ನವೀನನ ಪೊಲೀಸ್ ಕಸ್ಟಡಿ ವಿಸ್ತರಣೆ
ಕ್ರಿಮಿನಲ್‌ನನ್ನು ರಕ್ಷಿಸಲು ಅಲೆ ಸುಳ್ಳು ಮಾಹಿತಿ
ಪುತ್ತೂರು: ಕೋಮುಗಲಭೆ ಹರಡುವ ಉದ್ದೇಶದಿಂದ ಗೂಡಂಗಡಿಗಳಿಗೆ ಬೆಂಕಿ ಹಚ್ಚಿರುವುದು ಮತ್ತು ಬಸ್‌ಗಳಿಗೆ ಕಲ್ಲೆಸೆತ ಪ್ರಕರಣಗಳಲ್ಲಿ ಬಂಧಿತನಾಗಿರುವ ಕರಾವಳಿ ಅಲೆ ವರದಿಗಾರ ನವೀನ ಗೌಡ ಮತ್ತು ಆತನ ಸಹಚರ ನಾರಾಯಣನಿಗೆ ನ್ಯಾಯಾಲಯ ನೀಡಿದ್ದ ಒಂದು ದಿನದ ಪೊಲೀಸ್ ಕಸ್ಟಡಿಯನ್ನು ಮತ್ತೆ 14 ದಿನ ವಿಸ್ತರಿಸಿದೆ.ಪೊಲೀಸರು ಆರೋಪಿಗಳಿಗೆ ಹಿಂಸೆ ನೀಡುವ ಸಾಧ್ಯತೆಗಳಿರುವುದರಿಂದ ವಕೀಲರ ಸಮಕ್ಷಮವೇ ವಿಚಾರಣೆ ನಡೆಸಬೇಕು ಎನ್ನು ವ ಷರತ್ತು ವಿಧಿಸಿದೆ ಎಂದು ಹಸಿಹಸಿ ಸುಳ್ಳು ಸುದ್ದಿಯನ್ನು ನಿನ್ನೆಯ ಕರಾವಳಿ ಅಲೆ ಪ್ರಕಟಿಸಿತ್ತು. ತನ್ನ ಪತ್ರಿಕೆಯ ಕ್ರಿಮಿನಲ್ ವರದಿ ಗಾರನನ್ನು ರಕ್ಷಿಸಲು ಮುಂದಾಗಿರುವ ಪತ್ರಿಕೆ ದುರುದ್ದೇಶ ದಿಂದ ಈ ವರದಿ ಪ್ರಕಟಿಸಿತ್ತು. ಈ ವರದಿಗೆ ತದ್ವಿರುದ್ದ ವಾಗಿ ನಿನ್ನೆ ನ್ಯಾಯಾಲಯ ಆರೋಪಿಗೆ ಕಸ್ಟಡಿ ವಿಸ್ತರಿಸಿ ಆದೇಶ ನೀಡಿದೆ. ಈ ನಡುವೆ ಗಾಂಧೀ ಕಟ್ಟೆಯ ಗಾಂಧಿ ಪ್ರತಿಮೆಗೆ ಚಪ್ಪಲಿಹಾರ ಹಾಕಿದ ಘಟನೆಗೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಅರುಣ್ ಪುತ್ತಿಲ ರೊಂದಿಗೆ ನವೀನ್ ಗೌಡ ಸಹಕರಿಸಿದ್ದನೆನ್ನಲಾಗಿದೆ, ಈ ಕುರಿತು ಇನ್ನಷ್ಟೇ ತನಿಖೆ ನಡೆಯಲಿದೆ.
-jayakirana
No comments:
Post a Comment