ದಕ್ಷಿಣ ಆಫ್ರಿಕಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಗೆ ಭಾರತೀಯ ತಂಡವನ್ನು ಪ್ರಕಟಿಸಲಾಗಿದ್ದು, ಯುವರಾಜ್ ಸಿಂಗ್ ಬೆನ್ನಿಗೇ ಗೌತಮ್ ಗಂಭೀರ್ ಕೂಡ ಗಾಯಗೊಂಡು ತಂಡದಿಂದ ಹೊರಗುಳಿಯಲಿದ್ದರೆ, ಆಲ್‌ರೌಂಡರ್ ಯೂಸುಫ್ ಪಠಾಣ್ ಮರಳಿ ಅವಕಾಶ ಪಡೆದಿದ್ದಾರೆ.
ತಮಿಳುನಾಡಿನ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರು ತಂಡಕ್ಕೆ ಸೇರ್ಪಡೆಯಾಗಿರುವ ಹೊಸ ಮುಖ. ಹರಭಜನ್ ಸಿಂಗ್ ಅವರು ಮೊದಲೆರಡು ಪಂದ್ಯಗಳಿಗೆ ಲಭ್ಯರಿಲ್ಲದೇ ಇರುವುದರಿಂದ ಈ ಸೇರ್ಪಡೆ.
ಆಲ್‌ರೌಂಡರ್ ಯುವರಾಜ್ ಸಿಂಗ್ ಬಾಂಗ್ಲಾದಲ್ಲಿ ಕೈಬೆರಳಿಗೆ ಗಾಯ ಮಾಡಿಕೊಂಡು ಈಗಾಗಲೇ ಸರಣಿಯಿಂದ ಹೊರಗುಳಿದಿರುವ ಆಘಾತದ ಬೆನ್ನಿಗೇ, ಆರಂಭಿಕ ಆಟಗಾರ ಗೌತಮ್ ಗಂಭೀರ್ ಕೂಡ ಟೆಸ್ಟ್ ಪಂದ್ಯದ ವೇಳೆ ಗಾಯ ಮಾಡಿಕೊಂಡು, ಸರಣಿಯಲ್ಲಿ ಆಡುತ್ತಿಲ್ಲ.
ಏಕದಿನ ಸರಣಿಯು ಫೆ.21ರಿಂದ ಜೈಪುರದ ಪಂದ್ಯದೊಂದಿಗೆ ಆರಂಭವಾಗಲಿದೆ.
ತಂಡ ಈ ಕೆಳಗಿನಂತಿದೆ:
ಮಹೇಂದ್ರ ಸಿಂಗ್ ಧೋನಿ (ನಾಯಕ, ಕೀಪರ್)
ವೀರೇಂದ್ರ ಸೆಹ್ವಾಗ್
ಸಚಿನ್ ತೆಂಡುಲ್ಕರ್
ವಿರಾಟ್ ಕೋಹ್ಲಿ
ಯೂಸುಫ್ ಪಠಾಣ್
ದಿನೇಶ್ ಕಾರ್ತಿಕ್
ರವೀಂದ್ರ ಜಡೇಜಾ
ಸುರೇಶ್ ರೈನಾ
ಜಹೀರ್ ಖಾನ್
ಆಶಿಷ್ ನೆಹ್ರಾ
ಸುದೀಪ್ ತ್ಯಾಗಿ
ಪ್ರವೀಣ್ ಕುಮಾರ್
ಅಮಿತ್ ಮಿಶ್ರಾ
ಅಭಿಷೇಕ್ ನಾಯರ್
Source - Webdunia
Subscribe to:
Post Comments (Atom)
No comments:
Post a Comment