ಇಂದೋರ್, ಫೆ. 19 : ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮಾಡುವುದು ಪಕ್ಷ ಅಧ್ಯತೆ. ಹಿಂದೂಗಳ ಭಾವನೆ ಬಗ್ಗೆ ಔದಾರ್ಯ ತೋರುವ ಮೂಲಕ ಮುಸ್ಲಿಮರು ಸಮಸ್ಯೆಗೆ ಸಮರ್ಪಕ ಪರಿಹಾರವನ್ನು ಒದಗಿಸಬೇಕು ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ ಮನವಿ ಮಾಡಿಕೊಂಡರು.
ಮೂರು ದಿನಗಳ ಕಾಲ ನಡೆಯುತ್ತಿರುವ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಮಾತನಾಡುತ್ತಿದ್ದ ಅವರು, ದಲಿತರು ಮತ್ತು ಅಲ್ಪಸಂಖ್ಯಾತರ ಮನವೂಲಿಸುವ ಪಕ್ಷದ ತಳಹದಿಯನ್ನು ವಿಸ್ತರಿಸುವುದು. ಸಂಘಟನೆಯಲ್ಲಿ ಕೆಲಸದ ಹೊಸ ಸಂಸ್ಕೃತಿ ಹುಟ್ಟು ಹಾಕುವುದು ಸೇರಿದಂತೆ ಅವರು ವಿವಿಧ ವಿಷಯಗಳನ್ನು ಪ್ರಸ್ತಾಪಿಸಿದರು.
ಹಿಂದೂಗಳ ಭಾವನೆಗಳಕ್ಕೆ ಔದಾರ್ಯ ತೋರಬೇಕು ಹಾಗೂ ಭವ್ಯ ರಾಮಮಂದಿರ ನಿರ್ಮಾಣಕ್ಕೆ ಅನುವು ಮಾಡಿಕೊಡಬೇಕು ಎಂದು ಮುಸ್ಲಿಂ ಸಮುದಾಯಕ್ಕೆ ಮನವಿ ಮಾಡಿತ್ತೇನೆ. ವಿವಾದಾಸ್ಪದ ಸ್ಥಳದ ಕುರಿತು ನಿಮ್ಮ ಹಕ್ಕನ್ನು ಬಿಟ್ಟುಕೊಟ್ಟರೆ, ಸಮೀಪದ ಭೂಮಿಯಲ್ಲಿ ಭವ್ಯ ಮಸೀದಿ ನಿರ್ಮಾಣಕ್ಕೆ ನಾವು ಸಹಕಾರ ನೀಡುತ್ತೇವೆ ಎಂದು ಗಡ್ಕರಿ ಹೇಳಿದರು.
ಬಿಜೆಪಿ ಮುಸ್ಲಿಂ ವಿರೋಧಿಯಾಗಿದೆ ಎನ್ನುವುದು ತಪ್ಪು, ಹಾಗಿದ್ದರೆ ಮಾಜಿ ಪ್ರಧಾನಿ ವಾಜಪೇಯಿ, ಎಲ್ ಕೆ ಅಡ್ವಾಣಿ ಅವರು ಅಬ್ಧುಲ್ ಕಲಾಂ ಅವರನ್ನು ರಾಷ್ಟ್ರಪತಿಯನ್ನಾಗಿ ಮಾಡುತ್ತಿರಲಿಲ್ಲ ಎಂದು ಅವರು ವಿವರಿಸಿದರು.
source:thatskannada
Feb 19, 2010
Subscribe to:
Post Comments (Atom)
No comments:
Post a Comment