶ್ವೆಲ್ ಪ್ರಿನ್ಸ್ ಉತ್ತಮ ಆರಂಭವನ್ನೇ ಒದಗಿಸಿದ್ದರು. ಇವರಿಬ್ಬರು ನಾಲ್ಕನೇ ವಿಕೆಟ್‌ಗೆ 47 ರನ್ನುಗಳ ಜೊತೆಯಾಟ ನೀಡಿದ್ದರು.
ಆದರೆ ಈ ಹಂತದಲ್ಲಿ 23 ರನ್ ಗಳಿಸಿದ ಪ್ರಿನ್ಸ್ ಸ್ಪಿನ್ನರ್ ಹರಭಜನ್ ಸಿಂಗ್‌ಗೆ ವಿಕೆಟ್ ಒಪ್ಪಿಸಿದರು. ನಂತರ ಬಂದ ಅಬ್ರಹಾಂ ಡಿ ವಿಲಿಯರ್ಸ್‌ರನ್ನು (3) ಅಮಿತ್ ಮಿಶ್ರಾ ಎಲ್‌ಬಿಡಬ್ಲ್ಯು ಬಲೆಗೆ ಸಿಲುಕಿಸಿದರು.
ಆಕರ್ಷಕ ಅರ್ಧಶತಕ ಬಾರಿಸಿರುವ ಆಶೀಮ್ ಆಮ್ಲಾ (68*) ಮತ್ತು ಜೆ.ಪಿ. ಡ್ಯುಮಿನಿ (0*) ಬ್ಯಾಟಿಂಗ್ ಮುಂದುವರಿಸಿದ್ದಾರೆ. ಇದು ಟೆಸ್ಟ್ ಕ್ರಿಕೆಟ್‌ನಲ್ಲಿ ಆಶೀಮ್ ಬ್ಯಾಟ್‌ನಿಂದ ದಾಖಲಾಗುತ್ತಿರುವ ಸತತ ಐದನೇ ಅರ್ಧಶತಕವಾಗಿದೆ. 197 ಎಸೆತಗಳನ್ನು ಎದುರಿಸಿರುವ ಆಮ್ಲಾ ಆತಿಥೇಯರಿಗೆ ಕಗ್ಗಂಟಾಗಿ ಪರಿಣಮಿಸಿದ್ದಾರೆ.
ಗಾಯಾಳು ಜಹೀರ್ ಅಭಾದದಲ್ಲಿ ಪ್ರಭಾವಿ ಬೌಲಿಂಗ್ ದಾಳಿ ಸಂಘಟಿಸುತ್ತಿರುವ ಸ್ಪಿನ್ನರುಗಳು ಭಾರತೀಯ ಪಾಳೆಯದಲ್ಲಿ ನಿರೀಕ್ಷೆ ಮೂಡಿಸಿದ್ದಾರೆ. ಆದರೆ ಲಯ ಕಾಯ್ದುಕೊಳ್ಳುವಲ್ಲಿ ಇಶಾಂತ್ ಶರ್ಮಾ ಪೂರ್ಣ ವಿಫಲರಾಗಿದ್ದಾರೆ.
ಮಳೆ ಹಾಗೂ ಮಂದ ಬೆಳಕಿನಿಂದಾಗಿ ನಾಲ್ಕನೇ ದಿನದಾಟ ಬಹುತೇಕ ರದ್ದುಗೊಂಡಿತ್ತಲ್ಲದೆ ಕೇವಲ 34.1 ಓವರುಗಳ ಪಂದ್ಯಾಟವಷ್ಟೇ ನಡೆದಿತ್ತು. ಆದರೆ ಪ್ರಕಾಶಮಾನವಾದ ವಾತಾವರಣದೊಂದಿಗೆ ಇಂದು ಬೆಳಗ್ಗೆ 8.45ಕ್ಕೆ ಆಟ ಆರಂಭಗೊಂಡಿತ್ತು.
ಭೋಜನ ವಿರಾಮದ ನಂತರ ಗರಿಷ್ಠ 63 ಓವರುಗಳ ಪಂದ್ಯ ಸಾಗಬಹುದೆಂದು ನಿರೀಕ್ಷಿಸಲಾಗುತ್ತಿದ್ದು, ಪಂದ್ಯ ಗೆಲ್ಲಲು ಧೋನಿ ಪಡೆ ದಿಟ್ಟ ಹೋರಾಟವನ್ನೇ ಪ್ರದರ್ಶಿಸಬೇಕಾಗಿದೆ.
ಭಾರತ ಈ ಪಂದ್ಯ ಗೆದ್ದರಷ್ಟೇ ಅಗ್ರಸ್ಥಾನ ಉಳಿಸಿಕೊಳ್ಳುವುದರೊಂದಿಗೆ ಐಸಿಸಿ ವಾರ್ಷಿಕ ಚಾಂಪಿಯನ್ ಪಟ್ಟ ಆಲಂಕರಿಸಲಿದೆ.
ಜಹೀರ್ ಗಾಯಾಳು...
ನಾಲ್ಕನೇ ದಿನದಾಟದಲ್ಲಿ ಬೌಲಿಂಗ್ ವೇಳೆ ವೇಗಿ ಜಹೀರ್ ಖಾನ್ ಗಾಯಕ್ಕೊಳಗಾಗಿರುವುದು ಟೀಮ್ ಇಂಡಿಯಾದ ಹಿನ್ನೆಡೆಗೆ ಕಾರಣವಾಗಿದೆ. ಜಹೀರ್ ಸೇವೆ ಮುಂಬರುವ ಏಕದಿನ ಸರಣಿಗೂ ಲಭ್ಯವಾಗುತ್ತಿಲ್ಲ. ಅವರ ಬದಲು ಎಸ್. ಶ್ರೀಶಾಂತ್‌ರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.
Source - Webdunia
Subscribe to:
Post Comments (Atom)
No comments:
Post a Comment