VISHWA KANNADIGA NEWS - ವಿಶ್ವ ಕನ್ನಡಿಗ ನ್ಯೂಸ್

ವಿಶ್ವ ಕನ್ನಡಿಗ ನ್ಯೂಸ್ ಈಗ ಹೊಸ ತಾಣದಲ್ಲಿ

ಆತ್ಮೀಯ ಓದುಗರೇ ವಿಶ್ವ ಕನ್ನಡಿಗ ನ್ಯೂಸ್ ಓದಲು ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿರಿ...





http://www.vknewz.com

Feb 25, 2010

ಅಪಘಾತದಲ್ಲಿ ವಿದ್ಯಾರ್ಥಿನಿ ಬಲಿ






ಶಿರ್ವ: ಇಲ್ಲಿನ ಪಾದೂರಿನಲ್ಲಿ ವಿದ್ಯಾರ್ಥಿನಿಯೊಬ್ಬಳು ಟಿಪ್ಪರ್‌ ಚಾಲಕನ ಅವಾಂತರಕ್ಕೆ ಬಲಿಯಾದ ಹಿನ್ನೆಲೆಯಲ್ಲಿ ಬುಧವಾರ ಸ್ಥಳೀಯರು ಮಜೂರು ಗ್ರಾಮ ಪಂ. ವ್ಯಾಪ್ತಿಯಲ್ಲಿ ಬಂದ್‌ ಆಚರಿಸಿ ಚಾಲಕನ ವಿರುದ್ದ ಪ್ರತಿಭಟನೆ ನಡೆಸಿದರು.
ಶಿರ್ವ ಸೈಂಟ್‌ ಮೇರಿಸ್‌ ಶಾಲೆಯ ಹತ್ತನೇ ಕ್ಲಾಸಿನ ವಿದ್ಯಾರ್ಥಿನಿ ಪಾದೂರು ಮೊಯ್ದೀನ್‌ ಬಾವಾರ ಮಗಳು ಸಮ್ರೀನಾ(15)ಶಾಲೆಯಿಂದ ವಾಪಸಾ ಗುತ್ತಿದ್ದಾಗ, ಟಿಪ್ಪರ್‌ ಡಿಕ್ಕಿ ಹೊಡೆದು ಸ್ಥಳದಲ್ಲಿಯೇ ಮೃತಪಟ್ಟಿದ್ದಳು. ಬುಧವಾರ ಮಜೂರು ಗ್ರಾ.ಪಂ ವ್ಯಾಪ್ತಿಯ ನೂರಾರು ಜನರು ಸ್ವಯಂ ಪ್ರೇರಿತ ಬಂದ್‌ ಆಚರಿಸಿದ್ದು, ಟಿಪ್ಪರ್‌ ಚಾಲಕನ ಬಂಧನಕ್ಕೆ ಆಗ್ರಹಿಸಿದ್ದರು. ಮೃತ ಸಮ್ರೀನಾಳ ಕುಟುಂಬಿಕರಿಗೆ ಟಿಪ್ಪರ್‌ ಮಾಲಕ ಸುರೇಶ್‌ ಶೆಟ್ಟಿ 25ಲಕ್ಷ ರೂ ಪರಿಹಾರ ಧನ ವಿತರಿಸುವಂತೆ ಪ್ರತಿಭಟನಾಕಾರರು ಆಗ್ರಹಿಸಿದರು.
ಮಾಜಿ ಸಚಿವ ವಸಂತ ವಿ. ಸಾಲ್ಯಾನ್‌, ಉಡುಪಿ ಜಿಲ್ಲಾ ಪಂಚಾ ಯತ್‌ ಅಧ್ಯಕ್ಷೆ ಗ್ಲಾಡಿಸ್‌ ಅಲ್ಮೇಡಾ, ತಾ.ಪಂ ಸದಸ್ಯರುಗಳಾದ ಜಗದೀಶ್‌ ಆಚಾರ್ಯ, ಅರುಣ್‌ ಶೆಟ್ಟಿ ಪಾದೂರು, ಜೆಡಿಎಸ್‌ನ ಜಿಲ್ಲಾಧ್ಯಕ್ಷ ದೇವಿ ಪ್ರಸಾದ್‌ ಶೆಟ್ಟಿ, ಕಾಪು ಕ್ಷೇತ್ರ ಬಿಜೆಪಿ ಅಧ್ಯಕ್ಷ ಕುತ್ಯಾರು ನವೀನ್‌ ಶೆಟ್ಟಿ, ಸಾಮಾಜಿಕ ಕಾರ್ಯಕರ್ತ ಲೀಲಾಧರ ಶೆಟ್ಟಿ ಕರಂದಾಡಿ, ವಾಸು ದೇವ ರಾವ್‌, ಕಾಂಗ್ರೆಸ್‌ ಮುಖಂಡ ರಾದ ಗಂಗಾಧರ ಸುವರ್ಣ, ನವೀನ್‌ ಶೆಟ್ಟಿ, ಲುತ್ಪುಲ್ಲಾ ಸಾಹೇಬ್‌, ಲಕ್ಷ್ಮಣ ಪೂಜಾರಿ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಹಾಗೂ ರಾಜಕೀಯ ಮುಖಂಡರು ಗಳು ಪ್ರತಿಭಟನಾ ಸಭೆಯಲ್ಲಿ ಭಾಗವಹಿಸಿದರು.

ಚಾಲಕನ ಸೆರೆ

ವಿದ್ಯಾರ್ಥಿನಿ ಸಮ್ರೀನಾಳನ್ನು ಬಲಿ ತೆಗೆದುಕೊಂಡ ಟಿಪ್ಪರ್‌ ಲಾರಿಯ ಚಾಲಕನನ್ನು ಶಿರ್ವ ಪೊಲೀಸರು ಬುಧವಾರ ಮುಂಜಾನೆ ಬಂಧಿಸಿದ್ದಾರೆ. ಬಂಧಿತ ಆರೋಪಿ ಚಾಲಕನನ್ನು ನಂದಳಿಕೆ ನಿವಾಸಿ ಸುಧೀರ್‌ ಶೆಟ್ಟಿ (26) ಎಂದು ಗುರುತಿಸಲಾಗಿದೆ. ಬಂಧಿತನನ್ನು ಪೊಲೀಸರು ಉಡುಪಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು ಮಾ.9ರವರೆಗೆ ನ್ಯಾಯಾಂಗ ಬಂಧನಕ್ಕೊಳಪಡಿಸಲಾಗಿದೆ.
-jayakirana

No comments: