ನೂತನವಾಗಿ ಬಿಡುಗಡೆಗೊಂಡ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಬ್ಯಾಟಿಂಗ್ ರ‌್ಯಾಂಕಿಂಗ್ ಪಟ್ಟಿಯಲ್ಲಿ ತನ್ನ ಸಹ ಆಟಗಾರ ಗೌತಮ್ ಗಂಭೀರ್ ಸ್ಥಾನ ವಶಪಡಿಸಿಕೊಂಡಿರುವ ಡ್ಯಾಶಿಂಗ್ ಓಪನರ್ ವೀರೇಂದ್ರ ಸೆಹ್ವಾಗ್ ಅಗ್ರಸ್ಥಾನಕ್ಕೇರಿದ್ದಾರೆ.
ಅದೇ ವೇಳೆ ದಕ್ಷಿಣ ಆಫ್ರಿಕಾ ಸರಣಿಯಲ್ಲಿ ಕಳಪೆ ಬ್ಯಾಟಿಂಗ್ ಪ್ರದರ್ಶನ ನೀಡಿದ್ದ ಗಂಭೀರ್ ಐದನೇ ಸ್ಥಾನಕ್ಕೆ ಕುಸಿತ ಕಂಡಿದ್ದಾರೆ.
ಸರಣಿಯ ಎರಡೂ ಟೆಸ್ಟ್‌ಗಳಲ್ಲೂ ಅಮೋಘ ಶತಕ ಬಾರಿಸಿದ್ದ ವೀರೂ ಒಟ್ಟು 863 ಅಂಕಗಳನ್ನು ಹೊಂದಿದ್ದಾರೆ. ದೆಹಲಿಯ ಸಹ ಆಟಗಾರ ಗಂಭೀರ್ ಇದೀಗ 824 ಪಾಂಟಿಂಗ್‌ಗಳಿಗೆ ಕುಸಿತ ಕಂಡಿದ್ದಾರೆ.
ಗಂಭೀರ್ ನಂತರದ ಸ್ಥಾನದಲ್ಲಿರುವ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ಖಾತೆಯಲ್ಲಿ 805 ಅಂಕಗಳಿವೆ. ಸೆಹ್ವಾಗ್‍ರಂತೆಯೇ ದಕ್ಷಿಣ ಆಫ್ರಿಕಾ ಸರಣಿಯಲ್ಲಿ ಲಿಟ್ಲ್ ಮಾಸ್ಟರ್ ಕೂಡಾ ಎರಡು ಶತಕಗಳ ಸಾಧನೆ ಮಾಡಿದ್ದರು.
ಸೆಹ್ವಾಗ್ ನಂತರದ ಸ್ಥಾನದಲ್ಲಿರುವ ದಕ್ಷಿಣ ಆಫ್ರಿಕಾದ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಆಶೀಮ್ ಆಮ್ಲಾ ಕೂಡಾ ರ‌್ಯಾಂಕಿಂಗ್‌ನಲ್ಲಿ ಭರ್ಜರಿ ನೆಗೆತ ಕಂಡಿದ್ದಾರೆ. ಇದೀಗ 842 ಅಂಕ ಹೊಂದಿರುವ ಆಮ್ಲಾ ಸರಣಿಯಲ್ಲಿ ಒಂದು ದ್ವಿಶತಕ ಸೇರಿದಂತೆ ಎರಡು ಶತಕ ಬಾರಿಸಿದ್ದರಲ್ಲದೆ ಸರಣಿಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು.
ಬೌಲಿಂಗ್ ವಿಭಾಗದಲ್ಲಿ ಜಹೀರ್ ಖಾನ್ ಮತ್ತು ಹರಭಜನ್ ಸಿಂಗ್ ಕ್ರಮವಾಗಿ ಆರು ಮತ್ತು ಏಳು ಸ್ಥಾನಗಳನ್ನು ಹಂಚಿಕೊಂಡಿದ್ದಾರೆ. ಈ ಪಟ್ಟಿಯನ್ನು ದಕ್ಷಿಣ ಆಫ್ರಿಕಾದ ಡೇಲ್ ಸ್ಟೈನ್ ಮುನ್ನಡೆಸುತ್ತಿದ್ದಾರೆ.
Subscribe to:
Post Comments (Atom)
No comments:
Post a Comment